ಮುಂಜಾನೆ 5.12ಕ್ಕೆ ಏಕೆ ರಿಲೀಸ್ ಆಗಲಿದೆ ಸಲಾರ್ ಟೀಸರ್? ಚಿತ್ರತಂಡ ಕೊಟ್ಟ ಉತ್ತರವಿದು!

ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ ಚಾಪ್ಟರ್ 2 ಬಳಿಕ ಬಿಡುಗಡೆ ಮಾಡಲಿರುವ ಬೃಹತ್ ಚಿತ್ರ ಸಲಾರ್ ಚಿತ್ರದ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಇಂಡಸ್ಟ್ರಿ ಹಿಟ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಕಾರಣ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಕೊಂಡಿದೆ.

ಇನ್ನು ಬಾಹುಬಲಿ ಚಿತ್ರ ಸರಣಿ ಬಳಿಕ ಪ್ರಭಾಸ್ ನಟನೆಯ ಯಾವುದೇ ಚಿತ್ರ ಕೈಹಿಡಿಯದೇ ಇದ್ದು ಪ್ರಭಾಸ್ ಫ್ಯಾನ್ಸ್ ಸಲಾರ್ ಚಿತ್ರದ ಮೇಲೆ ಭಾರ ಹಾಕಿದ್ದಾರೆ. ಅದರಲ್ಲಿಯೂ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿ ಮಕಾಡೆ ಮಲಗಿದ ಮೇಲಂತೂ ಸಲಾರ್ ಚಿತ್ರ ಹೇಗಿರಲಿದೆ, ಸಲಾರ್ ಮೂಲಕ ಪ್ರಭಾಸ್ ಕಮ್‌ಬ್ಯಾಕ್ ಮಾಡಬಹುದು ಎಂಬ ಕುತೂಹಲ ಹಾಗೂ ನಿರೀಕ್ಷೆ ಹೆಚ್ಚಾಗಿದೆ.

salara teaser

ಇನ್ನು ಚಿತ್ರ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದ್ದು, ದಾಖಲೆಯ ಗಳಿಕೆ ಮಾಡುವುದು ಖಚಿತವಾಗಿದೆ. ಚಿತ್ರ ಯಾವ ರೀತಿಯ ಕಥೆಯನ್ನು ಹೊಂದಿರಲಿದೆ ಎಂಬ ವಿಚಾರವನ್ನು ಪ್ರಶಾಂತ್ ನೀಲ್ ಆಗಲಿ, ಪ್ರಭಾಸ್ ಆಗಲಿ ಅಥವಾ ಚಿತ್ರತಂಡದ ಇನ್ಯಾರೇ ಸದಸ್ಯರಾಗಲಿ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.

ಹೀಗಾಗಿ ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಸಲಾರ್ ಟೀಸರ್ ಕಡೆ ಗಮನ ಹರಿಸಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾದರೆ ಚಿತ್ರ ಯಾವ ಅಂಶದ ಮೇಲೆ ಅಧಾರಿತವಾಗಿರಲಿದೆ ಎಂಬುದನ್ನು ತಿಳಿಯಬಹುದು ಎಂಬುದು ಎಲ್ಲರ ಲೆಕ್ಕಾಚಾರ.

ಅದರಂತೆ ಇಂದು ( ಜುಲೈ 3 ) ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಲಾರ್ ಚಿತ್ರ ಕುರಿತ ಅಪ್‌ಡೇಟ್‌ವೊಂದನ್ನು ಹಂಚಿಕೊಂಡಿದ್ದು ಚಿತ್ರದ ಟೀಸರ್ ಯಾವಾಗ ಬಿಡುಗಡೆಗೊಳ್ಳಲಿದೆ ಎಂಬುದನ್ನು ಬರೆದುಕೊಂಡಿದೆ. ವಿಶೇಷ ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಸಲಾರ್ ಚಿತ್ರದ ಟೀಸರ್ ಜುಲೈ 6ರಂದು ಬೆಳಗ್ಗೆ 5.12ಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

ಹೀಗೆ ಹೊಂಬಾಳೆ ಫಿಲ್ಮ್ಸ್ ಬೆಳಗ್ಗಿನ ಜಾವ ಸೂರ್ಯ ಉದಯಿಸುವ ಮುನ್ನವೇ ಸಲಾರ್ ಚಿತ್ರದ ಟೀಸರ್ ಬಿಡುಗಡೆ ಮಾಡುವ ನಿರ್ಧಾರವನ್ನು ಯಾಕೆ ಮಾಡಿತು, ಸಾಮಾನ್ಯವಾಗಿ ಸಂಜೆ ಸಮಯದಲ್ಲಿ ಬಿಡುಗಡೆ ಮಾಡಿದ್ದರೆ ಇನ್ನೂ ಹೆಚ್ಚು ವೈರಲ್ ಆಗಲು ಸಹಾಯವಾಗುತ್ತಿತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಕೆಲವರು ಈ ಸಮಯವನ್ನು ನಿರ್ಧರಿಸಲು ಏನೋ ನಿರ್ದಿಷ್ಟ ಕಾರಣವಿದೆ, ಇದರ ಹಿಂದೆ ಏನೋ ಗಂಭೀರವಾದ ವಿಷಯವಿರಬಹುದು ಎಂದೂ ಸಹ ಕಾಮೆಂಟ್ ಮಾಡಿದ್ದರು. ಹೀಗೆ ಎಲ್ಲರಲ್ಲಿಯೂ ಸಲಾರ್ ಚಿತ್ರದ ಟೀಸರ್ ಅನ್ನು ಬೆಳ್ಳಂಬೆಳಗ್ಗೆ 5.12ಕ್ಕೆ ಏಕೆ ಬಿಡುಗಡೆ ಮಾಡಲಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು.

ಈ ಪ್ರಶ್ನೆಗೆ ಇದೀಗ ಸ್ವತಃ ಸಲಾರ್ ಚಿತ್ರದ ಕಾರ್ಯಕಾರಿ ನಿರ್ಮಾಪಕ, ಕೆಆರ್‌ಜಿ ಸ್ಟುಡಿಯೊಸ್ ಬ್ಯಾನರ್‌ನ ಮಾಲೀಕ ಕಾರ್ತಿಕ್ ಗೌಡ ಉತ್ತರವನ್ನು ನೀಡಿದ್ದು, ಸಲಾರ್ ಟೀಸರ್ ಅಷ್ಟು ಬೇಗ ಬಿಡುಗಡೆಗೊಳ್ಳಲು ಕಾರಣವೇನೆಂಬುದನ್ನು ತಿಳಿಸಿದ್ದಾರೆ.

ಓಟಿಟಿ ಪ್ಲೇ ಎಂಬ ವೆಬ್‌ಸೈಟ್ ಈ ಕುರಿತು ಸುದ್ದಿಯನ್ನು ಪ್ರಕಟಿಸಿದ್ದು, ಸಲಾರ್ ಟೀಸರ್ ಅಷ್ಟು ಬೇಗ ಬಿಡುಗಡೆಯಾಗಲು ಕಾರಣವೇನೆಂಬುದನ್ನು ಕಾರ್ತಿಕ್ ಗೌಡ ತಮ್ಮ ತಂಡದ ಜತೆ ಮಾತನಾಡಿ ತಿಳಿಸಿದ್ದಾರೆ ಎಂದು ಬರೆದುಕೊಂಡಿದೆ. ಈ ಸುದ್ದಿಯ ಪ್ರಕಾರ "ಹೊಂಬಾಳೆ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೊಸ್ ಎರಡರಲ್ಲಿಯೂ ನಾವು ಸಮಯವನ್ನು ತುಂಬಾ ನಂಬುತ್ತೇವೆ. 5.12 ಮಂಗಳಕರ ಸಮಯವಾಗಿದೆ ಹೊರತು ಬೇರೇನೂ ಕಾರಣಗಳಿಲ್ಲ. ಚಿತ್ರಗಳ ಪ್ರತಿ ಅಪ್‌ಡೇಟ್ ನೀಡುವಾಗಲೂ ನಾವು ಇದನ್ನೇ ಅನುಸರಿಸುತ್ತೇವೆ" ಎಂದು ಕಾರ್ತಿಕ್ ಗೌಡ ತಿಳಿಸಿದ್ದಾರೆ.

More from Filmibeat

English summary
Karthik Gowda revelas that why Salaar teaser is releasing on 5.12 AM. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X