For Quick Alerts
  ALLOW NOTIFICATIONS  
  For Daily Alerts

  ಕಂಗನಾ ನಟನೆಯ 'ತಲೈವಿ' ತಂಡದಿಂದ ಸಮಂತಾಗೆ ಸಿಕ್ತು ವಿಶೇಷ ಉಡುಗೊರೆ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಿದ್ದರು. ವಿವಾದಾತ್ಮಕ ಹೇಳಿಕೆ, ಪೋಸ್ಟ್ ಗಳ ಮೂಲಕ ಸದಾ ಗಮನ ಸೆಳೆಯುತ್ತಿದ್ದ ಕ್ವೀನ್ ನಟಿ ಇದೀಗ ಸಿನಿಮಾ ಬಿಡುಗಡೆಯ ಉತ್ಸಾಹದಲ್ಲಿದ್ದಾರೆ. ಬಹುನಿರೀಕ್ಷೆಯ 'ತಲೈವಿ' ಸಿನಿಮಾ ಬಿಡುಗಡೆಗೆ ಕಂಗನಾ ಕಾಯುತ್ತಿದ್ದಾರೆ. ಅಂದಹಾಗೆ ತಲೈವಿ ಸಿನಿಮಾ ಇದೇ ತಿಂಗಳು ಸೆಪ್ಟಂಬರ್ 10ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ.

  ಸಿನಿಮಾ ಬಿಡುಗಡೆಗೂ ಮೊದಲು ಪ್ರಿ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು ಸಿನಿಮಾತಂಡ. ಅದ್ದೂರಿಯಾಗಿ ನಡೆದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಕಂಗನಾ ರಣಾವತ್ ಸೇರಿದಂತೆ ಇಡಿ ತಲೈವಿ ತಂಡ ಭಾಗಿಯಾಗಿತ್ತು. ಕಾರ್ಯಕ್ರಮದಲ್ಲಿ ಕಂಗನಾ ಆಡಿದ ಮಾತುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತಲೈವಿ ಚಿತ್ರಕ್ಕೆ ಕಥೆ ಬರೆದ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಕೂಡ ಕಂಗನಾರನ್ನು ಹಾಡಿಹೊಗಳಿದ್ದಾರೆ.

  2ನೇ ಲಾಕ್ ಡೌನ್ ಬಳಿಕ, ಶೇ. 50 ರಷ್ಟು ಮಾತ್ರ ಚಿತ್ರಮಂದಿರಗಳ ಭರ್ತಿಗೆ ಅವಕಾಶ ಇದ್ದರೂ ಕಂಗನಾ ಮತ್ತು ತಂಡ ಧೈರ್ಯ ಮಾಡಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿರುವುದು ಅಚ್ಚರಿ ಮೂಡಿಸಿದೆ. ಅಂದಹಾಗೆ ಚಿತ್ರದಲ್ಲಿ ಕಂಗನಾ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಹಾಡುಗಳಲ್ಲಿ ಕಂಗನಾ ಅದ್ಭುತವಾಗಿ ನಟಿಸಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಕಂಗನಾ ಲುಕ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ.

  ಅಂದಹಾಗೆ ತಲೈವಿ ಸಿನಿಮಾಗೆ ತಮಿಳಿನ ನಿರ್ದೇಶಕ ಎಲ್ ವಿಜಯ್ ಆಕ್ಷನ್

  ಕಟ್ ಹೇಳಿದ್ದಾರೆ. ಪ್ರಿ-ರಿಲೀಸ್ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಿನಿಮಾತಂಡ ಸ್ಟಾರ್ ನಟಿಯರಿಗೆ ಸಖತ್ ಸರ್ಪ್ರೈಸ್ ನೀಡಿದೆ. ತೆಲುಗು ನಟಿ ಸಮಂತಾ ಅಕ್ಕಿನೇನಿಗೆ ಚಿತ್ರತಂಡ ವಿಶೇಷ ಉಡುಗೊರೆಯನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಟಾಲಿವುಡ್ ಬ್ಯೂಟಿ ಸಮಂತಾಗೆ ತಲೈವಿ ತಂಡ ಸುಂದರವಾದ ಕಾಂಚೀಪುರಂ ಸೀರೆಯನ್ನು ಉಡುಗೊರೆಯನ್ನು ನೀಡಿದೆ.

  ಗಿಫ್ಟ್ ನ ಫೋಟೋವನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ತಲೈವಿ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಅಂದಹಾಗೆ ತಲೈವಿ ತಂಡ ಪ್ರಮುಖ ನಟಿಮಣಿಯರಿಗೆ ಸೀರೆ ಗಿಫ್ಟ್ ಮಾಡುತ್ತಿದ್ದಾರೆ. ಜಲಯಲಿತಾ ಅವರಿಗೆ ತುಂಬಾ ಇಷ್ಟವಾದ ಕಾಂಚೀಪುರಂ ಸೀರೆಯನ್ನು ವಿಶೇಷವಾಗಿ ಸಿನಿಮಾತಂಡ ಆರ್ಡರ್ ಮಾಡಿ ತಯಾರಿಸಿದೆ. ಅದೇ ಸೀರೆಯನ್ನು ಕಂಗನಾ ಸಿನಿಮಾದಲ್ಲಿ ಧರಿಸಿದ್ದಾರೆ. ಸಿನಿಮಾಗಾಗಿ ಮಾತ್ರವಲ್ಲದೆ ಸಮಾಜದ ಪ್ರಬಲ ಮಹಿಳೆಯರಿಗೆ ಗಿಫ್ಟ್ ನೀಡುವ ಸಲುವಾಗಿ ವಿಶೇಷ ಸೀರೆ ಮಾಡಿಸಿದ್ದಾರೆ.

  Kangana Ranaut starrer Thalaivi team Kanchipuram saree gifts to Samantha

  ಪ್ರಬಲ ಮಹಿಳೆಯರಿಗಾಗಿ ಗಿಫ್ಟ್ ನೀಡಲು ಮಾಡಿಸಿರುವ ನೇಯ್ದ ಸೀರೆಯನ್ನು ಮೊದಲು ಸಮಂತಾಗೆ ನೀಡಿದೆ ಸಿನಿಮಾತಂಡ. ಗಿಫ್ಟ್ ಫೋಟೋವನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗಿಫ್ಟ್ ಜೊತೆಗೆ ವಿಶೇಷವಾಗಿ ಪತ್ರವನ್ನು ಬರೆದು ಕುಳುಹಿಸಿದೆ ಸಿನಿಮಾತಂಡ. ತಲೈವಿ ತಂಡದಿಂದ ಬಂದ ವಿಶೇಷ ಗಿಫ್ಟ್ ನೋಡಿ ಸಮಂತಾ ಸಖತ್ ಖುಷ್ ಆಗಿದ್ದಾರೆ. ಜೊತೆಗೆ ಸಮಂತಾ ಸಿನಿಮಾವನ್ನು ತೆರೆಮೇಲೆ ನೋಡಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ.

  ತಲೈವಿ ತಂಡ ನೀಡಿದ ಗಿಫ್ಟ್ ಸೀರೆಯನ್ನು ಸಮಂತಾ ಯಾವಾಗ ಧರಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ನಟಿ ಕಂಗನಾ ಸದ್ಯ ಜಯಲಲಿತಾ ಆಗಿ ತೆರೆಮೇಲೆ ಬರಲು ಕಾಯುತ್ತಿದ್ದಾರೆ. ಅಭಿಮಾನಿಗಳನ್ನು ತನ್ನನ್ನು ಹೇಗೆ ಸ್ವೀಕಾರ ಮಾಡುತ್ತಾರೆ ಎನ್ನುವ ಕುತೂಹಲದಲ್ಲಿದ್ದಾರೆ. ಇತ್ತೀಚಿಗಷ್ಟೆ ಕಂಗನಾ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿದ್ದರು. ಚೆನ್ನೈಗೆ ಆಗಮಿಸಿದ್ದ ಕಂಗನಾ ಚೆನ್ನೈನ ಮರೀನಾ ಬೀಚ್ ಬಳಿ ಇರುವ ಜಲಯಲಿತಾ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಸಿನಿಮಾ ಬಿಡುಗಡೆಗೂ ಮೊದಲು ಜಲಯಲಿತಾ ಸಮಾಧಿಗೆ ಭೇಟಿ ನೀಡಿ ನಮಸ್ಕರಿಸುತ್ತಿರುವುದು ಅಭಿಮಾನಿಗಳ ಮೆಚ್ಚುಗೆ ಪಾತ್ರರಾಗಿದ್ದರು.

  ಚಿತ್ರದಲ್ಲಿ ಕಂಗನಾ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಂಗನಾ ಜೊತೆ ತಲೈವಿಯಲ್ಲಿ ದೊಡ್ಡ ತಾರಾಬಳಗವೇ ಇದೆ. ಎಂಜಿಆರ್ ಪಾತ್ರದಲ್ಲಿ ಖ್ಯಾತ ನಟ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಥ್ರಿಲ್ ಹೆಚ್ಚಿಸಿದೆ. ಇನ್ನು ನಟ ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ಇನ್ನು ಕಂಗನಾ ಉಳಿದ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿಗಕಷ್ಟೆ ಧಾಕಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇದೀಗ ಕಂಗನಾ ತೇಜಸ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಕಂಗನಾ ವಾಯುಸೇನೆಯ ಪೈಲೆಟ್ ಆಗಿ ಕಾಣಿಸಿಕೊಂಡಿದ್ದಾರೆ.

  English summary
  Bollywood Actress Kangana Ranaut starrer Thalaivi team Kanchipuram saree gifts to Samantha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X