ಪ್ಯಾಂಟ್ ಜಿಪ್ ಬಿಚ್ಚಿದ ಪಟಾಕ; ಶೃಂಗೇರಿ ಬೆಡಗಿಯ ಬೆಡಗು ಬಿನ್ನಾಣ
ಕನ್ನಡ ನಟಿ ನಭಾ ನಟೇಶ್ ಸದ್ಯ ತೆಲುಗು ಚಿತ್ರರಂಗದಲ್ಲೇ ಸೆಟ್ಲ್ ಆಗಿ ಬಿಟ್ಟಿದ್ದಾರೆ. ಕನ್ನಡ ಚಿತ್ರರಂಗವನ್ನು ಮರೆತೇಬಿಟ್ಟಿದ್ದಾರೆ. ಶೃಂಗೇರಿ ಮೂಲದ ಬೆಡಗಿ 'ವಜ್ರಕಾಯ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದರು. ಬಳಿಕ ಮತ್ತೆರಡು ಸಿನಿಮಾಗಳಲ್ಲಿ ಮಿಂಚಿದರು.
ತೆಲುಗು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಬಳಿಕ ಮತ್ತೆ ಸ್ಯಾಂಡಲ್‌ವುಡ್ ಕಡೆ ಮುಖ ಮಾಡಲಿಲ್ಲ. ಟಾಲಿವುಡ್‌ನಲ್ಲಿ ಕೂಡ ದೊಡ್ಡ ಬ್ರೇಕ್ ಸಿಗಲಿಲ್ಲ. ಇದ್ದಿದ್ದರಲ್ಲಿ 'ಇಸ್ಮಾರ್ಟ್ ಶಂಕರ್' ಸಿನಿಮಾ ತಕ್ಕಮಟ್ಟಿಗೆ ಹೆಸರು ತಂದುಕೊಟ್ಟಿತ್ತು. ಇನ್ನು ಶೃಂಗೇರಿ ಚೆಲುವೆ ನಟನೆಗೆ ಅವಕಾಶ ಇರುವ ಪಾತ್ರಗಳಿಗಿಂತ ಗ್ಲಾಮರ್ ಗೊಂಬೆಯಂತೆ ಮಿಂಚಿದ್ದೇ ಹೆಚ್ಚು.

ಎರಡು ವರ್ಷಗಳ ಹಿಂದೆ ಪಟಾಕ ಚೆಲುವೆ ಗಾಯಗೊಂಡಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆದಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಪಘಾತವೊಂದರಲ್ಲಿ ನನ್ನ ಎಡ ಭುಜಕ್ಕೆ ಪೆಟ್ಟಾಗಿತ್ತು. ಮೂಳೆ ಮುರಿದತ್ತು. ಅದಕ್ಕಾಗಿ ಪದೇ ಪದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದರು.
ಕಳೆದ ವರ್ಷ ನಭಾ ನಟಿಸಿದ 'ಡಾರ್ಲಿಂಗ್' ಸಿನಿಮಾ ಬಿಡುಗಡೆ ಆಗಿತ್ತು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಭಾ ಸಖತ್ ಆಕ್ಟೀವ್ ಆಗಿರುತ್ತಾರೆ. ಬಿಂದಾಸ್ ಫೋಟೊಶೂಟ್‌ಗಳಲ್ಲಿ ಮಿಂಚುತ್ತಿರುತ್ತಾರೆ. ಸದ್ಯ ಆಕೆಯ ಹೊಸ ಫೋಟೊಶೂಟ್ ವೈರಲ್ ಆಗುತ್ತಿದೆ. ಒಳಉಡುಪಿನ ಜಾಹೀರಾತುಗಾಗಿ ಬಿಂದಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ.
ಒಳ ಉಡುಪು ಹೈಲೆಟ್ ಆಗುವಂತೆ ಶರ್ಟ್, ಪ್ಯಾಂಟ್ ಬಟನ್ ಬಿಚ್ಚಿ ಪೋಸ್ ಕೊಟ್ಟಿದ್ದಾರೆ. ಪ್ಯಾಂಟ್ ಜಿಪ್ ಕೂಡ ತೆಗೆದಂತೆ ಕ್ಯಾಮರಾ ಮುಂದೆ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ.
'ಸ್ವಯಂಬು' ಹಾಗೂ 'ನಾಗಬಂಧಂ' ಎಂಬ ಎರಡು ಸಿನಿಮಾಗಳಲ್ಲಿ ನಭಾ ನಟೇಶ್ ಬಣ್ಣ ಹಚ್ಚಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 50 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಪಟಾಕ ಪೋರಿಗೆ ಇದ್ದಾರೆ. ಈಗಾಗಲೇ 700ಕ್ಕೂ ಅಧಿಕ ಪೋಸ್ಟ್ ಮಾಡಿದ್ದಾರೆ. 400ಕ್ಕೂ ಅಧಿಕ ಜನರನ್ನು ಆಕೆ ಫಾಲೋ ಮಾಡುತ್ತಿದ್ದಾರೆ.
ಮೊದಲ ಚಿತ್ರದಲ್ಲೇ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಜೊತೆ ನಭಾ ನಟಿಸಿದ್ದರು. 'ವಜ್ರಕಾಯ' ಚಿತ್ರದ ಖಡಕ್ ಪಾತ್ರದಲ್ಲಿ ಮಿಂಚಿದ್ದರು. ಭರತನಾಟ್ಯ ಕೂಡ ಕಲಿತಿರುವ ನಭಾ ಒಳ್ಳೆ ಡ್ಯಾನ್ಸರ್ ಕೂಡ ಹೌದು. 'ವಜ್ರಕಾಯ' ಬಳಿಕ 'ಲೀ' ಹಾಗೂ 'ಸಾಹೇಬ' ಎಂಬ ಮತ್ತೆರಡು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದು ಗೊತ್ತೇಯಿದೆ.
'ನನ್ನು ದೋಚುಕುಂದುವಟೇ' ತೆಲುಗಿನಲ್ಲಿ ನಭಾ ನಟೇಶ್ ನಟಿಸಿದ ಮೊದಲ ಸಿನಿಮಾ. ಬಳಿಕ 'ಅದುಗೋ', 'ಇಸ್ಮಾರ್ಟ್ ಶಂಕರ್', 'ಡಿಸ್ಕೋ ರಾಜಾ', 'ಸೋಲೊ ಬ್ರದುಕೆ ಸೋ ಬೆಟರ್', 'ಅಲ್ಲುಡು ಅದುರ್ಸ್', 'ಮೆಸ್ಟ್ರೋ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡಿದ್ದರು. ದೊಡ್ಡಮಟ್ಟದ ಗೆಲುವು ಮಾತ್ರ ಸಿಗಲೇಯಿಲ್ಲ. ಸದ್ಯ ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಶೀಘ್ರದಲ್ಲೇ ಇನ್ನೆರಡು ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮಾಹಿತಿ ಸಿಗಲಿದೆ.


Click it and Unblock the Notifications











