10ನೇ ದಿನವೂ 'ಕಾಂತಾರ- 1' ಹವಾ; 2ನೇ ಶನಿವಾರ ಸಿನಿಮಾ ಕಲೆಕ್ಷನ್ ಬಲು ಜೋರು

"ಸೋಮವಾರದ್ ಮೇಲ್ ನೋಡ್ರೀ... ಹೆಂಗ್ ಬಿದ್ದೋಗುತ್ತೆ ಅಂದೋರಿಗೆ.. ವರ್ಷಪೂರ್ತಿ ನೋಡ್ತಾಯಿರಿ.. ನಿಮಗ್ ಕತ್ ನೋವುತ್ತೇ ಹೊರತು ಬಿದ್ದೋಗಲ್ಲ... ಎಂದು ಸಾರಿ." ಎಂದು ಇತ್ತೀಚೆಗೆ ನಟ ದುನಿಯಾ ವಿಜಯ್ ಟ್ವೀಟ್ ಮಾಡಿದ್ದರು. 'ಕಾಂತಾರ- 1' ಚಿತ್ರತಂಡವನ್ನು ಅಭಿನಂದಿಸಿದ್ದರು. ಅವರು ಹೇಳಿದಂತೆ ಸಿನಿಮಾ ದಿನದಿಂದ ದಿನಕ್ಕೆ ಹವಾ ಎಬ್ಬಿಸುತ್ತಲೇ ಇದೆ.

2ನೇ ಶನಿವಾರ ಕೂಡ ಚಿತ್ರಮಂದಿರಗಳಲ್ಲಿ 'ಕಾಂತಾರ-1' ಖದರ್ ಜೋರಾಗಿದೆ. ಈಗಾಗಲೇ 'ಕೂಲಿ', 'ಸಯ್ಯಾರ' ದಾಖಲೆ ಮುರಿದು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶೀಘ್ರದಲ್ಲೇ 'ಛಾವ' ದಾಖಲೆ ಮುರಿದು ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವ ಸಾಧ್ಯತೆಯಿದೆ. ಸಹಜವಾಗಿ ವೀಕೆಂಡ್‌ಗಳಲ್ಲಿ ಯಾವುದೇ ಸಿನಿಮಾ ಗಳಿಕೆ ಚೆನ್ನಾಗಿರುತ್ತದೆ. ವಾರದ ದಿನಗಳಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ಶನಿವಾರ ಕೂಡ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿದೆ.

Kantara-1 Roars Again on 2nd Saturday Rishab Shetty s Film Races Toward 600 Crore

10ನೇ ದಿನವೂ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಇನ್ನೇನು ಸಿನಿಮಾ ಕಥೆ ಮುಗೀತು ಎನ್ನುವವರಿಗೆ ತಿರುಗೇಟು ಕೊಡುವಂತಿದೆ 'ಕಾಂತಾರ- 1' ಗೆಲುವಿನ ಓಟ. ಗಂಟೆಗೆ 50 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಬುಕ್‌ಮೈ ಶೋನಲ್ಲಿ ಬುಕ್ ಆಗಿ ದಾಖಲೆ ಬರೆದಿದೆ. 2ನೇ ಶನಿವಾರ ಈ ಮಟ್ಟಿಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ದಾಖಲೆ ಎಂದೇ ಹೇಳಬಹುದು. ಮೊದಲ ವಾರವೇ ಸಿನಿಮಾ 509.25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಮಾಹಿತಿ ನೀಡಿತ್ತು.

ಶೀಘ್ರದಲ್ಲೇ 'ಕಾಂತಾರ- 1' ಸಿನಿಮಾ 600 ಕೋಟಿ ರೂ, ಕಲೆಕ್ಷನ್ ಮಾಡುವ ಸುಳಿವು ಸಿಕ್ತಿದೆ. ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಛಾವ' ಸಿನಿಮಾ 797 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು ಮುಂದಿನ ವಾರದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಮೀರುವ ಸಾಧ್ಯತೆಯಿದೆ. ಪರಭಾಷಿಕರು ಕೂಡ ರಿಷಬ್ ಶೆಟ್ಟಿ ನಟನೆ ನೋಡಿ ಫಿದಾ ಆಗಿದ್ದಾರೆ. ಎಲ್ಲೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. 10ನೇ ದಿನ 40 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿರುವ ಅಂದಾಜಿದೆ.

Kantara-1 Roars Again on 2nd Saturday Rishab Shetty s Film Races Toward 600 Crore

2ನೇ ಶನಿವಾರ 'ಕಾಂತಾರ- 1' ಸಿನಿಮಾ ಆರ್ಭಟ ನೋಡಿದ್ರೆ, ಭಾನುವಾರ(ಅಕ್ಟೋಬರ್ 12) ಮತ್ತಷ್ಟು ಹೆಚ್ಚು ಗಳಿಕೆ ಕಾಣುವ ಸಾಧ್ಯತೆಯಿದೆ. ಶಾಲಾ, ಕಾಲೇಜು, ಆಫೀಸ್ ರಜೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಿನಿಮಾ ನೋಡುವ ಸಾಧ್ಯತೆಯಿದೆ. 2ನೇ ವಾರ ಆಗಿರುವುದರಿಂದ ಕೆಲವರು ನೇರವಾಗಿ ಚಿತ್ರಮಂದಿರಗಳಿಗೆ ತೆರಳಿ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಾರೆ. ಆ ಲೆಕ್ಕ ಅಷ್ಟು ಸುಲಭವಾಗಿ ಸಿಗಲ್ಲ.

2ನೇ ಭಾನುವಾರ(ಅಕ್ಟಬರ್ 12) ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಬೆಳಗಿನ ಶೋಗಳ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಫಾಸ್ಟ್ ಪಿಲ್ಲಿಂಗ್ ನಡೀತಿದೆ. ಸಾಕಷ್ಟು ಶೋಗಳು ಹೌಸ್‌ಫುಲ್ ಆಗುವ ಸುಳಿವು ಸಿಗುತ್ತಿದೆ. ಮಲ್ಟಿಪ್ಲೆಕ್ಸ್ ಮಾತ್ರವಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕೂಡ ರೆಸ್ಪಾನ್ಸ್ ಚೆನ್ನಾಗಿದೆ.

ಸೆಕೆಂಡ್ ವೀಕೆಂಡ್ 'ಕಾಂತಾರ- 1' ಕ್ರೇಜ್ ಹೇಗಿದೆ ಅಂದ್ರೆ ಕೆಲವೆಡೆ ಮಾರ್ನಿಂಗ್ ಶೋಗಳು ಆಯೋಜಿಸಲಾಗುತ್ತಿದೆ. ಸಂಜಯ್ ನಗರದ ವೈಭವ್ ಚಿತ್ರಮಂದಿರದಲ್ಲಿ ಬೆಳಗ್ಗೆ 6.50ಕ್ಕೆ ಶೋ ಫಿಕ್ಸ್ ಆಗಿದೆ. ತಮಿಳುನಾಡಿನಲ್ಲಿ ಸಹ 'ಕಾಂತಾರ- 1' ಕಾರುಬಾರು ಜೋರಾಗಿದೆ. ಚೆನ್ನೈನಲ್ಲಿ ಭಾನುವಾರ ಕೂಡ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ. ಕೋಯಂಬತ್ತೂರಿನಲ್ಲಿ ಕನ್ನಡ ವರ್ಷನ್ ಸಿನಿಮಾ ಫಾಸ್ಟ್‌ ಫಿಲ್ಲಿಂಗ್ ನಡೀತಿದೆ.

More from Filmibeat

Read more about: hombale films rishab shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X