Sapthami Gowda: ರಶ್ಮಿಕಾ- ಶ್ರೀಲೀಲಾ ನಡುವೆ ಸಪ್ತಮಿ ಗೌಡ ಎಂಟ್ರಿ: ಶುರುವಾಯ್ತು ಹೊಸ ಸ್ಪರ್ಧೆ

'ಕಾಂತಾರ' ಬೆಡಗಿ ಸಪ್ತಮಿ ಗೌಡ ನಿಧಾನವಾಗಿ ಪರಭಾಷೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ರಿಷಬ್ ಶೆಟ್ಟಿ ಜೋಡಿಯಾಗಿ ನಟಿಸಿದ ಮೇಲೆ ಚೆಲುವೆಗೆ ಅವಕಾಶಗಳ ಸುರಿಮಳೆ ಆಗುತ್ತಿದೆ. ಲೀಲಾ ಪಾತ್ರದಲ್ಲಿ ಕನ್ನಡ ಸಿನಿರಸಿಕರಿಗೆ ಮಾತ್ರವಲ್ಲ ಪರಭಾಷಿಕರಿಗೂ ಈ ಮೂಗುತಿ ಚೆಲುವೆ ಮೋಡಿ ಮಾಡಿದ್ದರು. ಈಗಾಗಲೇ 'ವ್ಯಾಕ್ಸಿನ್ ವಾರ್' ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಸಪ್ತಮಿ ಗೌಡ 'ಪಾಪ್‌ಕಾರ್ನ್ ಮಂಕಿ ಟೈಗರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಬಳಿಕ ವಿದೇಶದಲ್ಲಿ ಓದುವ ಕನಸು ಕಂಡಿದ್ದ ಚೆಲುವೆಗೆ 'ಕಾಂತಾರ' ಅವಕಾಶ ಸಿಕ್ಕಿತ್ತು. ಅಲ್ಲಿಂದ ಆಕೆಯ ನಸೀಬೇ ಬದಲಾಯಿ ಹೋಯಿತು. ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವಂತಾಗಿದೆ. 'ವ್ಯಾಕ್ಸಿನ್ ವಾರ್' ಬಿಟ್ರೆ ಕನ್ನಡದಲ್ಲಿ 3 ಸಿನಿಮಾಗಳು ಮೂಗುತಿ ಸುಂದ್ರಿ ಕೈಯಲ್ಲಿವೆ.

Kantara fame Sapthami Gowda makes tollywood debut with nithins Thammudu

ಯುವ ರಾಜ್‌ಕುಮಾರ್‌ ಜೋಡಿಯಾಗಿ 'ಯುವ' ಚಿತ್ರದಲ್ಲಿ ಸಪ್ತಮಿ ಗೌಡ ಬಣ್ಣ ಹಚ್ಚಿದ್ದಾರೆ. ಇನ್ನು ಅಭಿಷೇಕ್ ಅಂಬರೀಶ್ ಜೊತೆಗೂ 'ಕಾಳಿ' ಸಿನಿಮಾ ಕನ್ಫರ್ಮ್ ಆಗಿದೆ. ಇದೆಲ್ಲದರ ನಡುವೆ ಲೀಲಾ ತೆಗುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಿತಿನ್ ಹೀರೊ ಆಗಿ ನಟಿಸುತ್ತಿರುವ 'ತಮ್ಮುಡು' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕನ್ನಡದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ 'ಕಾಂತಾರ' ಸಿನಿಮಾ ತೆಲುಗಿಗೂ ಡಬ್ ಆಗಿ ಸಕ್ಸಸ್ ಕಂಡಿತ್ತು. ಹೈದರಾಬಾದ್‌ನಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲೂ ಆಕೆ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಸಪ್ತಮಿ ಗೌಡ ತೆಲುಗು ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ. ಇದೀಗ ಒಂದು ಸ್ಟ್ರೈಟ್ ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಮೂಗುತಿ ಸುಂದರಿ ಡೆಬ್ಯೂ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲಾಗಿ ಕನ್ನಡ ನಟಿಯರು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Kantara fame Sapthami Gowda makes tollywood debut with nithins Thammudu

ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ ಈಗ ತೆಲುಗು ಸಿನಿಮಾಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ನಭಾ ನಟೇಶ್, ನೇಹಾ ಶೆಟ್ಟಿ ಸೇರಿದಂತೆ ಹಲವರು ತೆಲುಗಿನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಅದೇ ಹಾದಿಯಲ್ಲಿ ಸಪ್ತಮಿ ಗೌಡ ಸಾಗುತ್ತಿದ್ದಾರೆ. ವೇಣು ಶ್ರೀರಾಮ್ ನಿರ್ದೇಶನದಲ್ಲಿ 'ತಮ್ಮುಡು' ಸಿನಿಮಾ ನಿರ್ಮಾಣವಾಗುತ್ತಿದೆ. ಈ ಹಿಂದೆ ಇದೇ ಟೈಟಲ್‌ನಲ್ಲಿ ಪವನ್ ಕಲ್ಯಾಣ್ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದರು. ಸೂಪರ್ ಹಿಟ್ ಟೈಟಲ್‌ನಲ್ಲೇ ಹೊಸ ಸಿನಿಮಾ ಮೂಡಿ ಬರಲಿದೆ.

ಸಪ್ತಮಿ ಗೌಡ ನಟನೆಗೆ ಅವಕಾಶ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'ತಮ್ಮುಡು' ಚಿತ್ರದಲ್ಲೂ ಅಂತದ್ದೇ ಪಾತ್ರ ಸಿಕ್ಕಿದೆಯಂತೆ. ದಿಲ್ ರಾಜು ನಿರ್ಮಾಣದ ಈ ಚಿತ್ರದ ಶೂಟಿಂಗ್ ಈ ವಾರವೇ ಶುರುವಾಗಲಿದೆ. ಟಾಲಿವುಡ್‌ನಲ್ಲಿ ರಶ್ಮಿಕಾ ಹಾಗೂ ಶ್ರೀಲೀಲಾ ನಡುಗೆ ಭಾರೀ ಪೈಪೋಟಿ ಇದೆ. ನಿತಿನ್ ನಟನೆಯ 'ಎಕ್ಸ್ಟ್ರಾಡಿನರಿಮ್ಯಾನ್' ರಶ್ಮಿಕಾ ಹೊರ ಬಂದು ಆ ಅವಕಾಶ ಶ್ರೀಲೀಲಾ ಪಾಲಾಗಿತ್ತು. ಇದೀಗ ನಿತಿನ್ ಮುಂದಿನ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ.

ಇನ್ನು ಸಪ್ತಮಿ ಗೌಡ ನಟನೆಯ 'ವ್ಯಾಕ್ಸಿನ್ ವಾರ್' ಸಿನಿಮಾ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಲಿದೆ. ಅದೇ ದಿನ ಹೊಂಬಾಳೆ ಸಂಸ್ಥೆಯ 'ಸಲಾರ್' ಸಿನಿಮಾ ತೆರೆಗೆ ಬರುತ್ತಿದೆ. ಹೊಂಬಾಳೆ ಸಂಸ್ಥೆಯ ಸಿನಿಮಾಗಳಲ್ಲಿ ಸಪ್ತಮಿ ನಟಿಸುತ್ತಿದ್ದು ಇದೀಗ ಆಕೆಯ ಹಿಂದಿ ಸಿನಿಮಾ ಹೊಂಬಾಳೆ ಸಂಸ್ಥೆಯ ಮತ್ತೊಂದು ಚಿತ್ರಕ್ಕೆ ಎದುರಾಗುತ್ತಿದೆ. ಅಭಿಮಾನಿಗಳು ಆಕೆಯ ಟಾಲಿವುಡ್ ಎಂಟ್ರಿಗೆ ಶುಭ ಕೋರುತ್ತಿದ್ದಾರೆ.

More from Filmibeat

English summary
kantara fame Sapthami Gowda in Nithin's thammudu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X