Kalki 2898 AD booking; ಬೆಂಗಳೂರಿನಲ್ಲೂ 'ಕಲ್ಕಿ' ಕಿಚ್ಚು; ಟಿಕೆಟ್ ದರ ಡಬಲ್
ಪ್ರಭಾಸ್ ನಟನೆಯ 'ಕಲ್ಕಿ 2989 AD' ಸಿನಿಮಾ ಬಿಡುಗಡೆಗೆ 4 ದಿನ ಬಾಕಿಯಿದೆ. ಈಗಾಗಲೇ ಹಲವೆಡೆ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಕೂಡ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಹೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ದೊಡ್ಡಮಟ್ಟದ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ತೆರೆಗೆ ಬರ್ತಿದೆ. ಕನ್ನಡ ಶೋಗಳ ಸಂಖ್ಯೆ ಕಮ್ಮಿಯಿದ್ದು ತೆಲುಗು, ಹಿಂದಿ ವರ್ಷನ್‌ಗೆ ಹೆಚ್ಚು ಶೋ ಕೊಟ್ಟಿದ್ದಾರೆ. ಇನ್ನು ಬೆಳ್ಳಂಬೆಳಗ್ಗೆ 5 ಗಂಟೆಗೆ ಸಾಕಷ್ಟು ಕಡೆಗಳಲ್ಲಿ ಮೊದಲ ಪ್ರದರ್ಶನ ಆರಂಭವಾಗಿದೆ. ದೊಡ್ಡ ಸಿನಿಮಾ, ಕ್ರೇಜ್ ಇದೆ ಎನ್ನುವ ಕಾರಣಕ್ಕೆ ಟಿಕೆಟ್ ದರ ಹೆಚ್ಚಿಸಲಾಗಿದೆ.

ಅತ್ತ ಆಂಧ್ರ, ತೆಲಂಗಾಣದಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ರಾಜಶೇಖರ್ ನಟನೆಯ 'ಕಲ್ಕಿ' ಎನ್ನುವ ಮತ್ತೊಂದು ಸಿನಿಮಾ ಬಿಡುಗಡೆಯಾಗಿದೆ. ಸಾಕಷ್ಟು ಜನ ಬುಕ್‌ಮೈ ಶೋದಲ್ಲಿ ಟಿಕೆಟ್ ಬುಕ್ ಮಾಡಿ ಶಾಕ್ ಆಗಿದ್ದಾರೆ. ಪ್ರಭಾಸ್ ನಟನೆಯ 'ಕಲ್ಕಿ 2989 AD' ಬದಲು ರಾಜಶೇಖರ್ 'ಕಲ್ಕಿ' ಟಿಕೆಟ್ ಬುಕ್ ಆಗ್ತಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ ಫಿಕ್ಷನ್ 'ಕಲ್ಕಿ 2989 AD' ಸಿನಿಮಾ ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಬಜೆಟ್ 500 ಕೋಟಿ ದಾಟಿರುವ ಅಂದಾಜಿದೆ.
ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ ಎನಿಸಿಕೊಂಡಿದೆ. ಆದರೆ ಚಿತ್ರದ ಸ್ಯಾಂಪಲ್ಸ್ ತಕ್ಕ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿಲ್ಲ. ಆದರೂ ಹಾಲಿವುಡ್ ರೇಂಜ್ ಮೇಕಿಂಗ್‌ನಿಂದ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು 4 ದಿನ ಮೊದ್ಲೆ ಬೆಂಗಳೂರಿನ ಕೆಲವೆಡೆ ಬೆಳಗ್ಗೆ 5 ಗಂಟೆ ಶೋಗಳು ಸೋಲ್ಡ್‌ಔಟ್ ಆಗಿದೆ.

ಟಿಕೆಟ್ ದರವನ್ನು 400 ರೂಪಾಯಿ, 500 ರೂಪಾಯಿ, 700 ರೂಪಾಯಿಗೆ ಹೆಚ್ಚಿಸಲಾಗಿದೆ. ಆದರೂ ಪ್ರಭಾಸ್ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. 'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ನಟಿಸಿದ ಯಾವುದೇ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. 'ಸಲಾರ್' ಇದ್ದಿದ್ದರಲ್ಲಿ ಗೆಲುವಿನ ದಡ ಸೇರಿತ್ತು. ಹಾಗಾಗಿ ಸಹಜವಾಗಿಯೇ 'ಕಲ್ಕಿ 2989 AD' ಮೇಲೆ ಭಾರೀ ಒತ್ತಡ ಇದೆ.
ಚಿತ್ರದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯದ ಕಥೆಯನ್ನು ನಾಗ್ ಅಶ್ವಿನ್ ಕಟ್ಟಿಕೊಡುತ್ತಿದ್ದಾರೆ. ಮಹಾಭಾರತದ ಅಂತ್ಯದಿಂದ ಶುರುವಾಗುವ ಕಥೆ ಕಲಿಯುಗದಲ್ಲಿ ಮುಂದುವರೆಯಲಿದೆ. ಕಲಿಯುಗದಲ್ಲಿ ಇನ್ನು ಹಲವು ವರ್ಷಗಳ ಮುಂದಕ್ಕೆ ಕರೆದುಕೊಂಡು ಹೋಗಲಿದೆ. ಕಾಶಿ, ಶಂಬಲ, ಕಾಂಪ್ಲೆಕ್ಸ್ ಎನ್ನುವ ಮೂರು ಲೋಕಗಳಲ್ಲಿ ಚಿತ್ರದ ಕಥೆ ಸಾಗುತ್ತದೆ. ಹಾಲಿವುಡ್ ಸಿನಿಮಾಗಳನ್ನು ಕಣ್ಮುಂದೆ ತರುವಂತೆ ಸಿನಿಮಾ ಮೂಡಿ ಬಂದಿದೆ.
'ಮಹಾನಟಿ' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ನಾಗ್ ಅಶ್ವಿನ್ ಮೇಲೆ ಭಾರೀ ನಿರೀಕ್ಷೆಯಿದೆ. ಜೊತೆಗೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಇರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಿದೆ. ಚಿತ್ರದಲ್ಲಿ ಭೈರವ ಆಗಿ ಪ್ರಭಾಸ್ ಮಿಂಚಿದ್ದಾರೆ. ಚಿಟ್ಟಿ ಎನ್ನುವ ಒಂದು ರೋಬೊ ಪಾತ್ರವೂ ಚಿತ್ರದಲ್ಲಿದೆ. ಇನ್ನು ಮಹಾಭಾರತದ ಅಶ್ವತ್ಥಾಮನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಭೈರವ-ಅಶ್ವತ್ಥಾಮ ಕಾದಾಟ ಕುತೂಹಲ ಮೂಡಿಸಿದೆ.


Click it and Unblock the Notifications











