ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ಕಣ್ಣಪ್ಪ'ನಿಗೆ ಮತ್ತೊಂದು ಪೆಟ್ಟು

ಮಂಚು ವಿಷ್ಣು ಹಾಗೂ ಪ್ರಭಾಸ್ ನಟನೆಯ 'ಕಣ್ಣಪ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಇದೆಲ್ಲದರ ನಡುವೆ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ಶುಕ್ರವಾರ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿದೆ.

ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ 'ಕಣ್ಣಪ್ಪ' ಸಿನಿಮಾ ನಿರ್ಮಾಣವಾಗಿದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಪೌರಾಣಿಕ ಕಥಾಹಂದರದ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಪ್ರಭಾಸ್ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿ ಚಿತ್ರಕ್ಕೆ ಬಲ ತುಂಬಿದ್ದಾರೆ. ಪ್ರಭಾಸ್ ಕಾರಣಕ್ಕೆ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದರು. ಆದರೆ ಎರಡೇ ದಿನಕ್ಕೆ ಸಿನಿಮಾ ಆರ್ಭಟ ತಣ್ಣಗಾಗಿದೆ. ಇದೀಗ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ.

Kannappa Faces Piracy Blow After Disappointing Box Office Weekend Despite Prabhas Star Power

ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಸಿನಿಮಾಗಳಿಗೆ ಪೈರಸಿ ಭೂತ ಕಾಡುತ್ತಲೇ ಇದೆ. 5 ಭಾಷೆಗಳಲ್ಲಿ ತೆರೆಗೆ ಬಂದಿರುವ ಚಿತ್ರವನ್ನು ಚಿತ್ರಮಂದಿರದಲ್ಲೇ ಕಿಡಿಗೇಡಿಗಳು ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಲೀಕ್ ಮಾಡಿದ್ದಾರೆ. ಚಿತ್ರತಂಡ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಇದನ್ನು ತಡೆಯಲು ಸಾಧ್ಯವಾಗಿಲ್ಲ. ಈ ಬಗ್ಗೆ ನಟ ಮಂಚು ವಿಷ್ಣು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಪೈರಸಿ ಮಾಡುವವರು ಕಳ್ಳರು. ಅದನ್ನು ನೋಡುವವರು ಕೂಡ ಎಂದು ನಟ ಮಂಚು ವಿಷ್ಣು ಅಸಮಾಧಾನ ಹೊರ ಹಾಕಿದ್ದಾರೆ. "ಸಿನಿಪ್ರೇಮಿಗಳೇ, 'ಕಣ್ಣಪ್ಪ' ಚಿತ್ರಕ್ಕೆ ಪೈರಸಿ ಪೆಟ್ಟು ಬಿದ್ದಿದೆ. ಈಗಾಗಲೇ 30,000 ಕ್ಕೂ ಹೆಚ್ಚು ಅಕ್ರಮ ಲಿಂಕ್‌ಗಳನ್ನು ತೆಗೆದುಹಾಕಲಾಗಿದೆ. ಇದು ನಿಜಕ್ಕೂ ಬೇಸರದ ಸಂಗತಿ. ಪೈರಸಿ ಎಂದರೆ ಕಳ್ಳತನ. ನಾವು ನಮ್ಮ ಮಕ್ಕಳಿಗೆ ಕದಿಯಲು ಕಲಿಸುವುದಿಲ್ಲ. ಪೈರೇಟೆಡ್ ಸಿನಿಮಾ ನೋಡುವುದು ಕೂಡ ಕಳ್ಳತನಕ್ಕೆ ಸಮ. ದಯವಿಟ್ಟು ಅದನ್ನು ಪ್ರೋತ್ಸಾಹಿಸಬೇಡಿ. ಸಿನಿಮಾವನ್ನು ಸರಿಯಾದ ರೀತಿಯಲ್ಲಿ ಬೆಂಬಲಿಸಿ" ಎಂದು ನಟ ವಿಷ್ಣು ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಭಕ್ತ ಕಣ್ಣಪ್ಪನ ಜೀವನಚರಿತ್ರೆಯನ್ನು ಕೆಲ ಸಿನಿಮಾಗಳಲ್ಲಿ ತೋರಿಸಲಾಗಿದೆ. ಅದೇ ಕಥೆಯನ್ನು ಕೊಂಚ ಬದಲಿಸಿ ಹೊಸ ರೂಪದಲ್ಲಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ. ಆದರೆ ಅದರಲ್ಲಿ ಸಾಕಷ್ಟು ಯಶಸ್ಸು ಸಿಕ್ಕಿಲ್ಲ. ಸಿನಿಮಾ ನೋಡುಗರಿಗೆ ಬೇಸರ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟ್ರೋಲ್ ಮಾಡಲಾಗುತ್ತಿದೆ. ಇದೆಲ್ಲದರ ನಡುವೆ ಚಿತ್ರವನ್ನು ಮೇಲೆತ್ತಲು ವಿಷ್ಣು ಪ್ರಯತ್ನಿಸುತ್ತಿದ್ದಾರೆ.

ನಾಸ್ತಿಕನಾಗಿದ್ದ ಬೇಡರ ದಿಣ್ಣ ಮುಂದೆ ಶಿವನ ಪರಮಭಕ್ತನಾಗಿ ತನ್ನ ಕಣ್ಣುಗಳನ್ನು ಅರ್ಪಿಸುವ ಕಥೆ ಚಿತ್ರದಲ್ಲಿದೆ. ಆದರೆ ನ್ಯೂಜಿಲೆಂಡ್ ಕಾಡಿನಲ್ಲಿ ಕಾಳಹಸ್ತಿಯ ಕಥೆ ಹೇಳುವ ಪ್ರಯತ್ನ ದೊಡ್ಡ ಹೊಡೆತ ಕೊಟ್ಟಿದೆ. ರುದ್ರ ಆಗಿ ನಟ ಪ್ರಭಾಸ್ ಮೋಡಿ ಮಾಡಿದ್ದಾರೆ. ಅವರು ತೆರೆಮೇಲೆ ಇರುವ 15 ನಿಮಿಷ ಪ್ರೇಕ್ಷಕರ ಕಣ್ಣಿಗೆ ಹಬ್ಬ. ಉಳಿದಂತೆ ಸಿನಿಮಾ ನಿರಾಸೆ ಮೂಡಿಸುತ್ತದೆ. ಆಂಧ್ರ, ತೆಲಂಗಾಣದಲ್ಲಿ ಕೊಂಚಮಟ್ಟಿಗೆ ಸಿನಿಮಾ ಸದ್ದು ಮಾಡ್ತಿದೆ. ಉಳಿದ ಕಡೆಗಳಲ್ಲಿ ನೆಲ ಕಚ್ಚಿದೆ. ಇದೆಲ್ಲದರ ನಡುವೆ ಕಂಪ್ಲೀಟ್ ಸಿನಿಮಾ ಲೀಕ್ ಆಗಿ ಎಡವಟ್ಟಾಗಿದೆ.

ಮೊದಲ ದಿನ ಬಾಕ್ಸಾಫೀಸ್‌ನಲ್ಲಿ 'ಕಣ್ಣಪ್ಪ' ಸಿನಿಮಾ 9 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಶನಿವಾರ ಮತ್ತು ಭಾನುವಾರ ಸಿನಿಮಾ ತಲಾ 7 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ Sacnilk.com ವೆಬ್‌ಸೈಟ್ ವರದಿ ಮಾಡಿದೆ. ಒಟ್ಟಾರೆ ಫಸ್ಟ್ ವೀಕೆಂಡ್ ಸಿನಿಮಾ 23 ಕೋಟಿ ರೂ. ಮಾತ್ರ ಗಳಿಕೆ ಕಂಡಿದೆ. ಭಾರೀ ಬಜೆಟ್, ದೊಡ್ಡ ತಾರಾಗಣ ಇದ್ದ ಚಿತ್ರಕ್ಕೆ ಈ ಕಲೆಕ್ಷನ್ ಬಹಳ ಕಮ್ಮಿ ಎನ್ನಲಾಗ್ತಿದೆ.

More from Filmibeat

English summary
Manchu Vishnu and Prabhas' mythological film Kannappa struggles at the box office with just ₹23 crore in its opening weekend.
Read more about: prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X