ಅಲ್ಲು ಅರ್ಜುನ್ ವಿರುದ್ಧ ತೊಡೆತಟ್ಟಲು ಕನ್ನಡಿಗ ಸಜ್ಜು

ಕನ್ನಡದ ಪ್ರತಿಭೆಗಳು ಹೊರ ರಾಜ್ಯಗಳಿಗೆ ಹೋಗಿ ಅಲ್ಲಿ ಮಿಂಚುತ್ತಿರುವುದು ಹೊಸದೇನಲ್ಲ. ಕನ್ನಡದ ನಟರು ತಮ್ಮ ಪ್ರತಿಭೆಯಿಂದ ನಾಯಕ ನಟನಿಗೆ ಸರಿಸಮನಾದ ಪಾತ್ರಗಳನ್ನೇ ನೆರೆ-ಹೊರೆಯ ಸಿನಿರಂಗಗಳಲ್ಲಿ ಪಡೆಯುತ್ತಿದ್ದಾರೆ.

Recommended Video

Darshan , Puneeth movie shooting stopped .. why ? | Yuvarathna | Robert | Filmibeat Kannada

ಕನ್ನಡದ ಖ್ಯಾತ ವಿಲನ್ ರಾಜ್ ದೀಪಕ್ ಶೆಟ್ಟಿ ಅವರು ಈಗಾಗಲೇ ಹಲವು ಸಿನಿಮಾಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿಯಾಗಿದೆ. ತಮ್ಮ ಹುರಿ ಮೈಕಟ್ಟು, ಗಂಭೀರ ನಟನೆಯಿಂದ ನಿರ್ದೇಶಕರ ಮೆಚ್ಚಿನ ವಿಲನ್ ಅವರಾಗಿದ್ದಾರೆ.

ಇದೇ ರಾಜ್ ದೀಪಕ್ ಶೆಟ್ಟಿ ಅವರು ಈಗ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಮುಂದೆ ತೊಡೆತಟ್ಟಲಿದ್ದಾರೆ. ಎರಡನೇ ವಿಲನ್, ಮೂರನೇ ವಿಲನ್ ಆಗಿ ಸಿನಿಮಾಗಳಲ್ಲಿ ಮಾಡಿರುವ ರಾಜ್ ದೀಪಕ್ ಶೆಟ್ಟಿ ಈಗ ಅಲ್ಲು ಅರ್ಜುನ್ ಸಿನಿಮಾದಲ್ಲಿ ಪ್ರಮುಖ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಅಲ್ಲು ಅರ್ಜುನ್ ಎದುರು ಪ್ರಮುಖ ಪಾತ್ರ

ಅಲ್ಲು ಅರ್ಜುನ್ ಎದುರು ಪ್ರಮುಖ ಪಾತ್ರ

ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವ ಅಲ್ಲು ಅರ್ಜುನ್ ಹೊಸ ಚಿತ್ರವೊಂದರ ಶೂಟಿಂಗ್‌ ಪ್ರಾರಂಭಿಸಿದ್ದಾರೆ, ಆ ಚಿತ್ರದಲ್ಲಿ ಪ್ರಮುಖ ವಿಲನ್ ಪಾತ್ರ ರಾಜ್ ದೀಪಕ್ ಶೆಟ್ಟಿ ಅವರದ್ದಾಗಿದೆ. ದೊಡ್ಡ ತಾರಾಗಣವಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಾನಾ ನಾಯಕಿ, ಜಗಪತಿ ಬಾಬು ಸಹ ಇದ್ದು, ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ.

ಬಿಡುಗಡೆಗೆ ತಯಾರಾಗಿರುವ ಸಿನಿಮಾಗಳ ಪಟ್ಟಿ

ಬಿಡುಗಡೆಗೆ ತಯಾರಾಗಿರುವ ಸಿನಿಮಾಗಳ ಪಟ್ಟಿ

ರಾಜ್ ದೀಪಕ್ ಶೆಟ್ಟಿ ಅವರ ಹಲವು ಸಿನಿಮಾಗಳು ಬಿಡುಗಡೆಗೆ ತಯಾರಾಗಿದ್ದು, ಇಲ್ಲಿದೆ ನೋಡಿ ಪಟ್ಟಿ; ರಾಣಾ ದಗ್ಗುಬಟಿ ಜೊತೆ ನಟಿಸಿರುವ ವಿರಾಟ ಪರ್ವಮ್, ಜಗಪತಿ ಬಾಬು ಅವರೊಂದಿಗೆ ಹೆಸರಿಡದ ಚಿತ್ರ, ವಿಕ್ಟರಿ ವೆಂಕಟೇಶ್ ಅಭಿನಯದ ಅಸುರನ್ ಚಿತ್ರದ ರೀಮೇಕ್ ನಾರಪ್ಪ, ಕನ್ನಡದ ರಣಂ, ಭಟಾರೆ, ಕೋಟಿಗೊಬ್ಬ 3, ರವಿಚಂದ್ರ, ಅರ್ಜುನ್ ಗೌಡ, ಪೊಗರು, ಗಡಿಯಾರ ಚಿತ್ರಗಳು ಬಿಡುಗಡೆಗೆ ತಯಾರಾಗಿವೆ.

ಧಾರವಾಹಿ ಮೂಲಕ ಸಿನಿಮಾಕ್ಕೆ ಪ್ರವೇಶ

ಧಾರವಾಹಿ ಮೂಲಕ ಸಿನಿಮಾಕ್ಕೆ ಪ್ರವೇಶ

ಧಾರವಾಹಿ ನಟನೆಯ ಮೂಲಕ ಬೆಳ್ಳಿತೆರೆ ಪ್ರವೇಶಿಸಿರುವ ರಾಜ್ ದೀಪಕ್ ಶೆಟ್ಟಿ ಶಿವರಾಜ್ ಕುಮಾರ್ ಅವರ ಶ್ರೀಕಂಠ, ಟೈಗರ್ ಮೂಲಕ ವಿಲನ್ ಪಾತ್ರಗಳನ್ನು ಆರಂಭಿಸಿದರು. ತೆಲುಗಿನ ಐ ಸ್ಮಾರ್ಟ್ ಶಂಕರ್ ಸೇರಿ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ಹೀರೋ ಪಾತ್ರಗಳು ಬೇಡ, ವಿಲನ್ ಸಾಕು

ಹೀರೋ ಪಾತ್ರಗಳು ಬೇಡ, ವಿಲನ್ ಸಾಕು

ಹುರಿಗಟ್ಟಿದ ಮೈಕಟ್ಟು ಹೊಂದಿರುವ ರಾಜ್‌ ದೀಪಕ್ ಶೆಟ್ಟಿ, ನಾಯಕನ ಪಾತ್ರಗಳು ಹುಡುಕಿಕೊಂಡು ಬಂದರೂ ಸಹ ಅದನ್ನು ನಿರಾಕರಿಸಿ ತಾವು ವಿಲನ್ ಪಾತ್ರಗಳಲ್ಲೇ ಮುಂದುವರೆಯುವುದಾಗಿ ಹೇಳಿದ್ದಾರಂತೆ. ತಿನ್ನಲಾಗದ ಅಡುಗೆಯನ್ನು ಬಡಿಸಿಕೊಂಡು ಪ್ರಯೋಜನವಿಲ್ಲ ಎಂಬುದು ಹೀರೋ ಪಾತ್ರಗಳ ನಿರಾಕರಣೆಯ ಹಿಂದಿರುವ ರಾಜ್ ಶೆಟ್ಟಿ ನಂಬಿರುವ ವೇದಾಂತ.

More from Filmibeat

English summary
Kannadiga Raj Deepak Shetty acting as main villain in Allu Arjun's upcoming Telugu movie. Sukumar is directing the movie Rashmika Mandana is the heroine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X