ಪ್ರಪಂಚದ ಮೂಲೆ ಮೂಲೆಗೆ 'ಕಣ್ಣಪ್ಪ'; ದಾಖಲೆ ಮಟ್ಟದಲ್ಲಿ ರಿಲೀಸ್

ಮಂಚು ವಿಷ್ಣು ನಟನೆಯ ಪೌರಾಣಿಕ ಸಿನಿಮಾ 'ಕಣ್ಣಪ್ಪ' ಈ ವಾರ ತೆರೆಗೆ ಬರ್ತಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಈಗಾಗಲೇ ಚಿತ್ರದ ಸಾಂಗ್, ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ.

ಮೋಹನ್ ಲಾಲ್, ಪ್ರಭಾಸ್ ಹಾಗೂ ಅಕ್ಷಯ್‌ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿರುವುದು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಮುಖೇಶ್ ಕುಮಾರ್ ಸಿಂಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬೇಡ ದಿಣ್ಣನಾಗಿ ಮಂಚು ವಿಷ್ಣು ನಟಿಸಿದ್ದಾರೆ. ಅವರ ತಂದೆ ಮೋಹನ್ ಬಾಬು 'ಕಣ್ಣಪ್ಪ' ಸಿನಿಮಾ ನಿರ್ಮಿಸಿ ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Kannappa film set for a massive release on 5 400 screens worldwide

ದೇಶ ವಿದೇಶಗಳಲ್ಲಿ 'ಕಣ್ಣಪ್ಪ' ಸಿನಿಮಾ ಚಿತ್ರೀಕರಣ ನಡೆದಿದೆ. ಬರೋಬ್ಬರಿ 5400 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಐಮ್ಯಾಕ್ಸ್, ಸ್ರೀನ್ ಎಕ್ಸ್ ಹಾಗೂ 4ಡಿಎಕ್ಸ್‌ ಸ್ಕ್ರೀನ್‌ಗಳಲ್ಲಿ 'ಕಣ್ಣಪ್ಪ' ದರ್ಶನವಾಗಲಿದೆ. ಯುಎಸ್‌ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ಆರಂಭದಲ್ಲಿ ಪೋಸ್ಟರ್, ಟೀಸರ್ ನೋಡಿ ಸಿನಿರಸಿಕರು ಬೇಸರಗೊಂಡಿದ್ದರು. ಬಳಿಕ ಬಂದ ಟ್ರೈಲರ್ ಕೊಂಚಮಟ್ಟಿಗೆ ಸಿನಿಮಾ ಮೇಲೆ ಕುತೂಹಲ ಮೂಡಿಸಿದೆ.

ಬೇಡರ ಕಣ್ಣಪ್ಪ ಕಥೆಯನ್ನೇ ಕೊಂಚ ಭಿನ್ನವಾಇ ತೆರೆಗೆ ತರುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಕಣ್ಣಪ್ಪ ಸಿನಿಮಾ ಮಾಡಿ ದಿಣ್ಣನಾಗಿ ನಟಿಸಬೇಕೆಂದು ಪ್ರಭಾಸ್ ಆಸೆ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಮಂಚು ವಿಷ್ಣು ಚಿತ್ರದಲ್ಲಿ ಯಾವುದೇ ಸಂಭಾವನೆ ಪಡೆಯದೇ ಪ್ರಭಾಸ್ ನಟಿಸಿದ್ದಾರೆ. ಮೋಹನ್ ಲಾಲ್ ಕೂಡ ಸಂಭಾವನೆ ಬೇಡ ಎಂದು ಹೇಳಿದ್ದಾರೆ.

ಟ್ರೈಲರ್ ಗುಣಮಟ್ಟ ಚೆನ್ನಾಗಿಯೇ ಇದೆ. ವಿಷ್ಯುವಲ್ಸ್ ಅದ್ಧೂರಿಯಾಗಿರುವುದನ್ನು ನೋಡಬಹುದು. ಆದರೆ ಭಕ್ತ ಕಣ್ಣಪ್ಪನ ಕಥೆಯನ್ನು ಒಂದು ಸಾಹಸಮಯ ಕಥೆಯ ರೂಪದಲ್ಲಿ ತೋರಿಸಿರುವಂತೆ ಕಾಣುತ್ತಿದೆ. ಬೇಡನಾಗಿದ್ದ ಕಣ್ಣಪ್ಪನನ್ನು ಅಪ್ರತಿಮ ಸಾಹಸಿ ಎನ್ನುವಂತೆ ಯುದ್ಧಗಳನ್ನೆಲ್ಲಾ ಸೇರಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಭಾರತದಲ್ಲಿ ಕೂಡ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ.

ಸದ್ಯ ಯಾವುದೇ ದೊಡ್ಡ ಸಿನಿಮಾ ಚಿತ್ರಮಂದಿರಗಳಲ್ಲಿ ಇಲ್ಲ. ಹಾಗಾಗಿ ಹೆಚ್ಚು ಸ್ಕ್ರೀನ್‌ಗಳು 'ಕಣ್ಣಪ್ಪ' ಚಿತ್ರಕ್ಕೆ ಸಿಕ್ಕಿದೆ. ಭಾರತದಲ್ಲಿ 4300 ಸ್ಕ್ರೀನ್‌ಗಳು ಹಾಗೂ ವಿದೇಶದಲ್ಲಿ 1100 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಪ್ರಭಾಸ್‌ಗಾಗಿ ಸಿನಿಮಾ ನೋಡುತ್ತೇವೆ ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನುಳಿದಂತೆ ಸಿನಿಮಾ ಅಷ್ಟೇನು ಹೈಪ್ ಕ್ರಿಯೇಟ್ ಮಾಡಿಲ್ಲ. ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 195 ನಿಮಿಷಗಳ ಕಾಲಾವಧಿಯ ಚಿತ್ರಕ್ಕೆ ಸಾಕಷ್ಟು ಬದಲಾವಣೆಯನ್ನು ಸೆನ್ಸಾರ್ ಮಂಡಳಿ ಸೂಚಿಸಿದೆ. ಅದಕ್ಕೆಲ್ಲಾ ಕತ್ತರಿ ಹಾಕಿದ ಬಳಿಕ ಕಾಲಾವಧಿ 182 ನಿಮಿಷ(3 ಗಂಟೆ 2 ನಿಮಿಷ)ಕ್ಕೆ ಇಳಿದಿದೆ. ಆಕ್ಷೇಪ ವ್ಯಕ್ತಪಡಿಸಿದ 12 ಕಟ್‌ಗಳಿಗೆ ಚಿತ್ರತಂಡ ಒಪ್ಪಿಕೊಂಡಿದೆ.

'ಕಣ್ಣಪ್ಪ' ಚಿತ್ರದಲ್ಲಿ ಕನ್ನಡ ನಟ ದೇವರಾಜ್ ಸಹ ನಟಿಸಿದ್ದಾರೆ. ಇನ್ನುಳಿದಂತೆ ಶರತ್‌ ಕುಮಾರ್, ಮಧೂ, ಕಾಜಲ್ ಅಗರ್‌ವಾಲ್, ಬ್ರಹ್ಮಾನಂದಂ, ಬ್ರಹ್ಮಾಜಿ ಸೇರಿದಂತೆ ದೊಡ್ಡ ತಾರಾಗಣವಿದೆ. ನ್ಯೂಜಿಲೆಂಡ್‌ನಲ್ಲೇ ಬಹುತೇಕ ಸಿನಿಮಾ ಚಿತ್ರೀಕರಣ ನಡೆದಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಚಿತ್ರತಂಡ ಬೆಂಗಳೂರು ಸೇರಿದಂತೆ ಹಲವು ಭಾಗಗಳಿಗೆ ತೆರಳಿ ಸಿನಿಮಾ ಪ್ರಚಾರ ಮಾಡಿ ಬಂದಿದೆ.

More from Filmibeat

English summary
Prabhas, Manchu Vishnu starrer Kannappa is gearing up for a grand release on 5,400+ screens globally
Read more about: prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X