For Quick Alerts
  ALLOW NOTIFICATIONS  
  For Daily Alerts

  ಸೀತಾರಾಮಮ್ ಚಿತ್ರದಲ್ಲಿ ಎಲ್ಲರಿಗಿಂತ ಇವರ ನಟನೆ ಅತ್ಯದ್ಭುತ ಎಂದು ಹೊಗಳಿದ ಕಂಗನಾ ರಣಾವತ್

  |

  ಹನು ರಾಘವಪುಡಿ ನಿರ್ದೇಶನದ ಸೀತಾರಾಮಮ್ ಚಿತ್ರ ಈ ವರ್ಷ ತೆರೆಕಂಡು ಬ್ಲಾಕ್ ಬಸ್ಟರ್ ಎನಿಸಿಕೊಂಡ ಚಿತ್ರಗಳಲ್ಲೊಂದು. ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರವನ್ನು ಸಿನಿಪ್ರೇಕ್ಷಕರ ಅಪ್ಪಿ ಒಪ್ಪಿದ್ದ. ದುಲ್ಕರ್ ಸಲ್ಮಾನ್ ಅಭಿನಯದ ಮೊದಲ ಟಾಲಿವುಡ್ ಚಿತ್ರ ಇದಾಗಿದ್ದು ದುಲ್ಕರ್ ಮೊದಲ ತೆಲುಗು ಚಿತ್ರದಲ್ಲಿಯೇ ನೂರು ಕೋಟಿ ಕ್ಲಬ್ ಸೇರಿದ್ದಾರೆ.

  ಚಿತ್ರಮಂದಿರದಲ್ಲಿ ಒಳ್ಳೆಯ ಕಲೆಕ್ಷನ್ ಮೂಲಕ ಅಬ್ಬರಿಸಿ ಬೊಬ್ಬಿರಿದ ಈ ಚಿತ್ರ ಸಾಲು ಸಾಲು ಫ್ಲಾಪ್ ಚಿತ್ರಗಳನ್ನು ನೀಡಿ ಮಕಾಡೆ ಮಲಗಿದ್ದ ತೆಲುಗು ಚಿತ್ರರಂಗಕ್ಕೆ ಉಸಿರು ನೀಡಿತು ಎಂದರೆ ತಪ್ಪಾಗಲಾರದು. ಹೀಗೆ ಚಿತ್ರಮಂದಿರದಲ್ಲಿ ಗೆದ್ದ ಸೀತಾರಾಮಮ್ ಸದ್ಯ ಒಟಿಟಿಯಲ್ಲಿಯೂ ಸಹ ತನ್ನ ಪ್ರಭಾವವನ್ನು ಮುಂದುವರೆಸಿದೆ.

  ಈ ಚಿತ್ರವನ್ನು ಹಲವಾರು ಸೆಲೆಬ್ರಿಟಿಗಳು ವೀಕ್ಷಿಸುತ್ತಿದ್ದು, ಚಿತ್ರಕತೆ ಹಾಗೂ ಚಿತ್ರದಲ್ಲಿ ಕಲಾವಿದರ ಅಭಿನಯಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಸಾಲಿಗೆ ಇದೀಗ ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಸೇರಿಕೊಂಡಿದ್ದು, ತನ್ನ ಅಧಿಕೃತ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಚಿತ್ರವನ್ನು ವೀಕ್ಷಿಸಿದ್ದಾಗಿ ಪೋಸ್ಟ್ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಚಿತ್ರದ ಲವ್ ಟ್ರ್ಯಾಕ್ ಕುರಿತು ಹೊಗಳಿರುವ ಕಂಗನಾ ರಣಾವತ್ ಇದೊಂದು ಎಪಿಕ್ ಲವ್ ಸ್ಟೋರಿ, ಅತ್ಯದ್ಭುತ ಸ್ಕ್ರೀನ್ ಪ್ಲೇ ಹಾಗೂ ನಿರ್ದೇಶನ ಎಂದು ಕೊಂಡಾಡಿದ್ದಾರೆ ಹಾಗೂ ಇದೇ ವೇಳೆ ನಿರ್ದೇಶಕ ಹನು ರಾಘವಪುಡಿ ಅವರಿಗೆ ಶುಭ ಕೋರಿದ್ದಾರೆ. ಹಾಗೂ ಚಿತ್ರದ ಎಲ್ಲಾ ವರ್ಗದವರೂ ಸಹ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಕಂಗನಾ ಬರೆದುಕೊಂಡಿದ್ದಾರೆ.

  ಮತ್ತೊಂದು ಪ್ರತ್ಯೇಕ ಸ್ಟೋರಿಯನ್ನು ಪೋಸ್ಟ್ ಮಾಡಿರುವ ಕಂಗನಾ ರಣಾವತ್ ಚಿತ್ರದಲ್ಲಿ ಎಲ್ಲಾ ಕಲಾವಿದರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ, ಅದರಲ್ಲೂ ಅತ್ಯುತ್ತಮವಾಗಿ ನಟಿಸಿರುವುದು ಚಿತ್ರದ ನಾಯಕಿ ಮೃಣಾಲ್ ಠಾಕೂರ್ ಎಂದು ಕಂಗನಾ ರಣಾವತ್ ಹೊಗಳಿದ್ದಾರೆ. ಮೃಣಾಲ್ ಠಾಕೂರ್ ನಿಜವಾಗಿಯೂ ಕ್ವೀನ್ ಎಂದು ಕಂಗನಾ ಬರೆದುಕೊಂಡಿದ್ದಾರೆ.

  English summary
  Kangana Ranaut praised Mrunal Thakur's acting in Sita Ramam
  Wednesday, September 21, 2022, 23:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X