ಯೂಟ್ಯೂಬರ್‌ಗೆ ನಡು ರಸ್ತೆಯಲ್ಲಿ ಬಟ್ಟೆ ಹರಿಯುವಂತೆ ಹೊಡೆದ ಮಾಜಿ ಬಿಗ್‌ಬಾಸ್ ಸ್ಪರ್ಧಿ

ಸಿನಿಮಾಗಳಿಗಿಂತಲೂ ವಿವಾದಗಳಿಂದಲೇ ಕರಾಟೆ ಕಲ್ಯಾಣಿ ಹೆಚ್ಚು ಪರಿಚಿತರು, ಸಹ ನಟ-ನಟಿಯರ ವಿರುದ್ಧ ಆಗಾಗ್ಗೆ ಆರೋಪಗಳನ್ನು ಮಾಡುತ್ತಲೇ ಇರುವ ಕರಾಟೆ ಕಲ್ಯಾಣಿ ಇದೀಗ ಯೂಟ್ಯೂಬರ್‌ ಒಬ್ಬನಿಗೆ ನಡು ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಭಾರಿಸಿ ಸುದ್ದಿಯಾಗಿದ್ದಾರೆ.

ತೆಲುಗಿನ ಯೂಟ್ಯೂಬರ್ ಶ್ರೀಕಾಂತ್ ರೆಡ್ಡಿ ಎಂಬಾತನ ವಿರುದ್ಧ ಹೈದರಾಬಾದ್‌ನ ಯೂಸಫ್ ಘಡ ಬಳಿ ನಟಿ ಕರಾಟೆ ಕಲ್ಯಾಣಿ ಹಾಗೂ ಆಕೆಯ ಬೆಂಬಲಿಗರು ಏಕಾ ಏಕಿ ದಾಳಿ ನಡೆಸಿ ಹಲ್ಲೆ ನಡೆಸಿದ್ದಾರೆ. ಈ ಕಿತ್ತಾಟದಲ್ಲಿ ಶ್ರೀಕಾಂತ್ ರೆಡ್ಡಿಯ ಬಟ್ಟೆಗಳನ್ನು ಸಹ ನಡು ರಸ್ತೆಯಲ್ಲಿಯೇ ಹರಿದು ಹಾಕಿದ್ದಾರೆ. ಈ ಜಗಳದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಟ್ಟೆ ಹರಿವಂತೆ ಹೊಡೆದ ಕರಾಟೆ ಕಲ್ಯಾಣಿ ಹಾಗೂ ಸಂಗಡಿಗರು

ಬಟ್ಟೆ ಹರಿವಂತೆ ಹೊಡೆದ ಕರಾಟೆ ಕಲ್ಯಾಣಿ ಹಾಗೂ ಸಂಗಡಿಗರು

ಶ್ರೀಕಾಂತ್ ರೆಡ್ಡಿ ರಸ್ತೆಯಲ್ಲಿ ನಡೆದು ಬರುವಾಗ ಕರಾಟೆ ಕಲ್ಯಾಣಿ ಹಾಗೂ ಆಕೆಯ ಕಡೆಯವರು ಶ್ರೀಕಾಂತ್ ರೆಡ್ಡಿಯನ್ನು ತಡೆದು ಜಗಳ ಆರಂಭಿಸಿದ್ದಾರೆ. ಶ್ರೀಕಾಂತ್ ರೆಡ್ಡಿ ಸಹ ಕರಾಟೆ ಕಲ್ಯಾಣಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ನಂತರ ಏಕಾಏಕಿ ಕರಾಟೆ ಕಲ್ಯಾಣಿ, ಶ್ರೀಕಾಂತ್ ಮೇಲೆ ಹಲ್ಲೆ ಆರಂಭಿಸಿದ್ದಾಳೆ. ಆಕೆಯ ಜೊತೆಗಿದ್ದವರೂ ಶ್ರೀಕಾಂತ್ ಅನ್ನು ಹೊಡೆದಿದ್ದಾರೆ. ಶ್ರೀಕಾಂತ್ ಸಹ ಕರಾಟೆ ಕಲ್ಯಾಣಿಗೆ ಹೊಡೆದಿದ್ದಾನೆ. ಈ ಜಗಳದಲ್ಲಿ ಶ್ರೀಕಾಂತ್‌ನ ಬಟ್ಟೆ ಹರಿದುಹೋಗಿದೆ.

ನನ್ನ ಮೈಮುಟ್ಟಿದ, ಹಣ ಕೊಡುತ್ತೇನೆಂದು ಹೇಳಿದ: ಕಲ್ಯಾಣಿ ಆರೋಪ

ನನ್ನ ಮೈಮುಟ್ಟಿದ, ಹಣ ಕೊಡುತ್ತೇನೆಂದು ಹೇಳಿದ: ಕಲ್ಯಾಣಿ ಆರೋಪ

ಘಟನೆಯ ಬಗ್ಗೆ ಕರಾಟೆ ಕಲ್ಯಾಣಿ ಹೇಳಿರುವಂತೆ, ''ಶ್ರೀಕಾಂತ್ ರೆಡ್ಡಿ, ಫ್ರ್ಯಾಂಕ್ ವೀಡಿಯೋ ಮಾಡುವ ನೆಪದಲ್ಲಿ ಮಹಿಳೆಯರೊಟ್ಟಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ನನ್ನ ಬಳಿಯೂ ಅಸಭ್ಯವಾಗಿ ವರ್ತಿಸಿದ. ನನ್ನ ಅಂಗಾಂಗಳನ್ನು ಕೆಟ್ಟದಾಗಿ ಮುಟ್ಟಿದ. ಹಣ ಕೊಡುತ್ತೇನೆ, ನನ್ನೊಂದಿಗೆ ಸಹಕರಿಸು ಎಂದು ಕೇಳಿದ ಹಾಗಾಗಿ ಆತನಿಗೆ ತಕ್ಕ ಬುದ್ಧಿ ಕಲಿಸಬೇಕೆಂದು ಆತನ ಮೇಲೆ ಹಲ್ಲೆ ಮಾಡಿದೆ'' ಎಂದಿದ್ದಾರೆ. ಶ್ರೀಕಾಂತ್ ವಿರುದ್ಧ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಸಹ ಕರಾಟೆ ಕಲ್ಯಾಣಿ ಹೇಳಿದ್ದಾರೆ. ಶ್ರೀಕಾಂತ್ ಸಹ ಕರಾಟೆ ಕಲ್ಯಾಣಿ ವಿರುದ್ಧ ದೂರು ನೀಡಿದ್ದಾಗಿ ಹೇಳಿದ್ದಾರೆ.

ಶ್ರೀಕಾಂತ್ ಹೇಳಿದ್ದೇ ಬೇರೆ

ಶ್ರೀಕಾಂತ್ ಹೇಳಿದ್ದೇ ಬೇರೆ

ಇದೇ ಘಟನೆ ಬಗ್ಗೆ ಶ್ರೀಕಾಂತ್ ಬೇರೆಯದೇ ವಿಷಯ ಹೇಳಿದ್ದಾರೆ. ''ನಾನು ಫ್ರ್ಯಾಂಕ್ ವಿಡಿಯೋಗಳನ್ನು ಮಾಡಬಾರದು ಎಂದು ಕರಾಟೆ ಕಲ್ಯಾಣಿ ಬೆದರಿಕೆ ಹಾಕಿದಳು. ಜೊತೆಗೆ ಮೂವರು ಗೂಂಡಾಗಳನ್ನು ಕರೆದುಕೊಂಡು ಬಂದಿದ್ದಳು. 'ನೀನು ಸಿನಿಮಾಗಳಲ್ಲಿ ವೇಶ್ಯೆಯ ಪಾತ್ರ, ಅನೈತಿಕ ಸಂಬಂಧ ಹೊಂದುವ ಹೆಂಗಸಿನ ಪಾತ್ರಗಳಲ್ಲಿ ನಟಿಸಿದ್ದೀಯಲ್ಲ ಅದು ತಪ್ಪಲ್ಲವೇ?'' ಎಂದು ಪ್ರಶ್ನಿಸಿದೆ. ಅದಕ್ಕೆ ಸಿಟ್ಟಾದ ಆಕೆ, ನನಗೆ ಮಹಿಳಾ ಸಂಘಗಳು ಗೊತ್ತು, ನಿನ್ನನ್ನು ಜೈಲಿಗೆ ಹಾಕಿಸುತ್ತೇನೆ ಎಂದಳು. ನೀನು ಫ್ರಾಂಕ್ ವಿಡಿಯೋಗಳನ್ನು ಮುಂದುವರೆಸಬೇಕು ಎಂದರೆ ನನಗೆ ಒಂದು ಲಕ್ಷ ಹಣ ಕೊಡು, ಇಲ್ಲವಾದರೆ ಮಹಿಳಾ ಸಂಘಗಳಿಗೆ ಹೇಳಿ ಪೊಲೀಸರಿಗೆ ದೂರು ಕೊಡಿಸುತ್ತೇನೆ'' ಎಂದು ಬೆದರಿಕೆ ಹಾಕಿದಳು. ನಂತರ ಆಕೆಯ ಜೊತೆ ಬಂದಿದ್ದಾತ, ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಹಣ ಕೊಟ್ಟುಬಿಡುವಂತೆ ಫುಸಲಾಯಿಸಿದ ನಾನು ಒಪ್ಪದಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿದಳು. ಆರಂಭದಲ್ಲಿ ನಾನು ಸುಮ್ಮನಿದ್ದೆ ಆ ನಂತರ ನಾನು ಕೈ ಮಾಡಿದೆ'' ಎಂದಿದ್ದಾರೆ.

ಹಣ ಕೊಟ್ಟು ಕಲಾವಿದರಿಂದ ನಟನೆ ಮಾಡಿಸುತ್ತೇನೆ: ಶ್ರೀಕಾಂತ್

ಹಣ ಕೊಟ್ಟು ಕಲಾವಿದರಿಂದ ನಟನೆ ಮಾಡಿಸುತ್ತೇನೆ: ಶ್ರೀಕಾಂತ್

ನಾನು ಫ್ರ್ಯಾಂಕ್ ವಿಡಿಯೋಗಳನ್ನು ಶೂಟ್ ಮಾಡಿದ್ದೇನೆ ಅವು ಕೇವಲ ಮನೊರಂಜನೆಗಾಗಿ ಮಾಡಿರುವುದು ಅವುಗಳಲ್ಲಿ ಅಸಭ್ಯತೆ ಇಲ್ಲ. ಅಷ್ಟೇ ಅಲ್ಲದೆ, ನಾನು ಕಲಾವಿದರಿಗೆ ಹಣ ಕೊಟ್ಟು, ಸ್ಕ್ರಿಪ್ಟ್ ಇಟ್ಟುಕೊಂಡು ಆ ವಿಡಿಯೋಗಳನ್ನು ಶೂಟ್ ಮಾಡುತ್ತೇನೆ, ಯಾರಿಗೂ ಗೊತ್ತಿಲ್ಲದೆ ಆ ವಿಡಿಯೋಗಳನ್ನು ತೆಗೆದಿರುವುದಲ್ಲ. 'ಪುಷ್ಪ' ಸಿನಿಮಾದ ಐಟಂ ಹಾಡಿನಲ್ಲಿ, 'ಆಶಿಕ್ ಬನಾಯಾ' ಹಾಡಿನಲ್ಲಿ ಇರುವುದರ ಮುಂದೆ ನನ್ನ ವಿಡಿಯೋಗಳು ಏನೂ ಅಲ್ಲ. ಸ್ವತಃ ಕರಾಟೆ ಕಲ್ಯಾಣಿ ಎಷ್ಟೋ ಸಿನಿಮಾಗಳಲ್ಲಿ ಗ್ಲಾಮರಸ್ ಪಾತ್ರಗಳಲ್ಲಿ, ಉದ್ದೀಪನಗೊಳಿಸುವ ಪಾತ್ರಗಳನ್ನು ಮಾಡಿದ್ದಾರೆ'' ಎಂದಿದ್ದಾರೆ ಶ್ರೀಕಾಂತ್ ರೆಡ್ಡಿ.

More from Filmibeat

English summary
Actress, Former Bigg Boss contestant Karate Kalyani beaten You tuber Shrikanth Reddy on street. She said he touched her improperly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X