ವರ್ಷ ಪೂರೈಸಿದ 'ಕಲ್ಕಿ 2898AD'; ಸೀಕ್ವೆಲ್ ಬಗ್ಗೆ ಅಪ್‌ಡೇಟ್ ಕೊಟ್ಟ ನಿರ್ಮಾಪಕ
ಬಾಹುಬಲಿ ಪ್ರಭಾಸ್ ನಟನೆಯ 'ಕಲ್ಕಿ 2898AD' ಸಿನಿಮಾ ಕಳೆದ ವರ್ಷ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅದರ ಬೆನ್ನಲ್ಲೇ ಸೀಕ್ವೆಲ್ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಆದರೆ ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ತಡವಾಗುತ್ತಿದೆ. ಈ ಬಗ್ಗೆ ಇದೀಗ ನಿರ್ಮಾಪಕರು ಮಾತನಾಡಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898AD' ಸಿನಿಮಾ ತೆರೆಮೇಲೆ ಹೊಸ ಪ್ರಪಂಚ ಸೃಷ್ಟಿಸಿತ್ತು. ಭವಿಷ್ಯದ ಕಲ್ಕಿ ಕಥೆಗೆ ದ್ವಾಪರಯುಗದ ಕರ್ಣನ ಕಥೆಯನ್ನು ಲಿಂಕ್ ಮಾಡಿ ಹೊಸ ಪ್ರಯತ್ನ ಮಾಡಲಾಗಿತ್ತು. ಕಳೆದ ವರ್ಷ ಜೂನ್ 27ಕ್ಕೆ ತೆರೆಗೆ ಬಂದಿದ್ದ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ನಟಿಸಿದ್ದು ಚಿತ್ರಕ್ಕೆ ಬಲ ತುಂಬಿತ್ತು.

ಸೀಕ್ವೆಲ್‌ನಲ್ಲಿ ಕೂಡ ಅದೇ ಪಾತ್ರವರ್ಗ ಮುಂದುವರೆಯಲಿದೆ. 'ಕಲ್ಕಿ 2898AD' ಚಿತ್ರದಲ್ಲಿ ಕಲ್ಕಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಸುಪ್ರೀಂ ಯಾಸ್ಕಿನ್ ಆಗಿ ನೆಗೆಟಿವ್ ರೋಲ್‌ನಲ್ಲಿ ಕಮಲ್ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಕಲ್ಕಿ ಹಾಗೂ ಯಾಸ್ಕಿಕ್ ಎದುರಿನ ಕಾಳಗ ಕುತೂಹಲ ಮೂಡಿಸಿದೆ. ಪ್ರಭಾಸ್ ಕೈಯಲ್ಲಿ ಎರಡ್ಮೂರು ಸೀಕ್ವೆಲ್ ಸಿನಿಮಾಗಳಿಗೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್- 2' ಚಿತ್ರದಲ್ಲಿ ಕೂಡ ನಟಿಸಬೇಕಿದೆ.
ಸದ್ಯ ಪ್ರಭಾಸ್ ನಟನೆಯ 'ರಾಜಾಸಾಬ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಬಳಿಕ 'ಫೌಜಿ' ಸಿನಿಮಾ ತೆರೆಗೆ ಬರಲಿದೆ. ಆ ಚಿತ್ರದ ಚಿತ್ರೀಕರಣ ಈಗ ನಡೀತಿದೆ. ಈ ಎರಡು ಸಿನಿಮಾಗಳ ಬಳಿಕ 'ಕಲ್ಕಿ 2898AD' ಸೀಕ್ವೆಲ್ ಶುರುವಾಗಲಿದೆ. ಚಿತ್ರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನು ಅದನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಸೀಕ್ವೆಲ್ ಮಾಡಿ ಎಂದು ಕೇಳುತ್ತಿದ್ದಾರೆ. ಇದೀಗ ಸ್ವತಃ ನಿರ್ಮಾಪಕ ಅಶ್ವಿನಿ ದತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ಇದೇ ವರ್ಷ ಸೆಪ್ಟೆಂಬರ್‌ನಲ್ಲಿ 'ಕಲ್ಕಿ 2898AD' ಚಿತ್ರದ ಎರಡನೇ ಭಾಗ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ವರ್ಷ ಮೇ ಅಥವಾ ಜೂನ್ ವೇಳೆಗೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ" ಎಂದು ಅಶ್ವಿನಿ ದತ್ ಹೇಳಿದ್ದಾರೆ. ಯಾವುದೇ ಕ್ಷಣದಲ್ಲಿ ನಾನು ನಟಿಸೋಕೆ ಸಿದ್ಧ ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
'ಕಲ್ಕಿ 2898AD' ಚಿತ್ರ ಒಂದು ವರ್ಷ ಪೂರೈಸಿರುವ ಬಗ್ಗೆ ಬಿಗ್‌ಬಿ ಪ್ರತಿಕ್ರಿಯಿಸಿದ್ದಾರೆ. "ಈ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಳ್ಳುವುದು ನನ್ನ ಗೌರವದ ಸೌಭಾಗ್ಯ .. ವೈಜಯಂತಿ ಫಿಲ್ಮ್ಸ್ ಬ್ಯಾನರ್ ಹಾಗೂ ತಂಡಕ್ಕೆ ನನ್ನ ನಮನ. ಅವರು ಯಾವಾಗ ಕೇಳಿದರೂ, ಮತ್ತೆ ಯಾವುದೇ ದಿನ ನಾನು ಚಿತ್ರದಲ್ಲಿ ನಟಿಸಲು ಸಿದ್ಧ" ಎಂದು ಟ್ವೀಟ್ ಮಾಡಿದ್ದಾರೆ.
ಕಲ್ಕಿ ಪುರಾಣದ ಸುತ್ತಾ ಒಂದು ಕಾಲ್ಪನಿಕ ಕಥೆಯನ್ನು ನಾಗ್ ಅಶ್ವಿನ್ 'ಕಲ್ಕಿ 2898AD' ಚಿತ್ರದಲ್ಲಿ ಕಟ್ಟಿಕೊಟ್ಟಿದ್ದರು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿದ್ದರು. ಹಾಗಾಗಿ ಸಿನಿಮಾ ತಕ್ಕಮಟ್ಟಿಗೆ ಕಲೆಕ್ಷನ್ ಮಾಡಿತ್ತು. ಆದರೆ ಬಾಹುಬಲಿ ಚಿತ್ರವನ್ನು ಮೀರಿಸುತ್ತದೆ ಎನ್ನುವ ಲೆಕ್ಕಾಚಾರ ಸುಳ್ಳಾಗಿತ್ತು.
ಕ್ಲೈಮ್ಯಾಕ್ಸ್ ನೋಡಿದ ಮೇಲೆ ಸೀಕ್ವೆಲ್ ಬಗ್ಗೆ ನಿರೀಕ್ಷೆ ಮೂಡಿತ್ತು. ಅಭಿಮಾನಿಗಳು ಈ ಚಿತ್ರಕ್ಕಾಗಿ ಬಹಳ ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಪ್ರಭಾಸ್ ಸಿನಿಕರಿಯರ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸಿನಿಮಾ ಆಗುವ ನಿರೀಕ್ಷೆಯಿದೆ.


Click it and Unblock the Notifications











