ಅಲ್ಲು ಅರ್ಜುನ್ ಜೊತೆ 'ಕಿಸ್ಸಿಕ್' ಎಂದು ಕುಣಿದ ಖುಷಿಯಲ್ಲಿ ₹3 ಕೋಟಿ ಖರ್ಚು ಮಾಡಿದ ಶ್ರೀಲೀಲಾ..!

ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಸಿನಿಮಾವೊಂದು ಸಕ್ಸಸ್ ಆಗಿಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ ಎಂಬುದಕ್ಕೆ ಶ್ರೀಲೀಲಾನೇ ಸಾಕ್ಷಿ. ಹೌದು.. 2019ರ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ 'ಕಿಸ್' ಸಿನಿಮಾ ಕೂಡಾ ಒಂದು. ಶ್ರೀಲೀಲಾ ಅವರ ಬಣ್ಣದ ಕನಸು ಆರಂಭವಾಗಿದ್ದು ಇದೇ ಚಿತ್ರದಿಂದ.

ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದರೂ ಆ ಕಾಲದಲ್ಲಿ ಹತ್ ಹತ್ರ 90 ಚಿತ್ರಮಂದಿರದಲ್ಲಿ 25 ದಿನ ಪೂರೈಸಿದ್ದ 'ಕಿಸ್' ಚಿತ್ರದಿಂದ ಶ್ರೀಲೀಲಾ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದಾಚೆ ಭರಾಟೆ.. ಬೈ ಟು ಲವ್.. ಚಿತ್ರಗಳನ್ನು ಮಾಡಿದ ಶ್ರೀಲೀಲಾ ಆ ನಂತರ ಸೀದಾ ಹೋಗಿದ್ದು ಆಂಧ್ರ ಪ್ರದೇಶಕ್ಕೆ.

Kannada and Telugu actress Sreeleela who shook a leg in Pushpa 2 has invested 3 crore in this

ಹಾಗೇ ನೋಡಿದರೆ ಧಮಾಕಾ ಚಿತ್ರಕ್ಕೂ ಮುನ್ನ, ರೋಶನ್ ಜೊತೆ ಶ್ರೀಲೀಲಾ ಸಿನಿಮಾ ಮಾಡಿದ್ದರು. ಆದರೆ .. ಆ ಸಿನಿಮಾ ಅಷ್ಟಕಷ್ಟೇ ಅನ್ನುವ ವ್ಯಾಪಾರ ಮಾಡಿತು. ಟಆದರೆ ರವಿತೇಜಾ ಅವರ 'ಧಮಾಕಾ' ಶ್ರೀಲೀಲಾ ಅವರ ಹೆಸರನ್ನ ಹೈದ್ರಾಬಾದ್‌ನೆಲ್ಲೆಡೆ ಜನಪ್ರಿಯತೆ ತಂದು ಕೊಡ್ತು. ಆ ನಂತರ ಒಂದಾದ ಮೇಲೊಂದು ಸಿನಿಮಾ ಮಾಡಿದ ಶ್ರೀಲೀಲಾ ಸದ್ಯಕ್ಕೆ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಾಯಕಿ. ಇದಕ್ಕೆ ಪುರಾವೆ ಎನ್ನುವಂತೆ ಶ್ರೀಲೀಲಾ ಪುಷ್ಪ 2 ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ಬಿಡುಗಡೆಯೂ ಆಗಿದೆ. ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ 22 ಘಂಟೆಯಲ್ಲಿ ತೆಲುಗಿನಲ್ಲಿ 26 ಮಿಲಿಯನ್ ವೀಕ್ಷಣೆಯನ್ನು ಕಂಡಿದೆ. ಇದರ ನಡುವೆ ಶ್ರೀಲೀಲಾ ಮನೆಗೆ ಹೊಸ ಅತಿಥಿಯ ಪ್ರವೇಶವಾಗಿದೆ.

ಹೌದು, ಪುಷ್ಪ 2ದಲ್ಲಿ ಅಲ್ಲು ಅರ್ಜುನ್ ಜೊತೆ ಕುಣಿದ ಖುಷಿಯಲ್ಲಿ ಶ್ರೀಲೀಲಾ ಒಂದಲ್ಲ, ಎರಡಲ್ಲ, ಮೂರು ಕೋಟಿ ಹಣ ಖರ್ಚು ಮಾಡಿದ್ದಾರೆ. ರೇಂಜ್ ರೋವರ್ LWB ಕಾರನ್ನು ಖರೀದಿಸಿದ್ದಾರೆ. 07 ಸೀಟ್‌ಗಳನ್ನೊಂದಿರುವ ಈ ಕಾರ್ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಮಾದರಿಯಲ್ಲಿ ಲಭ್ಯ ಇದೆ. 07 ಬಣ್ಣಗಳಲ್ಲಿ ಲಭ್ಯ ಇರುವ ಈ ಕಾರು 388 bhp ಪವರ್ ಮತ್ತು 550 Nm ಟಾರ್ಕ್ ಉತ್ಪಾದಿಸುತ್ತೆ. ಇನ್ನೂ ಈ 242 km/h ನ ಗರಿಷ್ಠ ವೇಗವನ್ನು ಹೊಂದಿರುವ ಈ ಕಾರು ಕಂಪನಿಯ ಪ್ರಕಾರ ಕೇವಲ 6 ಸೆಕೆಂಡುಗಳಲ್ಲಿ 0 ರಿಂದ 100 km/h ವೇಗವನ್ನು ತಲುಪುತ್ತೆ.

ಇನ್ನೂ ಡೀಸೆಲ್‌ನಲ್ಲಿ ಆರು ಸಿಲಿಂಡರ್ ಡೀಸೆಲ್ ಇಂಜಿನ್ ಹೊಂದಿರುವ ಕಾರು 46 bhp ಮತ್ತು 700 Nm ಟಾರ್ಕ್ ಉತ್ಪಾದಿಸುತ್ತೆ. ಟಾಪ್-ಎಂಡ್ ವೇರಿಯಂಟ್ 4.4-ಲೀಟರ್ V8 ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 523 bhp ಮತ್ತು 750 Nm ಟಾರ್ಕ್ ಅನ್ನು ಉತ್ಪಾದಿಸುತ್ತೆ. ಇನ್ನುಳಿದಂತೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಹೊಂದಿಕೊಳ್ಳುವ 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕಾರು ಹೊಂದಿದ್ದು ಹಿಂಬದಿಯ ಪ್ರಯಾಣಿಕರಿಗೂ ಅವರ ಮನರಂಜನೆಗಾಗಿ ಅಷ್ಟೇ ದೊಡ್ಡ 13.1-ಇಂಚಿನ ಡಿಸಪ್ಲೇ ಇದೆ.

ಅಂದ್ಹಾಗೇ ಶ್ರೀಲೀಲಾ ಸದ್ಯಕ್ಕೆ ರವಿತೇಜಾ ಜೊತೆ ಮತ್ತೊಂದು ಚಿತ್ರ ಮಾಡುತ್ತಿದ್ದಾರೆ. 'ರಾಬಿನ್ ಹುಡ್' ಚಿತ್ರದಲ್ಲಿ ನಿತಿನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಪವನ್ ಕಲ್ಯಾಣ್ ಜೊತೆ ನಟಿಸುತ್ತಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಸದ್ಯಕ್ಕೆ ನಿಂತುಹೋಗಿದೆ. ಬಾಲಿವುಡ್‌ನಿಂದ ಶ್ರೀಲೀಲಾಗೆ ಬುಲಾವ್ ಬಂದಿದೆ. ಶೀಘ್ರದಲ್ಲಿಯೇ ಶ್ರೀಲೀಲಾ ಅಭಿನಯದ ಮೊದಲ ಹಿಂದಿ ಚಿತ್ರದ ಘೋಷಣೆಯಾಗುವ ಸಾಧ್ಯತೆ ಇದೆ.

More from Filmibeat

Read more about: sreeleela car tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X