For Quick Alerts
  ALLOW NOTIFICATIONS  
  For Daily Alerts

  ತೆಲುಗಿನಲ್ಲೂ ಕಾಂತಾರ ಹವಾ; ಕಾಂತಾರದಿಂದ ಗಾಡ್‌ಫಾದರ್ ತನ್ನ ನೆಲದಲ್ಲಿ ಕಳೆದುಕೊಂಡ ಚಿತ್ರಮಂದಿರಗಳೆಷ್ಟು?

  |

  ಈ ಬಾರಿಯ ದಸರಾ ವಿಜಯದಶಮಿಯನ್ನು ಗುರಿಯನ್ನಾಗಿಸಿಕೊಂಡು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಬಹು ನಿರೀಕ್ಷೆಯ ಚಿತ್ರಗಳ ಪೈಕಿ ಕಾಂತಾರ ಹಾಗೂ ಗಾಡ್‌ಫಾದರ್ ಚಿತ್ರಗಳೂ ಸೇರಿವೆ. ಕಾಂತಾರ ವಿಜಯದಶಮಿಯ ಹಿಂದಿನ ವಾರ ಅಂದರೆ ಸೆಪ್ಟೆಂಬರ್ 30ರಂದು ತೆರೆಗೆ ಅಪ್ಪಳಿಸಿತ್ತು. ಇನ್ನು ಚಿರಂಜೀವಿ ಅಭಿನಯದ ಗಾಡ್‌ಫಾದರ್ ಸಿನಿಮಾ ವಿಜಯದಶಮಿಯ ದಿನದಂದೇ ( ಅಕ್ಟೋಬರ್ 5 ) ಬಿಡುಗಡೆಗೊಂಡಿತ್ತು. ಇನ್ನು ದಸರಾ ಹಬ್ಬದ ಪ್ರಯುಕ್ತ ರಜೆಗಳಿರುವ ಕಾರಣ ದಸರಾ ವಾರಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ಯಾವ ಚಿತ್ರ ದಸರಾ ವಿನ್ನರ್ ಆಗಲಿದೆ ಎಂಬ ಕುತೂಹಲವಿತ್ತು.

  ಇನ್ನು ತನ್ನೊಡನೆ ಒಂದೇ ದಿನ ರೇಸ್‌ಗೆ ಇಳಿದಿದ್ದ ಬಿಗ್ ಬಜೆಟ್ ಚಿತ್ರ ಪೊನ್ನಿಯಿನ್ ಸೆಲ್ವನ್‌ಗಿಂತ ದೊಡ್ಡ ಮಟ್ಟದ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದ್ದ ಕಾಂತಾರ ಸಿನಿಮಾಗೆ ಐದು ದಿನಗಳ ಬಳಿಕ ಬಂದ ಗಾಡ್‌ಫಾದರ್ ಚಿತ್ರ ಯಾವುದೇ ಹಿನ್ನಡೆಯನ್ನು ಉಂಟುಮಾಡುವಲ್ಲಿ ಕಿಂಚಿತ್ತೂ ಸಹ ಯಶಸ್ವಿಯಾಗಲಿಲ್ಲ. ಕಾಂತಾರ ಬಿಡುಗಡೆ ನಂತರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಯಾವ ಚಿತ್ರವೂ ಸಹ ಕಾಂತಾರವನ್ನು ಮೀರಿಸುವುದು ಸದ್ಯಕ್ಕೆ ಅಸಾಧ್ಯವೆಂದೇ ಹೇಳಬಹುದು. ಅಷ್ಟರ ಮಟ್ಟಿಗೆ ಅಬ್ಬರಿಸುತ್ತಿದೆ ಕಾಂತಾರ.

  ಹೀಗೆ ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದ ಕಾಂತಾರ ಚಿತ್ರಕ್ಕೆ ಪರಭಾಷಾ ಸಿನಿರಸಿಕರಿಂದಲೂ ಮೆಚ್ಚುಗೆ ಪಡೆದುಕೊಂಡ ಕಾರಣ ಇದೀಗ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ ಚಿತ್ರತಂಡ. ಅದರಂತೆ ಕಾಂತಾರ ತೆಲುಗು ಅವತರಣಿಕೆ ನಾಳೆ ( ಅಕ್ಟೋಬರ್ 15 ) ಬಿಡುಗಡೆಗೊಳ್ಳಲಿದ್ದು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಮುಂಗಡ ಬುಕ್ಕಿಂಗ್ ಅನ್ನು ತೆರೆಯಲಾಗಿದೆ. ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಕಾಂತಾರ ಚಿತ್ರದ ಎಫೆಕ್ಟ್ ಚಿರಂಜೀವಿ ಅಭಿನಯದ ಗಾಡ್‌ಫಾದರ್ ಚಿತ್ರಕ್ಕೆ ತನ್ನದೇ ನೆಲದಲ್ಲಿ ತಟ್ಟಿದಂತಿದೆ.

  300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ

  300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ

  ಕಾಂತಾರ ತೆಲುಗು ಅವತರಣಿಕೆ ತೆಲುಗು ರಾಜ್ಯಗಳಲ್ಲಿ 300ಕ್ಕಿಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ನಿಜಾಮ್ ವಿಭಾಗದಲ್ಲಿ 115ಕ್ಕೂ ಅಧಿಕ ಚಿತ್ರಮಂದಿರಗಳು, ಸೀಡೆಡ್ ಭಾಗದದಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಹಾಗೂ ಆಂಧ್ರ ಭಾಗದ 140ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ ತೆರೆ ಕಾಣಲಿದೆ. ಈ ಮೂಲಕ ಬಿಡುಗಡೆಯ ಹಿಂದಿನ ದಿನ ಕಾಂತಾರ ತೆಲುಗು 305ಕ್ಕೂ ಹೆಚ್ಚಿನ ಚಿತ್ರಮಂದಿರಗಳನ್ನು ಪಡೆದುಕೊಂಡಿದೆ. ಇನ್ನು ಬಿಡುಗಡೆಯ ದಿನ ಚಿತ್ರಮಂದಿರಗಳ ಸಂಖ್ಯೆ ಮತ್ತುಷ್ಟು ಹೆಚ್ಚಾಗಲಿದೆ.

  ಒಂದೇ ವಾರಕ್ಕೆ ತೀವ್ರ ಕುಸಿತ ಕಂಡ ಗಾಡ್‌ಫಾದರ್

  ಒಂದೇ ವಾರಕ್ಕೆ ತೀವ್ರ ಕುಸಿತ ಕಂಡ ಗಾಡ್‌ಫಾದರ್

  ಗಾಡ್‌ಫಾದರ್ ಎರಡನೇ ವಾರ ನಿಜಾಮ್ ವಿಭಾಗದಲ್ಲಿ 100ಕ್ಕೂ ಅಧಿಕ ಚಿತ್ರಮಂದಿರಗಳು, ಸೀಡೆಡ್ ಭಾಗದದಲ್ಲಿ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಹಾಗೂ ಆಂಧ್ರ ಭಾಗದ 140ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತನ್ನ ಪ್ರದರ್ಶನವನ್ನು ಮುಂದುವರಿಸಲಿದೆ. ಅಂದರೆ ಒಟ್ಟು 300 ಚಿತ್ರಮಂದಿರಗಳಲ್ಲಿ ಗಾಡ್‌ಫಾದರ್ ಎರಡನೇ ವಾರದ ಪ್ರದರ್ಶನ ಕಾಣಲಿದ್ದು, ಮೊದಲ ವಾರ 715 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಈ ಮೂಲಕ ಗಾಡ್‌ಫಾದರ್ ಎರಡನೇ ವಾರ 415 ಚಿತ್ರಮಂದಿರಗಳನ್ನು ಕಳೆದುಕೊಂಡಂತಾಗಲಿದೆ.

  ಕಾಂತಾರ ಎಫೆಕ್ಟ್ ಆಗಿರುವುದು ನಿಜ

  ಕಾಂತಾರ ಎಫೆಕ್ಟ್ ಆಗಿರುವುದು ನಿಜ

  ಇನ್ನು ಬಿಡುಗಡೆ ದಿನ ಒಳ್ಳೆಯ ಓಪನಿಂಗ್ ಪಡೆದುಕೊಂಡ ಗಾಡ್‌ಫಾದರ್ ಸಿನಿ ಪ್ರೇಕ್ಷಕರನ್ನು ನಂತರದ ದಿನಗಳಲ್ಲಿ ಹೆಚ್ಚಾಗಿ ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಲಿಲ್ಲ. ಅದರಲ್ಲಿಯೂ ಈ ವಾರ ಕೆಲ ತೆಲುಗು ಚಿತ್ರಗಳು ಹಾಗೂ ಕಾಂತಾರ ಬಿಡುಗಡೆಯಾಗುತ್ತಿರುವುದು ಗಾಡ್‌ಫಾದರ್ ಚಿತ್ರಮಂದಿರಗಳ ಗಣನೀಯ ಇಳಿಕೆಗೆ ಕಾರಣ ಎನ್ನಬಹುದು. ಗಾಡ್‌ಫಾದರ್ ಕಳೆದುಕೊಂಡಿರುವ 415 ಚಿತ್ರಮಂದಿರಗಳನ್ನು ಇತರೆ ನೂತನ ತೆಲುಗು ಚಿತ್ರಗಳಿಗಿಂತ ಕಾಂತಾರ ಚಿತ್ರವೇ ಹೆಚ್ಚು ಪಡೆದುಕೊಂಡಿದೆ. ಒಟ್ಟಿನಲ್ಲಿ ಈ ಹಿಂದೆ ತೆಲುಗು ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರಗಳು ಚಿತ್ರಮಂದಿರಗಳು ಕಳೆದಕೊಂಡವು ಎಂದು ಕೇಳಿಬರುತ್ತಿದ್ದ ಮಾತು ಈಗ ಉಲ್ಟಾ ಆಗಿದೆ.

  English summary
  Kantara telugu version got more shows than Chiranjeevi's godfather in Telugu states. Read on
  Friday, October 14, 2022, 19:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X