For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ಇಲ್ಲದೇ ತೆಲುಗು ಚಿತ್ರದಲ್ಲಿ ರಿಷಬ್ ಶೆಟ್ಟಿ ನಟನೆ: ಈಗ ನಡೀತಿದೆ ಬಿಸಿಬಿಸಿ ಚರ್ಚೆ!

  |

  ನಟ- ನಿರ್ದೇಶಕ ರಿಷಬ್ ಶೆಟ್ಟಿ 'ಕಾಂತಾರ' ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. 6ನೇ ವಾರವೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಸದ್ದು ಮಾಡ್ತಿದೆ. ರಿಷಬ್ ಶೆಟ್ಟಿ ಪ್ರತಿಭೆ ನೋಡಿ ಪರಭಾಷಾ ನಿರ್ಮಾಪಕರು ಸಿನಿಮಾ ಮಾಡುವಂತೆ ಆಫರ್ ಕೊಡುತ್ತಿದ್ದಾರೆ. ಆದರೆ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವ ಮಾತೇ ಎಂದು ರಿಷಬ್ ಹೇಳುತ್ತಿದ್ದಾರೆ. ಆದರೆ ಈಗಾಗಲೇ ಅವರು ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನುವುದು ವಿಶೇಷ.

  'ಕಾಂತಾರ' ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ತಮಿಳುನಾಡಿನಲ್ಲಿ 6ನೇ ವಾರವೂ ಸಿನಿಮಾ 150 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದರೆ ತಮಾಷೆ ಮಾತಲ್ಲ. ಇನ್ನು ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ 50 ಕೋಟಿ ಕ್ಲಬ್ ಸೇರಿದೆ. ತೆರೆಮೇಲೆ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಅಕ್ಷರಶಃ ಚಮತ್ಕಾರ ಮಾಡಿದೆ. ರಿಷಬ್ ಶೆಟ್ಟಿ ಈಗ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಒಂದಷ್ಟು ದಿನ ಬ್ರೇಕ್ ಪಡೆದು ನಂತರ ಹೊಸ ಸಿನಿಮಾ ಬಗ್ಗೆ ಯೋಚಿಸುವುದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ.

  ಕಾಂತಾರ 300 ಕೋಟಿ ಕಲೆಕ್ಷನ್ ಮಾಡಿದೆ ಎಂಬುದು ಸುಳ್ಳಾ? ತುಟಿ ಬಿಚ್ಚಿಟ್ಟ ರಿಷಬ್ ಶೆಟ್ಟಿ!ಕಾಂತಾರ 300 ಕೋಟಿ ಕಲೆಕ್ಷನ್ ಮಾಡಿದೆ ಎಂಬುದು ಸುಳ್ಳಾ? ತುಟಿ ಬಿಚ್ಚಿಟ್ಟ ರಿಷಬ್ ಶೆಟ್ಟಿ!

  ಕಂಟೆಂಟ್ ಕಿಂಗ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲು ನೂರಾರು ಕೋಟಿ ಬಜೆಟ್ ಬೇಕಿಲ್ಲ. ಚಿಕ್ಕಂದಿನಿಂದಲೂ ಹೀರೊ ಆಗುವ ಕನಸು ಕಂಡಿದ್ದ ರಿಷಬ್ ಶೆಟ್ಟಿ ಮೊದಲಿಗೆ ನಿರ್ದೇಶಕರಾಗಿ ಸಕ್ಸಸ್ ಕಂಡಿದ್ದರು. ಈಗ ನ್ಯಾಷನಲ್ ಸ್ಟಾರೇ ಆಗಿಬಿಟ್ಟಿದ್ದಾರೆ.

  ತೆಲುಗು ಚಿತ್ರದಲ್ಲಿ ರಿಷಬ್ ಶೆಟ್ಟಿ

  ತೆಲುಗು ಚಿತ್ರದಲ್ಲಿ ರಿಷಬ್ ಶೆಟ್ಟಿ

  'ಕಾಂತಾರ' ನಂತರ ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸುವ ಆಲೋಚನೆ ಇಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಆದರೆ ಸ್ನೇಹಪೂರ್ವಕವಾಗಿ ರಿಷಬ್ ಶೆಟ್ಟಿ ತೆಲುಗಿನ 'ಮಿಷಾನ್ ಇಂಪಾಸಿಬಲ್' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಕಳ್ಳನ ಪಾತ್ರದಲ್ಲಿ ಎರಡು ನಿಮಿಷಗಳ ಕಾಲ ಕಾಣಿಸಿಕೊಂಡಿದ್ದರು. ಇದೇ ವರ್ಷ ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಆದರೆ ಅಲ್ಲಿವರೆಗೂ ರಿಷಬ್ ಶೆಟ್ಟಿ ಎಂದರೆ ಯಾರು ಎಂದು ಗೊತ್ತಿಲ್ಲದ ಕಾರಣ ತೆಲುಗು ಪ್ರೇಕ್ಷಕರು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ 'ಕಾಂತಾರ' ಸಕ್ಸಸ್ ಬೆನ್ನಲ್ಲೇ ಆ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

  "ನಾನು ಇವತ್ತೂ ಏನೇ ಆಗಿದ್ದರೂ ಅದು ಕನ್ನಡದಿಂದ..ಕನ್ನಡಿಗರಿಂದ.. ನಾನು ಹಿಂದಿ ಸಿನಿಮಾ ಮಾಡಲ್ಲ": ರಿಷಬ್ ಶೆಟ್ಟಿ

  ಸಂಭಾವನೆ ಇಲ್ಲದೇ ನಟಿಸಿದ್ದ ರಿಷಬ್

  ಸಂಭಾವನೆ ಇಲ್ಲದೇ ನಟಿಸಿದ್ದ ರಿಷಬ್

  'ಏಜೆಂಟ್ ಸಾಯಿ ಶ್ರೀನಿವಾಸ್ ಆತ್ರೇಯ' ಚಿತ್ರದ ನಿರ್ಮಾಪಕ ಸ್ವರೂಪ್ 'ಮಿಷಾನ್ ಇಂಪಾಸಿಬಲ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಮೂವರು ಮಕ್ಕಳು ಮುಂಬೈಗೆ ಹೋಗುತ್ತಿದ್ದೇವೆ ಎಂದುಕೊಂಡು ಬೆಂಗಳೂರಿಗೆ ಬರುವ ಕಥೆ ಅದು. ಇಲ್ಲಿ ಒಬ್ಬ ಕಳ್ಳನಾಗಿ ರಿಷಬ್ ಶೆಟ್ಟಿ ಅವರಿಗೆ ಎದುರಾಗುವ ದೃಶ್ಯ ಅದು. ಖಲೀಲ್ ಎನ್ನುವುದು ಪಾತ್ರದ ಹೆಸರು. ನಿರ್ದೇಶಕರ ಮೊದಲ ಸಿನಿಮಾ ಇಷ್ಟವಾಗಿ ರಿಷಬ್ ಅಭಿನಂದಿಸಿದ್ದರಂತೆ. ಅದೇ ಸ್ನೇಹದಿಂದ ಈ ಸಣ್ಣ ಅತಿಥಿ ಪಾತ್ರದಲ್ಲಿ ನೀವೇ ನಟಿಸಬೇಕು ಎಂದು ಸ್ವರೂಪ್ ಪಟ್ಟು ಹಿಡಿದ್ದರಂತೆ. ಹಾಗಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕಾಗಿ ಸಂಭಾವನೆಯನ್ನು ಕೂಡ ಪಡೆದಿರಲಿಲ್ಲ.

  'ಬೆಲ್‌ಬಾಟಂ', 'ಹೀರೊ'ಗೆ ಒಳ್ಳೆ ರೆಸ್ಪಾನ್ಸ್

  'ಬೆಲ್‌ಬಾಟಂ', 'ಹೀರೊ'ಗೆ ಒಳ್ಳೆ ರೆಸ್ಪಾನ್ಸ್

  'ಕಾಂತಾರ' ಸಿನಿಮಾ ತೆಲುಗಿಗೆ ಡಬ್ ಆಗಿ ಅಕ್ಟೋಬರ್ 15ರಂದು ರಿಲೀಸ್ ಆಗಿತ್ತು. ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿ ಇವತ್ತಿಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಷಬ್ ನಟಿಸಿದ್ದ 'ಬೆಲ್‌ಬಾಟಂ' ಹಾಗೂ 'ಹೀರೊ' ಸಿನಿಮಾಗಳು ಕೂಡ ತೆಲುಗಿಗೆ ಡಬ್ ಆಗಿತ್ತು. ಆದರೆ ಥಿಯೇಟರ್‌ನಲ್ಲಿ ರಿಲೀಸ್ ಆಗಿರಲಿಲ್ಲ. ಬದಲಿಗೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಒಡೆತನದ ಅಹಾ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಸಿನಿಮಾ ನೋಡಿದವರು ರಿಷಬ್ ಶೆಟ್ಟಿ ನಟನೆಯನ್ನು ಮೆಚ್ಚಿಕೊಂಡಿದ್ದರು. ಹಾಗಾಗಿ ಕೆಲ ತೆಲುಗು ಪ್ರೇಕ್ಷಕರಿಗೆ 'ಕಾಂತಾರ' ಚಿತ್ರಕ್ಕೂ ಮೊದಲೇ ರಿಷಬ್ ಪರಿಚಯ ಇತ್ತು.

  4 ಚಿತ್ರದಲ್ಲಿ ರಿಷಬ್ ಶೆಟ್ಟಿ ನಟನೆ

  4 ಚಿತ್ರದಲ್ಲಿ ರಿಷಬ್ ಶೆಟ್ಟಿ ನಟನೆ

  'ಅಂಟಗೋನಿ ಶೆಟ್ಟಿ', 'ಬೆಲ್‌ಬಾಟಂ - 2', 'ಮಹನಿಯರೇ ಮಹಿಳಿಯರೇ', 'ಬ್ಯಾಚುಲರ್ ಪಾರ್ಟಿ' ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ನಟಿಸ್ತಿದ್ಧಾರೆ. ಸದ್ಯ ನಿರ್ದೇಶಕರಾಗಿ ಯಾವುದೇ ಸಿನಿಮಾ ಘೋಷಿಸಿಲ್ಲ. ಕೆಲ ವರ್ಷಗಳ ಹಿಂದೆ 'ರುದ್ರಪ್ರಯಾಗ' ಸಿನಿಮಾ ಕೈಗೆತ್ತಿಕೊಳ್ಳುವ ಮನಸ್ಸು ಮಾಡಿದ್ದರು. ಕೊರೊನಾ ಲಾಕ್‌ಡೌನ್‌ನಿಂದ ಆ ಸಿನಿಮಾ ನಿಂತು ಹೋಗಿತ್ತು. ಮತ್ತೆ ಅದಕ್ಕೆ ಜೀವ ಕೊಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ತಮ್ಮ ನಿರ್ದೇಶನದಲ್ಲಿ ಹೊಸ ಸಿನಿಮಾ ಯಾವ ಘೋಷಿಸುತ್ತಾರೋ ಗೊತ್ತಿಲ್ಲ.

  English summary
  Kantara actor Rishab Shetty Had Already Acted In Telugu movie Mishan Impossible. He Played Small Role in Swaroop Directed Comedy Triller Movie.
  Friday, November 4, 2022, 13:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X