ಎರಡು ಬಾರಿ ಲವ್ ಫೇಲ್ಯೂರ್, ಖಿನ್ನತೆ, ಸೇಡು ; ಕರ್ಮ ಯಾರನ್ನು ಬಿಡುವುದಿಲ್ಲ-ರಿವೀಲ್ ಆಯ್ತು ಸ್ಟಾರ್ ನಟಿಯ ಬ್ರೇಕಪ್ ಕಥೆ

ಪ್ರೀತಿ - ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್‌ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ.

ಇದಕ್ಕೆ ''ರಾಶಿ ಖನ್ನಾ'' ಅವರ ಜೀವನಾನುಭವ ಮತ್ತೊಂದು ಉದಾಹರಣೆ. ಹೌದು. ರಾಶಿ ಖನ್ನಾ.. ದೆಹಲಿಯ ಸುಂದರಿ. ದಕ್ಷಿಣದಿಂದ ಹಲವು ನಾಯಕಿಯರು ಉತ್ತರಕ್ಕೆ ವಲಸೆ ಹೋಗುತ್ತಿರುವ ಈ ಸಮಯದಲ್ಲಿ ರಾಶಿ ಒಂದು ದಶಕದ ಹಿಂದೆ ಅವಕಾಶ ಅರಸುತ್ತಾ ಉತ್ತರದಿಂದ ದಕ್ಷಿಣಕ್ಕೆ ಬಂದಿದ್ದರು.

Karma Spares No One Raashii Khanna Gets Real on Two Breakups Hate and the Price of Revenge

''ಊಹಲು ಗುಸಗುಸಲಾಡೆ''.. ''ಬಂಗಾಳ್ ಟೈಗರ್''.. ''ಸುಪ್ರೀಂ''.. ಜೈಲವ ಕುಶ''.. ''ತೋಲಿ ಪ್ರೇಮ''.. ''ವೆಂಕಿ ಮಾಮ''..''ಸರ್ದಾರ್'' ಹೀಗೆ ಒಂದಾದ ಮೇಲೊಂದು ಚಿತ್ರಗಳನ್ನು ಮಾಡಿದರು. ಇಲ್ಲಿಯೇ ಬಿಡಾರವನ್ನು ಕೂಡ ಹೂಡಿದರು. ಇದರ ನಡುವೆ ಅಲ್ಲೊಂದು ಇಲ್ಲೊಂದು ಹಿಂದಿ ಸಿನಿಮಾಗಳನ್ನು ರಾಶಿ ಮಾಡಿದರಾದರೂ ಕೂಡ ಇಲ್ಲಿ ಸಿಕ್ಕ ಯಶಸ್ಸು ಇವರಿಗೆ ಅಲ್ಲಿ ಸಿಗಲಿಲ್ಲ.

ಇಂಥಾ ರಾಶಿ ಖನ್ನಾ ಸದ್ಯ ''ತೆಲಸು ಕದಾ'' ಎಂಬ ಚಿತ್ರ ಮಾಡಿದ್ದಾರೆ. ಆಂಧ್ರದ ಹೊಸ ಸೆನ್ಸೇ‍ಶನ್ ಸಿದ್ಧು ಜೊನ್ನಲಗಡ್ಡ ಈ ಚಿತ್ರದ ನಾಯಕ. ಇನ್ನು ರಾಶಿ ಜೊತೆ ಕೆಜಿಎಫ್ ಚಿತ್ರದ ಕ್ವೀನ್ ಶ್ರೀನಿಧಿ ಶೆಟ್ಟಿ ಕೂಡ ಈ ಚಿತ್ರದ ನಾಯಕಿ ಅನ್ನುವುದು ವಿಶೇಷ. ಇನ್ನೇನು ಈ ಅಕ್ಟೋಬರ್ 17ರಂದು ಈ ಚಿತ್ರ ತೆರೆಗೆ ಬರಲಿದೆ.

Karma Spares No One Raashii Khanna Gets Real on Two Breakups Hate and the Price of Revenge

ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಚಿತ್ರತಂಡ ಮಾಡುತ್ತಿದೆ. ಹಲವರಿಗೆ ಕರೆದು ಕರೆದು ಸಂದರ್ಶನವನ್ನು ಕೂಡ ನೀಡುತ್ತಿದೆ. ಹೀಗೆ ನೀಡಲಾದ ಸಂದರ್ಶನವೊಂದರಲ್ಲಿ ರಾಶಿ ಖನ್ನಾ ತಮ್ಮ ಲವ್ ಫೇಲ್ಯೂರ್ ಬಗ್ಗೆ ಮಾತನಾಡಿದ್ದಾರೆ. ಒಂದಲ್ಲ ಎರಡು ಬಾರಿ ಪ್ರೀತಿಯಲ್ಲಿ ಮೋಸ ಹೋಗಿರುವುದಾಗಿ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ರಾಶಿ ಖನ್ನಾ ಪ್ರತಿಯೊಬ್ಬರ ಬದುಕಿನಲ್ಲಿ ಪ್ರೀತಿ ಚಿಗುರೊಡೆಯುತ್ತೆ. ನನ್ನ ಜೀವನದಲ್ಲಿ ಕೂಡ ಆಗಿತ್ತು ಅದು ಒಂದಲ್ಲ ಎರಡೆರಡು ಬಾರಿ ಎಂದು ಹೇಳಿದ್ದಾರೆ. ನಾನು ಚಿತ್ರರಂಗಕ್ಕೆ ಬರುವ ಮುನ್ನ ಒಬ್ಬ ವ್ಯಕ್ತಿಯ ಮೇಲೆ ಪ್ರೇಮಾಂಕುರವಾಗಿತ್ತು. ಆ ನಂತರ ಚಿತ್ರರಂಗಕ್ಕೆ ಬಂದ ನಂತರ ಇನ್ನೊಬ್ಬರ ಮೇಲೆ ಆಗಿತ್ತು ಎಂದು ಹೇಳಿರುವ ರಾಶಿ ಖನ್ನಾ ದುರಾದೃಷ್ಟವಶಾತ್ ಎರಡು ಸಂಬಂಧಗಳು ಮುಂದುವರೆಯಲಿಲ್ಲ ಎಂದು ಹೇಳಿದ್ದಾರೆ. ಎರಡು ಬಾರಿ ಬ್ರೇಕಪ್‌ನ ನೋವು ಅನುಭವಿಸುವಂತೆ ಆಯ್ತು ಎಂದಿದ್ದಾರೆ.

ಬ್ರೇಕಪ್‌ನ ನೋವು ಸಹಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಅದರಲ್ಲಿಯೂ ಮೊದಲ ಬಾರಿ ಪ್ರೇಮ ವೈಫಲ್ಯವಾದಾಗ ಮಾನಸಿಕವಾಗಿ ಸಂಪೂರ್ಣ ಕುಸಿದು ಹೋಗಿದ್ದೆ. ಖಿನ್ನತೆಗೊಳಗಾಗಿದ್ದೆ ಎಂದಿರುವ ರಾಶಿ ಆ ಸಮಯದಲ್ಲಿ ನನ್ನ ಪೋಷಕರು ನನ್ನ ಸ್ನೇಹಿತರು ನನಗೆ ಧೈರ್ಯ ತುಂಬಿದರು. ಬೆಂಬಲಿಸಿದರು ಎಂದು ಹೇಳಿದ್ಧಾರೆ.

ಮುಂದುವರೆದು ಬ್ರೇಕಪ್ ಆದ ನಂತರ ನನ್ನ ಸ್ನೇಹಿತರು ಸೇಡು ತೀರಿಸಿಕೊಳ್ಳುವಂತೆ ನನಗೆ ಸಲಹೆಯನ್ನು ನೀಡಿದ್ದರು ಆದರೆ ನಾನು ಆ ಕೆಲಸ ಮಾಡಲು ಮುಂದಾಗಲಿಲ್ಲ. ಯಾಕೆಂದರೆ ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ ಎಂದು ಹೇಳಿರುವ ರಾಶಿ ಖನ್ನಾ ಅವರು ನನ್ನಿಂದ ದೂರ ಆಗಿರಬಹುದು ಆದರೆ ನಾನು ಅವರಿಗೆ ಯಾವತ್ತು ಕೆಟ್ಟದಾಗಬೇಕೆಂದು ಬಯಸುವುದಿಲ್ಲ ಎಂದು ಹೇಳಿದ್ದಾರೆ. ನಾನು ಯಾವ ತಪ್ಪು ಮಾಡಿಲ್ಲ. ಮುಂದೆ ಮಾಡುವುದು ಇಲ್ಲ. ಕರ್ಮ ಯಾರನ್ನೂ ಬಿಡುವುದಿಲ್ಲ. ಹೀಗಾಗಿ ನಾನು ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದು ಕೂಡ ಇದೇ ಸಂದರ್ಭದಲ್ಲಿ ರಾಶಿ ಖನ್ನಾ ಹೇಳಿದ್ದಾರೆ.

More from Filmibeat

English summary
Raashii Khanna opens up about the pain, hate, and thoughts of revenge that followed her two devastating love failures. Read her full story.
Read more about: love breakup tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X