'ಕಲ್ಕಿ' ಚಿತ್ರದಲ್ಲಿದೆ 6 ಸಾವಿರ ವರ್ಷಗಳ ಕಥೆ; '2898 AD' ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ

ಪ್ರಭಾಸ್ ನಟನೆಯ 'ಕಲ್ಕಿ 2898AD' ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇದೆ. ಮೇ 9ಕ್ಕೆ ಸಿನಿಮಾ ಬಿಡುಗಡೆಗೆ ಪ್ರಯತ್ನ ನಡೀತಿದೆ. ಭರದಿಂದ ಸಿನಿಮಾ ಚಿತ್ರೀಕರಣ ನಡೀತಿದೆ. ಈ ಸೈನ್ಸ್ ಫಿಕ್ಷನ್ ಚಿತ್ರಕ್ಕೆ ನಾಗ್‌ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಮಹಾನಟಿ' ಸಿನಿಮಾ ಕಟ್ಟಿಕೊಟ್ಟಿದ್ದ ತಂಡವೇ 'ಕಲ್ಕಿ' ಚಿತ್ರಕ್ಕೆ ಕೆಲಸ ಮಾಡ್ತಿದೆ.

ಹಾಲಿವುಡ್ ತಂತ್ರಜ್ಞರನ್ನು ಸೇರಿಸಿಕೊಂಡು ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ, ಪ್ರಚಾರ, ರಿಲೀಸ್ ಪ್ಲಾನ್ ಮಾಡಲಾಗುತ್ತಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್ ಸಂಸ್ಥೆ ಬಂಡವಾಳ ಹೂಡಿದೆ. ಚಿತ್ರಕ್ಕಾಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹೊಸ ಪ್ರಪಂಚವನ್ನೇ ಸೃಷ್ಟಿಸಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಸಾಂಗ್‌ ಶೂಟಿಂಗ್‌ಗಾಗಿ ಚಿತ್ರತಂಡ ಯೂರೋಪ್‌ ಕಡೆ ಹೊರಟಿದೆ.

Kalki 2898 AD film Story Begins from the Mahabharata period says Nag Ashwin

ಬಾಹುಬಲಿ ಸರಣಿ ರೀತಿಯ ಅದ್ಭುತ ಸಿನಿಮಾದಲ್ಲಿ ನಟಿಸಿದ ಬಳಿಕ ಅಭಿಮಾನಿಗಳು ಪ್ರಭಾಸ್ ಸಿನಿಮಾಗಳಲ್ಲಿ ಅದಕ್ಕಿಂತ ದೊಡ್ಡದನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಆ ನಿರೀಕ್ಷೆ ತಲುಪಲು ಸಾಧ್ಯವಾಗದೇ 3 ಸಿನಿಮಾಗಳು ಸೋಲುಂಡವು. 'ಸಲಾರ್' ಕೊಂಚ ಮಟ್ಟಿಗೆ ಗೆದ್ದಿದೆ. ಇದೆಲ್ಲವನ್ನು ಮೀರಿ 'ಕಲ್ಕಿ' ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಕಳೆದೆರಡು ವರ್ಷಗಳಿಂದ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

'ಕಲ್ಕಿ 2898AD' ಬರೀ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಪ್ಯಾನ್ ವರ್ಲ್ಡ್ ಸಿನಿಮಾ. ಬರೋಬ್ಬರಿ 22 ಭಾಷೆಗಳಲ್ಲಿ ಚಿತ್ರವನ್ನು ಏಕಕಾಲಕ್ಕೆ ತೆರೆಗೆ ತರುವ ತಯಾರಿಯಲ್ಲಿದೆ ಚಿತ್ರತಂಡ. ಟೈಟಲ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸಿರುವುದು ಸುಳ್ಳಲ್ಲ. ಚಿತ್ರಲ್ಲಿ ಕಲ್ಕಿಯಾಗಿ ಪ್ರಭಾಸ್, ಕಾಲ ಆಗಿ ಕಮಲ್ ಹಾಸನ್, ಅಶ್ವತ್ಥಾಮನಾಗಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ.

Kalki 2898 AD film Story Begins from the Mahabharata period says Nag Ashwin

ಪ್ರಾಜೆಕ್ಟ್-K ಹೆಸರಿನಲ್ಲಿ ಸಿನಿಮಾ ಮೊದಲಿಗೆ ಆರಂಭವಾಗಿತ್ತು. ಬಳಿಕ 'ಕಲ್ಕಿ 2898AD' ಎನ್ನುವ ಟೈಟಲ್ ಫಿಕ್ಸ್ ಆಯಿತು. ಅಷ್ಟಕ್ಕೂ '2898AD' ಅಂದ್ರೆ ಏನು? ಇದೇ ಟೈಟಲ್ ಯಾಕೆ ಎನ್ನುವ ಬಗ್ಗೆ ನಿರ್ದೇಶಕ ನಾಗ್‌ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚಿತ್ರದ ನಿರ್ದೇಶಕ ಹೇಳಿದ್ದು ಹೀಗೆ.

"ಈ ಚಿತ್ರದ ಕಥೆ ಮಹಾಭಾರತದ ಕಾಲದಿಂದ ಆರಂಭವಾಗಿ ಕಲಿಯುಗದಲ್ಲಿ 2898ರಲ್ಲಿ ಕೊನೆಗೊಳ್ಳುತ್ತದೆ. ಭೂತಕಾಲದಲ್ಲಿ ಸಿನಿಮಾ ಕತೆ ಶುರುವಾಗಿ ಭವಿಷತ್ ಕಾಲದಲ್ಲಿ ಮುಕ್ತಾಯವಾಗುತ್ತದೆ. ಹಾಗಾಗಿ ಇಂತಹ ಟೈಟಲ್ ಇಟ್ಟಿದ್ದೇವೆ. ಇದರಲ್ಲಿ 6000 ವರ್ಷಗಳ ನಡುವೆ ನಡೆಯುವ ಕಥೆಯನ್ನು ತೋರಿಸಲಿದ್ದೇವೆ. ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಸೂಕ್ತವಾದ ಜಗತ್ತನ್ನು ರಚಿಸಿದ್ದೇವೆ. ಎಲ್ಲದರಲ್ಲೂ ಭಾರತೀಯತೆ ಕಾಣುವಂತೆ ನೋಡಿಕೊಂಡಿದ್ದೇವೆ. ಭವಿಷ್ಯ ಹೇಗಿರುತ್ತದೆ ಎಂಬ ಕಾಲ್ಪನಿಕ ಜಗತ್ತನ್ನು ಸೃಷ್ಟಿಸಿದ್ದೇವೆ" ಎಂದಿದ್ದಾರೆ. ಇದನ್ನು ಕೇಳಿ ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

'ಕಲ್ಕಿ 2898AD' ಸಿನಿಮಾ 9 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರುತ್ತದೆ ಎನ್ನುವ ಊಹಾಪೋಹ ಕೂಡ ಇದೆ. ಮೂರು ಭಾಗಗಳಲ್ಲಿ ಪ್ರಭಾಸ್ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಒಟ್ಟಾರೆ ಭಾರತೀಯ ಚಿತ್ರರಂಗದಲ್ಲೇ ಬಹಳ ದೊಡ್ಡ ಸಿನಿಮಾ ಸಿನಿಮಾ ಇದು ಎನ್ನಲಾಗುತ್ತಿದೆ.

ವಿಷ್ಣು ಪುರಾಣ, ಭಾಗವತ ಪುರಾಣ ಹಾಗೂ ಕಲ್ಕಿ ಪುರಾಣ ಆಧರಿಸಿ ಚಿತ್ರ ತೆರೆಗೆ ಬರುತ್ತಿದೆ. ಸಾಯಿ ಮಾಧವ ಬುರ್ರಾ ಸಂಭಾಷಣೆ, ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣ, ಸಂತೋಷ್ ನಾರಾಯಣನ್ ಸಂಗೀತ ಚಿತ್ರಕ್ಕಿದೆ. ಬರೋಬ್ಬರಿ 600 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

More from Filmibeat

English summary
Nag Ashwin interesting comments on Prabhas starrer Kalki 2898 AD film Story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X