ಪ್ರಭಾಸ್ 'ಕಲ್ಕಿ' ಅವತಾರ ನೋಡಲು ಜಪಾನ್‌ನಲ್ಲಿ ನೂಕುನುಗ್ಗಲು, ಜವಾನ್, ಪಠಾಣ್, ಬಾಹುಬಲಿ ದಾಖಲೆ ಪುಡಿಪುಡಿ...!

ಕೇವಲ ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರದಲ್ಲಿ ಕೂಡ ತಮ್ಮ ಚಾಪು ಮೂಡಿಸುವಲ್ಲಿ ಯಶಸ್ವಿಯಾದವರು ಪ್ರಭಾಸ್. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದು ದೇಶವ್ಯಾಪಿ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಸಂಪಾದಿಸಿದ ಪ್ರಭಾಸ್ ತಾವು ಬಾಕ್ಸಾಫೀಸ್ ಕಿಂಗ್ ಕೂಡ ಹೌದು ಎನ್ನುವುದನ್ನು ಮೇಲಿಂದ ಮೇಲೆ ರುಜುವಾತು ಮಾಡುತ್ತಾನೇ ಬಂದವರು. ಹಲವು ದಾಖಲೆಗಳನ್ನು ಕೂಡ ಸೃಷ್ಟಿಸಿದವರು.

ಇನ್ನೂ ಬಾಹುಬಲಿ ನಂತರ ಪ್ರಭಾಸ್ ಕೇವಲ ನ್ಯಾಷನಲ್ ಸ್ಟಾರ್ ಆಗಿ ಮಾತ್ರ ಉಳಿದಿಲ್ಲ. ಇಂಟರ್‌ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಪ್ರಭಾಸ್ ಅಭಿನಯದ ಚಿತ್ರ ನೋಡಲು ನೂಕು ನುಗ್ಗಲಿನ ವಾತಾವರಣ ಜಪಾನ್‌ನಲ್ಲಿ ಕಂಡು ಬಂದಿದೆ. ಪ್ರಭಾಸ್ ಅಭಿನಯಕ್ಕೆ ಅಖಂಡ ಜಪಾನ್ ಉಘೇ ಉಘೇ ಎನ್ನುತ್ತಿದೆ. ಹೌದು, ವಿಶ್ವದ ಬಹುತೇಕ ಭಾಗದಲ್ಲಿ ತೆರೆಗೆ ಬಂದು ಹತ್ ಹತ್ರ ₹1200 ಕೋಟಿಯನ್ನು ಕೊಳ್ಳೆ ಹೊಡೆದ ಕಲ್ಕಿ 2898 AD ಚಿತ್ರ ಜಪಾನ್‌ನಲ್ಲಿ ಈಗ ತೆರೆಗೆ ಬಂದಿದೆ. ಜಪಾನ್ ಜನರನ್ನು ಹುಚ್ಚಿಡಿಸಿದೆ. ಕಲ್ಕಿಯ ಅಬ್ಬರಕ್ಕೆ ಜಪಾನ್‌ನಲ್ಲಿ ಹಣದ ಹೊಳೆ ಹರಿಯುತ್ತಿದೆ.

kalki-2898-ad-day-1-japan-box-office-prabhas-starrer-scores-3rd-biggest-opening-for-an-indian-film

ನಿನ್ನೆಯಷ್ಟೆ ಜಪಾನ್‌ನಲ್ಲಿ ಕಲ್ಕಿ 2898 ಎಡಿ ಚಿತ್ರ ತೆರೆಗೆ ಬಂದಿದ್ದು, ಮೊದಲ ದಿನವೇ 47 ಲಕ್ಷ ರೂಪಾಯಿಯನ್ನು ಚಿತ್ರ ಗಳಿಸಿದೆ.. ಈ ಮೂಲಕ ಜಪಾನ್ ನೆಲದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಕಲ್ಕಿ 2898 ಎಡಿ ಚಿತ್ರ ಪಾತ್ರವಾಗಿದೆ. ಇನ್ನು ಹೊಸ ವರ್ಷದ ರಜೆಯ ದಿನದಲ್ಲಿ ಚಿತ್ರ ತೆರೆಗೆ ಬಂದ ಹಿನ್ನೆಲೆ ಚಿತ್ರವನ್ನು ನೋಡುವ ಉತ್ಸಾಹ ಜಪಾನ್ ಚಿತ್ರಪ್ರೇಮಿಗಳಲ್ಲಿ ತುಸು ಹೆಚ್ಚೇ ಇದ್ದು ಎರಡನೇ ದಿನವೂ ಕೂಡ ಚಿತ್ರಮಂದಿರದ ಆವರಣದಲ್ಲಿ ನೂಕು ನುಗ್ಗಲಿನ ಕಂಡು ಬರುತ್ತಿದೆ.

ಅಂದ್ಹಾಗೇ ಈ ಹಿಂದೆ ಇದೇ ಪ್ರಭಾಸ್ ಅಭಿನಯದ ಸಾಹೋ ಚಿತ್ರ ಜಪಾನ್‌ನಲ್ಲಿ ಸದ್ದು ಮಾಡಿತ್ತು. ಬಾಕ್ಸಾಫೀಸ್‌ನ ನಲುಗಿಸಿತ್ತು. ಆದರೆ ಈ ಸಾಹೋ ಸೃಷ್ಟಿಸಿದ್ದ ದಾಖಲೆಯನ್ನು ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರ ಮುರಿದಿತ್ತು. ಜಪಾನ್‌ನಲ್ಲಿ ಮೊದಲ ದಿನ ಈ ಚಿತ್ರ ಸುಮಾರು 50 ಲಕ್ಷವನ್ನು ಗಳಿಸಿತ್ತು. ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅಭಿನಯದ ಕಲ್ಕಿ 2898 ಎಡಿ ಚಿತ್ರ ಮೊದಲ ದಿನ ಆರ್‌.ಆರ್.ಆರ್ ಚಿತ್ರದ ದಾಖಲೆಯನ್ನು ಮುರಿಯುವಲ್ಲಿ ವಿಫಲವಾಗಿದೆಯಾದರೂ 47 ಲಕ್ಷವನ್ನು ದೋಚುವ ಮೂಲಕ ಸಾಹೋ ರೆಕಾರ್ಡ್‌ನ ಬ್ರೇಕ್ ಮಾಡುವಲ್ಲಿ ಚಿತ್ರ ಯಶಸ್ವಿಯಾಗಿದೆ. ಎರಡನೇ ಸ್ಥಾನವನ್ನು ಅಲಂಕರಿಸಿದೆ. ಸಾಹೋ ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ಮೂಲಕ ಟಾಫ್ 3 ಸ್ಥಾನದಲ್ಲಿ ಪ್ರಭಾಸ್ ಅವರ ಎರಡು ಚಿತ್ರಗಳು ಸ್ಥಾನವನ್ನು ಪಡೆದಿರುವುದು ವಿಶೇಷ.

ಕೇವಲ ಕಲ್ಕಿ 2898 ಎಡಿ, ಸಾಹೋ ಮಾತ್ರವಲ್ಲ ಜಪಾನ್‌ನಲ್ಲಿ ಅಥೀ ಹೆಚ್ಚು ಹಣ ಗಳಿಸಿದ ಹತ್ತು ಭಾರತೀಯ ಚಿತ್ರಗಳಲ್ಲಿ ಬಾಹುಬಲಿ 2 ಕೂಡ ಇದೆ. ಸಲಾರ್ ಕೂಡ ಸ್ಥಾನ ಪಡೆದಿದೆ. 08ನೇ ಸ್ಥಾನದಲ್ಲಿ ಬಾಹುಬಲಿ 2 ಇದ್ದರೆ 5ನೇ ಸ್ಥಾನದಲ್ಲಿ ಸಲಾರ್ ಇದೆ. ಇನ್ನು 47 ಲಕ್ಷ ಹಣವನ್ನು ಗಳಿಸುವ ಮೂಲಕ ಜಪಾನ್ ಬಾಕ್ಸಾಫೀಸ್‌ನಲ್ಲಿ ಕಲ್ಕಿ 2898 ಎಡಿ ಚಿತ್ರ ಶಾರುಖ್ ಖಾನ್ ಅಭಿನಯದ ಜವಾನ್, ಪಠಾಣ್ ಚಿತ್ರಗಳ ದಾಖಲೆಯನ್ನು ಮುರಿದಿದೆ. ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಮತ್ತು ಅಮೀರ್ ಖಾನ್ ಅಭಿನಯದ ದಂಗಲ್ 3 ಚಿತ್ರಗಳಿಗೆ ಕೂಡ ಕಲ್ಕಿ ಸೆಡ್ಡು ಹೊಡೆದಿದೆ. ಸದ್ಯ ಕಲ್ಕಿ 2898 ಎಡಿ ಚಿತ್ರ ಮೊದಲ ದಿನ 47 ಲಕ್ಷ ಗಳಿಸಿದ್ದು ಎರಡನೇ ದಿನದ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ.

Disclaimer: ಕಲ್ಕಿ 2898 ಎಡಿ ಚಿತ್ರದ ಜಪಾನ್‌ ಬಾಕ್ಸಾಫೀಸ್‌ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದ್ದು, ಪ್ರಭಾಸ್ ಆಗಲಿ ಚಿತ್ರತಂಡವಾಗಲಿ ಚಿತ್ರದ ಗಳಿಕೆಯ ಕುರಿತು ಅಧಿಕೃತವಾದ ಮಾಹಿತಿಯನ್ನು ಹಂಚಿಕೊಂಡಿಲ್ಲ.

More from Filmibeat

Read more about: prabhas box office tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X