ಕಲ್ಕಿ ಎಡಿ 2898 - ಪುಷ್ಪ02ಗೆ ಕರ್ನಾಟಕದಲ್ಲಿ ಭಾರೀ ಡಿಮ್ಯಾಂಡ್ ; ಯಾರ ಪಾಲಾಯ್ತು ವಿತರಣೆ ಹಕ್ಕು..?

ಕರುನಾಡಲ್ಲಿ ಪರಭಾಷೆ ಚಿತ್ರಗಳಿಗೆ ಮೊದಲಿಂದ ತುಸು ಹೆಚ್ಚೇ ಬೇಡಿಕೆ ಇದೆ. ಕನ್ನಡ ಚಿತ್ರಗಳನ್ನು ಎತ್ತಂಗಡಿ ಮಾಡಿಯಾದರೂ ಪರಭಾಷಾ ಚಿತ್ರಗಳನ್ನು ಮೆರೆಸುವ ಔದಾರ್ಯ ಕರ್ನಾಟಕದಲ್ಲಿದೆ. ಅದರಲ್ಲಿಯೂ ತೆಲುಗು ಚಿತ್ರರಂಗಕ್ಕೆ ಕರ್ನಾಟಕ ಅನಾದಿಕಾಲದಿಂದ ಚಿನ್ನದ ಗಣಿ.

ಈ ಕಾರಣಕ್ಕೆ.. ಪಕ್ಕದ ಆಂಧ್ರದಲ್ಲಿ ದೊಡ್ಡ ಚಿತ್ರವೊಂದು ಬಿಡುಗಡೆಯ ಬಾಗಿಲಿಗೆ ಬರುವುದೇ ತಡ ನಮ್ಮಲ್ಲಿರುವ ವಿತರಕರು ತಾ ಮುಂದು.. ನಾ ಮುಂದು.. ಎಂದು ವ್ಯಾಪಾರಕ್ಕಿಳಿಯುತ್ತಾರೆ. ಅವರು ಕೇಳಿದ್ದಕ್ಕಿಂತ ಇನ್ನೂ ಹೆಚ್ಚಿನ ದುಡ್ಡನ್ನ ಅವರ ಕೈಗಿಟ್ಟು ಅದ್ಧೂರಿಯಾಗಿ ಬರ ಮಾಡಿಕೊಳ್ತಾರೆ. ಪ್ರಭಾಸ್ ಅಭಿನಯದ ಕಲ್ಕಿ ಎಡಿ 2898 ಮತ್ತು ಅಲ್ಲು ಅರ್ಜುನ್ ಅಭಿನಯದ ಪುಷ್ಪ 02 ವಿಚಾರದಲ್ಲಿ ಸದ್ಯಕ್ಕೆ ಇದೇ ಆಗಿದೆ.

Kalki AD 2898 And Pushpa 2 Karnataka Distribution Rights Sold For Whopping Price

ಹೌದು, ಈ ಹಿಂದೆ.. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರದ ವಿತರಣೆ ಹಕ್ಕನ್ನ ಹೆಚ್ಚು ಕಡಿಮೆ 50 ಕೋಟಿ ನೀಡಿ ತನ್ನದಾಗಿಸಿಕೊಂಡಿದ್ದ ಕೆ.ವಿ.ಎನ್ ಸಂಸ್ಥೆ ಕಲ್ಕಿ ಎಡಿ 2898 ಚಿತ್ರದ ಹಕ್ಕುಗಳನ್ನ ಪಡೆದಿದೆ. ಈ ಬಾರಿ ಈ ಸಾಹಸಕ್ಕೆ ಇವರು ತೆತ್ತ ಬೆಲೆ ಎಷ್ಟು ಅನ್ನುವುದು ಸದ್ಯಕ್ಕೆ ನಿಗೂಢವಾದರೂ, ಕಲ್ಕಿ ಎಡಿ 2898 ಕರುನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿರುವುದರಲ್ಲಿ ಅನುಮಾನ ಇಲ್ಲ.

ಇನ್ನೂ.. ಚಿಕ್ಕ ಬಳ್ಳಾಪುರದಲ್ಲಿ 100 ಎಕರೆ ಜಾಗದಲ್ಲಿ ನಡೆದಿದ್ದ ಆರ್.ಆರ್.ಆರ್ ಜಾತ್ರೆಗೆ ಕೆವಿಎನ್ ಸಂಸ್ಥೆ ನೀಡಿದ್ದ ಸಹಕಾರ ಮತ್ತು ಸಹಯೋಗ ಕೂಡ ದೊಡ್ಡದು. ಹೀಗಾಗಿ ಕಲ್ಕಿ ಎಡಿ 2898 ಚಿತ್ರದ ಬಿಡುಗಡೆಗೆ ಮುನ್ನ ಕರ್ನಾಟಕದಲ್ಲಿ ಅದ್ಧೂರಿ ಮತ್ತು ವೈಭವೋಪೇತ ಸಮಾರಂಭವನ್ನ ನಾವು ನೀವು ಕೆವಿಎನ್ ಸಂಸ್ಥೆಯಿಂದ ನಿರೀಕ್ಷೆ ಮಾಡಬಹುದು.

ಉಳಿದಂತೆ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಸೇರಿ ಟಾಕ್ಸಿಕ್ ಸಿನಿಮಾ ಮಾಡ್ತಿರುವ ಶ್ರೇಯ ಈ ಸಂಸ್ಥೆಯದ್ದು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪ್ರೇಮ್ ನಿರ್ದೇಶನದ ಕೆ.ಡಿ ಚಿತ್ರಕ್ಕೆ ಬಂಡವಾಳವನ್ನೂ ಹೂಡಿರುವ ಕೆ.ವಿ.ಎನ್ ಪ್ರೊಡಕ್ಷನ್ಸ್ ಭವಿಷ್ಯದಲ್ಲಿ ಪ್ರೇಮ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರಕ್ಕೂ ಹಣ ಹೂಡಲಿದೆ.

Kalki AD 2898 And Pushpa 2 Karnataka Distribution Rights Sold For Whopping Price

ಕಲ್ಕಿ ಎಡಿ 2898 ಚಿತ್ರದ ಬಿಡುಗಡೆಯ ನಂತರ ಕರ್ನಾಟಕದಲ್ಲಿ ಪುಷ್ಪ ಅಬ್ಬರ ಆರಂಭವಾಗಲಿದೆ. ಆಗಸ್ಟ್ 15ಕ್ಕೆ ಮುಹೂರ್ತ ನಿಗಧಿಯಾಗಿದೆ. ಹೀಗಾಗಿಯೇ.. ಪುಷ್ಪರಾಜ್ ನ ಮೇಲೆ ಕೂಡ ಹಣದ ಮಳೆಯನ್ನ ಈಗ್ಲೇ ಸುರಿಸಿರುವ ಎನ್ ಸಿನಿಮಾಸ್ ಕರ್ನಾಟಕದಲ್ಲಿ ಪುಷ್ಪ 02 ಚಿತ್ರದ ವಿತರಣೆ ಹಕ್ಕನ್ನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯೂ ಕೂಡ ಕೊಡಲಾದ ಕಾಸು ಎಷ್ಟು ಎಂಬ ಪ್ರಶ್ನೆಗೆ ಉತ್ತರ ಇಲ್ಲ.

ಅಂದ್ಹಾಗೇ ನಾನಿ ಅಭಿನಯದ ದಸರಾ, ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ವಾಲ್ಟೇರ್ ವೀರಯ್ಯ, ಬಾಲಯ್ಯ ಅಭಿನಯದ ವೀರ ನರಸಿಂಹ ರೆಡ್ಡಿ ಚಿತ್ರಗಳನ್ನ ಕರ್ನಾಟಕದಲ್ಲಿ ಈ ಹಿಂದೆ ಬಿಡುಗಡೆ ಮಾಡಿದ ಹೆಗ್ಗಳಿಕೆ ಇದೇ ಎನ್ ಸಿನಿಮಾಸ್ ಅವರದ್ದು. ಇಂಥ ಎನ್ ಸಿನಿಮಾಸ್ ಇದೀಗ ಪುಷ್ಪ 02 ಮೂಲಕ ಮತ್ತೊಮ್ಮೆ ಆಂಧ್ರ ಮೀಲ್ಸ್‌ನ್ನ ಕರ್ನಾಟಕದಲ್ಲಿ ಬಡಿಸಲು ಮುಂದಾಗಿದೆ.

ಒಟ್ನಲ್ಲಿ ಪುಷ್ಪ 02 ಮತ್ತು ಕಲ್ಕಿ ಎಡಿ 2898 ಚಿತ್ರಗಳ ವಿತರಣೆ ಹಕ್ಕು ಕರ್ನಾಟಕದಲ್ಲಿ ಬಿಕರಿಯಾಗಿವೆ. ಎರಡು ಸಿನಿಮಾಗಳು ಕರ್ನಾಟಕದಲ್ಲಿ ಕಡಿಮೆ ಅಂದರೂ ಐವತ್ತು ಕೋಟಿ ಪ್ಲಸ್ ಹಣ ಗಳಿಸಿಯೇ ಗಳಿಸಲಿವೆ ಅನ್ನುವ ನಂಬಿಕೆ ಅನೇಕರಲ್ಲಿದೆ. ನಿಜಕ್ಕೂ ಕರುನಾಡಲ್ಲಿ ಈ ಎರಡು ಚಿತ್ರಗಳು ಎಷ್ಟು ಕೋಟಿ ಲೂಟಿ ಹೊಡೆಯಲಿವೆ ಎಂಬ ಪ್ರಶ್ನೆಗೆ ಉತ್ತರ ಸದ್ಯದಲ್ಲಿ ಸಿಗಲಿದೆ.

More from Filmibeat

English summary
Record-breaking Deal: Prabhas's 'Kalki AD 2898' and Allu Arjun's 'Pushpa 2' Snatch Karnataka Distribution Rights".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X