'ಕಲ್ಕಿ' ಚಿತ್ರದಲ್ಲಿ ಕೃಷ್ಣನ ಪಾತ್ರ ಮಾಡಿರೋದ್ಯಾರು? ಸೀಕ್ವೆಲ್ ಬಗ್ಗೆ ಬಂತು ಅಪ್‌ಡೇಟ್

ಪ್ರಭಾಸ್ ನಟನೆಯ 'ಕಲ್ಕಿ 2898 AD' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ತಿದೆ. ಆದರೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಎರಡನೇ ದಿನವೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದು ಫಸ್ಟ್ ವೀಕೆಂಡ್ ಭಾರೀ ಗಳಿಕೆ ನಿರೀಕ್ಷಿಸಲಾಗುತ್ತಿದೆ. ಇನ್ನು ಸಿನಿಮಾ ನೋಡಿದವರು ಸೀಕ್ವೆಲ್ ನೋಡುವ ಬಗ್ಗೆ ಕಾತರರಾಗಿದ್ದಾರೆ.

'ಕಲ್ಕಿ 2898 AD' ಮುಂದುವರೆದ ಭಾಗ ಯಾವಾಗ ಬರುತ್ತದೆ ಎನ್ನುವ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಇನ್ನು ಚಿತ್ರದ ಕೆಲ ಸನ್ನಿವೇಶಗಳು ಹಾಗೂ ಪಾತ್ರಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಮಹಾಭಾರತವನ್ನು ನೆನಪಿಸುತ್ತಾ ಮುಂದಿನ ಭವಿಷ್ಯದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ನೂರಾರು ವರ್ಷಗಳ ಬಳಿಕ 'ಕಲ್ಕಿ' ಅವತಾರದ ಅಂಚಿಗೆ ಕಥೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗದೆ.

Kalki 2898 AD sequel uapdate who played krishna s role in Prabhas starrer

ನಾಗ್‌ ಅಶ್ವಿನ್ ಕಲ್ಪನೆ, ಕಥೆ, ಚಿತ್ರಕಥೆ ನಿಜಕ್ಕೂ ಬೆರಗು ಮೂಡಿಸುತ್ತದೆ. ಒಂದಷ್ಟು ತಪ್ಪುಗಳ ಹೊರತಾಗಿಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತದೆ. ಫಸ್ಟ್ ಹಾಫ್ ನಿರಾಸೆ ಮೂಡಿಸಿದರೂ ಸೆಕೆಂಡ್ ಹಾಫ್ ಇಷ್ಟವಾಗಿಬಿಡುತ್ತದೆ. ಕ್ಲೈಮ್ಯಾಕ್ಸ್ ಅದ್ಭುತ ಅನುಭವ ನೀಡುತ್ತದೆ. ಇನ್ನು ಕೊನೆಯಲ್ಲಿ ಸೀಕ್ವೆಲ್ ಹೇಗಿರಬಹುದು ಎನ್ನುವ ಬಗ್ಗೆ ಸಣ್ಣ ಸುಳಿವು ಸಿಗುತ್ತದೆ.

ಗಾಂಡೀವ ಕೈಲಿಡಿದು ಯಾಸ್ಕಿನ್ ದೊರೆ ಅಖಾಡಕ್ಕೆ ಇಳಿಯುತ್ತಿದ್ದಾನೆ. ಸುಮತಿಯನ್ನು ಪಡೆಯುವ ಸಾಹಸಕ್ಕೆ ಮುಂದಾಗಿದ್ದಾನೆ. ಆಕೆಗೆ ಅಶ್ವಥ್ಥಾಮ ಕಾವಲಾಗಿದ್ದಾನೆ. ಇತ್ತ ಭೈರವನ ಹಿನ್ನೆಲೆ ತಿಳಿಯುವ ಸಮಯ ಬಂದಿದೆ. ಆತ ಯಾರ ಪರ ನಿಲ್ಲುತ್ತಾನೆ ಎಂದು ಕಾದು ನೋಡಬೇಕಿದೆ. ಮಹಾಭಾರತದ ಕರ್ಣನ ಅಂಶವೇ ಭೈರವನಾ? ಎನ್ನುವ ಅನುಮಾನ ಮೂಡಿದೆ. ಹೀಗೆ ಸಾಕಷ್ಟು ಪ್ರಶ್ನೆಗಳ ಜೊತೆಗೆ 'ಕಲ್ಕಿ 2898 AD' ಪಾರ್ಟ್-2 ಕುತೂಹಲ ಮೂಡಿಸಿದೆ.

Kalki 2898 AD sequel uapdate who played krishna s role in Prabhas starrer

ಸೀಕ್ವೆಲ್ ಯಾವಾಗ ಎನ್ನುವ ಬಗ್ಗೆ ಇದೀಗ ನಿರ್ಮಾಪಕರು ಅಧಿಕೃತ ಮಾಹಿತಿ ನೀಡಿದ್ದಾರೆ. "ಈಗಾಗಲೇ 2ನೇ ಭಾಗದ 60ರಷ್ಟು ಚಿತ್ರೀಕರಣ ನಡೆದಿದೆ. ಮುಖ್ಯವಾದ ಸನ್ನಿವೇಶಗಲ ಚಿತ್ರೀಕರಣ ಮಾತ್ರ ಬಾಕಿಯಿದೆ. ಆದರೆ ಯಾವಾಗ ಚಿತ್ರೀಕರಣ ಎನ್ನುವುದು ಗೊತ್ತಿಲ್ಲ. ಹಾಗಾಗಿ ಈಗಲೇ ಬಿಡುಗಡೆ ದಿನಾಂಕ ಹೇಳಲು ಸಾಧ್ಯವಿಲ್ಲ" ಎಂದು ನಿರ್ಮಾಪಕ ಅಶ್ವಿನಿ ದತ್ ಹೇಳಿದ್ದಾರೆ.

ಇನ್ನು ಚಿತ್ರದಲ್ಲಿ ಮಹಾಭಾರತದ ಎಪಿಸೋಡ್‌ಗಳು ಹೈಲೆಟ್ ಆಗಿದೆ. ಅದನ್ನು ತೋರಿಸುವ ರೀತಿಯೂ ಅದ್ಭುತ ಎನಿಸುತ್ತಿದ್ದು ಅದೇ ಚಿತ್ರದ ಹೈಲೆಟ್ ಆಗಿದೆ. ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ನಟಿಸಿರೋದು ಯಾರು? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಯಾಕಂದರೆ ಆ ಪಾತ್ರವನ್ನು ಸಂಪೂರ್ಣವಾಗಿ ರಿವೀಲ್ ಮಾಡಿಲ್ಲ. ಕೃಷ್ಣನ ಮುಖವನ್ನು ತೋರಿಸದೇ ಕುತೂಹಲ ಮೂಡಿಸಲಾಗಿದೆ.

'ಕಲ್ಕಿ 2898 AD' ಚಿತ್ರದಲ್ಲಿ ಕೃಷ್ಣನ ಪಾತ್ರ ಮಾಡಿರುವುದು ನಾನೇ ಎಂದು ತಮಿಳು ನಟ ಕೃಷ್ಣ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ದೊಡ್ಡ ಪಾತ್ರ ಸಿಕ್ಕಿದ್ದು ತುಂಬಾ ಖುಷಿ ತಂದಿದೆ ಎಂದಿದ್ದಾರೆ. ತಮಿಳುನ 'ಸುರರೈ ಪೊಟ್ರು' ಚಿತ್ರದಲ್ಲಿ ನಾಯಕನ ಸ್ನೇಹಿತನ ಪಾತ್ರದಲ್ಲಿ ಕೃಷ್ಣಕುಮಾರ್ ನಟಿಸಿದ್ದರು. ಧನುಷ್ ನಟನೆಯ'ಮಾರನ್' ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮುಖ ತೋರಿಸದಿದ್ದರೂ ತಮ್ಮ ಆಂಗಿಕ ಭಾಷೆಯಿಂದ ಶ್ರೀಕೃಷ್ಣನ ಪಾತ್ರವನ್ನು ಕೃಷ್ಣ ಕುಮಾರ್ ಅದ್ಭುತವಾಗಿ ನಿರ್ವಹಿಸಿದ್ದಾರೆ.

ನಾಗ್‌ ಅಶ್ವಿನ್ ಘಟನಾಘಟಿ ಕಲಾವಿದರನ್ನು 'ಕಲ್ಕಿ 2898 AD' ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲಿ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಸಹ ಇದ್ದಾರೆ. ಚಿತ್ರದಲ್ಲಿ ಪೈಲಟ್ ಆಗಿ ಭೈರವ(ಪ್ರಭಾಸ್)ನ ಪೋಷಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಪರಶುರಾಮ ಪಾತ್ರದಲ್ಲಿ ದುಲ್ಕರ್ ಸಲ್ಮಾನ್ ನಟಿಸಿದ್ದಾರೆ? ಸೀಕ್ವೆಲ್‌ನಲ್ಲಿ ಆ ಪಾತ್ರಕ್ಕೆ ಮತ್ತಷ್ಟು ಮಹತ್ವ ಇರಲಿದೆ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸಪ್ತ ಚಿರಂಜೀವಿಗಳಲ್ಲಿ ಪರಶುರಾಮನೂ ಒಬ್ಬ. ಹಾಗಾಗಿ ಆ ಪಾತ್ರವೇ ಇದು ಎಂದು ಕೆಲವರು ಅಂದಾಜು.

More from Filmibeat

English summary
60% of the shooting for Kalki 2898 AD part 2 is already completed;
Read more about: prabhas telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X