Kantara-1 vs War-2: ಬಿಡುಗಡೆಗೂ ಮುನ್ನ 'ವಾರ್- 2' ದಾಖಲೆ ಮುರಿದ 'ಕಾಂತಾರ-1'

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ'-1 ಸಿನಿಮಾ ತೆರೆಗಪ್ಪಳಿಸಲು ದಿನಗಣನೆ ಶುರುವಾಗಿದೆ. ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ ಭರ್ಜರಿಯಾಗಿದೆ. ಶೀಘ್ರದಲ್ಲೇ ಸಿನಿಮಾ ಪ್ರಮೋಷನ್ ಶುರುವಾಗಲಿದೆ. ಟೀಸರ್ ಬಿಡುಗಡೆ ಮಾಡದೇ ಸಿನಿಆ ಬಗ್ಗೆ ಹೈಪ್ ಕ್ರಿಯೇಟ್ ಆಗಿದೆ. ಇನ್ನು ಸಾಂಗ್ಸ್, ಟ್ರೈಲರ್ ಬಂದರೆ ಕ್ರೇಜ್ ದುಪ್ಪಟ್ಟಾಗಲಿದೆ.

ಕನ್ನಡ ಸಿನಿರಸಿಕರು ಮಾತ್ರವಲ್ಲ ದೇಶ ವಿದೇಶಗಳಲ್ಲಿರುವ ಸಿನಿಪ್ರೇಮಿಗಳು ಮತ್ತೆ 'ಕಾಂತಾರ' ಪ್ರಪಂಚಕ್ಕೆ ಹೋಗಲು ಕಾಯುತ್ತಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಈ ಬಾರಿ ಸಿನಿಮಾ ನಿರ್ಮಾಣವಾಗಿದೆ. ಬರೀ ಮೇಕಿಂಗ್ ವಿಡಿಯೋ ನೋಡಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಈಗಾಗಲೇ 'ವಾರ್- 2' ದಾಖಲೆಯನ್ನು ರಿಷಬ್ ಸಿನಿಮಾ ಹಿಂದಿಕ್ಕಿದೆ.

Kantara-1 Surpasses War-2 in Pre-Release Buzz Ahead of Dussehra Release

ಅಕ್ಟೋಬರ್ 2ಕ್ಕೆ ದಸರಾ ಸಂಭ್ರಮದಲ್ಲಿ 'ಕಾಂತಾರ-1' ಸಿನಿಮಾ ಬಿಡುಗಡೆ ಆಗಲಿದೆ. ಹಾಲಿವುಡ್ ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡಿದ್ದು ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್‌ನಲ್ಲಿ ತಂಡ ಬ್ಯುಸಿಯಾಗಿದೆ. ಫೈನಲ್ ಕಾಪಿಗಾಗಿ ರಿಷಬ್ ಶೆಟ್ಟಿ ಕಾಯುತ್ತಿದ್ದಾರೆ. ಸಿಕ್ಕ ಕೂಡಲೇ ಪ್ರಮೋಷನ್ ಶುರುವಾಗಲಿದೆ.

ಹೊಂಬಾಳೆ ಫಿಲ್ಮ್ಸ್ ತಮ್ಮ ಸಿನಿಮಾಗಳನ್ನು ಬಹಳ ವಿಭಿನ್ನವಾಗಿ ಪ್ರೇಕ್ಷಕರ ಮುಂದೆ ತೆಗೆದುಕೊಂಡು ಹೋಗುತ್ತದೆ. ಅದೇ ರೀತಿ ಈ ಬಾರಿ ಕೂಡ ದೊಡ್ಡದಾಗಿಯೇ ಪ್ಲ್ಯಾನ್ ಮಾಡಿದೆ. ಇನ್ನು ಯಾರೆಲ್ಲಾ ಸಿನಿಮಾ ವಿತರಣೆ ಹಕ್ಕು ಪಡೆದಿದ್ದಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಬಹಳ ದಿನಗಳಿಂದ ಹೊಂಬಾಳೆ ಫಿಲ್ಮ್ಸ್ ಜೊತೆ ಒಡನಾಟ ಹೊಂದಿರುವ ಸಂಸ್ಥೆಗಳಿಗೆ ರೈಟ್ಸ್ ಮಾರಾಟ ಮಾಡಲಾಗ್ತಿದೆ.

Kantara-1 Surpasses War-2 in Pre-Release Buzz Ahead of Dussehra Release

ಕೇರಳ ರೈಟ್ಸ್ ಪೃಥ್ವಿರಾಜ್ ಸುಕುಮಾರನ್ ಪಾಲಾಗಿದೆ. ಉತ್ತರ ಭಾರತ ಹಾಗೂ ನೇಪಾಳದ ರೈಟ್ಸ್ AA ಫಿಲ್ಮ್ಸ್ ಸಂಸ್ಥೆ ಖರೀದಿಸಿದೆ. Phars Film Co LLC ಸಂಸ್ಥೆಗೆ ಓವರ್‌ಸೀಸ್ ರೈಟ್ಸ್ ಕೊಡಲಾಗಿದೆ. ಆಂಧ್ರ, ತೆಲಂಗಾಣ ರೈಟ್ಸ್ ಯಾರಿಗೆ ಸಿಕ್ಕಿದೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ 100 ಕೋಟಿ ರೂ.ಗೆ ರೈಟ್ಸ್ ಮಾರಾಟವಾಗಿ ದಾಖಲೆ ಬರೆದಿದೆ ಎನ್ನಲಾಗ್ತಿದೆ.

ಕರ್ನಾಟಕ ಬಿಟ್ಟರೆ ತೆಲುಗು ರಾಜ್ಯಗಳಲ್ಲಿ 'ಕಾಂತಾರ' ಸಿನಿಮಾ ಹೆಚ್ಚು ಸದ್ದು ಮಾಡಿತ್ತು. ಪ್ರೀಕ್ವೆಲ್ ಸಿನಿಮಾ ನೋಡಲು ತೆಲುಗು ಪ್ರೇಕ್ಷಕರು ಕಾತರರಾಗಿದ್ದಾರೆ. ಡಿಮ್ಯಾಂಡ್‌ಗೆ ಅದಕ್ಕೆ ತಕ್ಕಂತೆ ಹೊಂಬಾಳೆ ಸಂಸ್ಥೆ ತೆಲುಗು ರೈಟ್ಸ್ ಮಾರಾಟ ಮಾಡಿದೆ ಎಂದು ಹೇಳಲಾಗ್ತಿದೆ. ನೈಜಾಂ ರೈಟ್ಸ್ ಸುಮಾರು 40 ಕೋಟಿ ರೂ, ಆಂಧ್ರ ರೈಟ್ಸ್ 45 ಕೋಟಿ ರೂ, ಹಾಗೂ ಸೀಡೆಡ್ ರೈಟ್ಸ್ 15 ಕೋಟಿ ರೂ.ಗೆ ಬಿಕರಿಯಾಗಿ ಎಂದು ಅಂದಾಜಿಸಲಾಗ್ತಿದೆ.

ಒಂದು ವೇಳೆ 'ಕಾಂತಾರ'-1 ಚಿತ್ರದ ಆಂಧ್ರ, ತೆಲಂಗಾಣ ರೈಟ್ಸ್ 100 ಕೋಟಿ ರೂ.ಗೆ ಮಾರಾಟವಾಗಿದ್ದರೆ ಅದು ಹೊಸ ದಾಖಲೆಯೇ ಸರಿ. ಸಾಮಾನ್ಯವಾಗಿ ಪರಭಾಷಾ ಸಿನಿಮಾಗಳ ರೈಟ್ಸ್ ಇಷ್ಟು ದೊಡ್ಡಮಟ್ಟದಲ್ಲಿ ಮಾರಾಟವಾಗಿರಲಿಲ್ಲ. ಇತ್ತೀಚೆಗೆ ಬಾಲಿವುಡ್ ಸಿನಿಮಾ 'ವಾರ್-2' ರೈಟ್ಸ್ 80 ಕೋಟಿ ರೂ.ಗೆ ಮಾರಾಟವಾಗಿದ್ದೇ ದಾಖಲೆ ಎನ್ನಲಾಗಿತ್ತು. ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ತೆಲುಗು ನಟ ಜ್ಯೂ. ಎನ್‌ಟಿಆರ್ ನಟಿಸಿದ್ದರು. ಹಾಗಾಗಿ 'ವಾರ್-2' ಬಗ್ಗೆ ಅಲ್ಲಿ ಕ್ರೇಜ್ ಇತ್ತು. ಆದರೆ 'ಕಾಂತಾರ'-1 ಚಿತ್ರದಲ್ಲಿ ತೆಲುಗು ನಟರು ಇಲ್ಲದೇ ಇದ್ದರೂ 100 ಕೋಟಿ ರೂ.ಗೆ ರೈಟ್ಸ್ ಸೇಲ್ ಆಗಿದೆ ಎನ್ನುವುದು ಹುಬ್ಬೇರಿಸುತ್ತಿದೆ.

ಬರೋಬ್ಬರಿ 100 ಕೋಟಿ ರೂ.ಗೆ 'ಕಾಂತಾರ-1' ರೈಟ್ಸ್ ಮಾರಾಟವಾಗಿದ್ದರೆ ಅದು ದೊಡ್ಡ ರಿಸ್ಕ್ ಎನ್ನಲಾಗ್ತಿದೆ. ಎರಡು ರಾಜ್ಯಗಳಲ್ಲಿ 170 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದರೆ ಮಾತ್ರ ವಿತರಕರು ಸೇಫ್ ಆಗುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

More from Filmibeat

English summary
Kantara-1 Beats War-2 Record with ₹100 Crore Telugu Rights Deal Ahead of Release
Read more about: kantara rishab shetty tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X