For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಚಿರಂಜೀವಿ ಕಣ್ಣಲ್ಲಿ ನೀರು ತರಿಸಿದ 'RX100' ನಟ ಕಾರ್ತಿಕೇಯ

  |

  ಮೆಗಾಸ್ಟಾರ್ ಚಿರಂಜೀವಿಗೆ ಬಹುದೊಡ್ಡ ಅಭಿಮಾನಿ ಬಳಗ ಇದೆ. ಸದ್ಯ ತೆಲುಗು ಇಂಡಸ್ಟ್ರಿಗೆ ಚಿರಂಜೀವಿ ದೊಡ್ಡಣ್ಣ ಆಗಿದ್ದಾರೆ. ಯುವ ನಟರಿಗೆ ಸ್ಫೂರ್ತಿಯಾಗಿ, ಮಾರ್ಗದರ್ಶನವಾಗಿದ್ದಾರೆ. ಬಹುಶಃ ಚಿರಂಜೀವಿ ಅವರನ್ನ ನೋಡಿ ಅದೇಷ್ಟೊ ಯುವಕರು ಹೀರೋ ಆಗ್ಬೇಕು ಎಂದು ಕನಸು ಕಂಡವರು ಇದ್ದಾರೆ. ಅಂತವರಲ್ಲಿ ಅನೇಕರು ಸಿನಿಮಾ ಇಂಡಸ್ಟ್ರಿಗೂ ಬಂದಿರುತ್ತಾರೆ.

  ಹೀಗೆ, ಚಿರಂಜೀವಿ ಅವರನ್ನು ಹೆಚ್ಚು ಇಷ್ಟ ಪಡುವ ಯುವಕರಲ್ಲಿ ನಟ ಕಾರ್ತಿಕೇಯ ಕೂಡ ಒಬ್ಬರು. ಆರ್ ಎಕ್ಸ್ 100 ಸಿನಿಮಾ ಕಾರ್ತಿಕೇಯಗೆ ದೊಡ್ಡ ಬ್ರೇಕ್ ಕೊಡ ಕೊಡ್ತು.

  ಅಲ್ಲು ಅರ್ಜುನ್ ಬಗ್ಗೆ ಅಚ್ಚರಿ ಟ್ವೀಟ್, ಆಮೇಲೆ ಡಿಲೀಟ್: ವರ್ಮಾ ವಿರುದ್ಧ ಮೆಗಾ ಫ್ಯಾನ್ಸ್ ಆಕ್ರೋಶಅಲ್ಲು ಅರ್ಜುನ್ ಬಗ್ಗೆ ಅಚ್ಚರಿ ಟ್ವೀಟ್, ಆಮೇಲೆ ಡಿಲೀಟ್: ವರ್ಮಾ ವಿರುದ್ಧ ಮೆಗಾ ಫ್ಯಾನ್ಸ್ ಆಕ್ರೋಶ

  ಚಿರಂಜೀವಿ ಅಂದ್ರೆ ಕಾರ್ತಿಕೇಯಗೆ ತುಂಬಾ ಇಷ್ಟ ಮತ್ತು ಅವರ ಅಭಿಮಾನಿ ಕೂಡ ಹೌದು. ತಮ್ಮ ನೆಚ್ಚಿನ ನಟನಿಗೆ ಗೌರವ ನೀಡುವ ಸಂದರ್ಭ ಸಿಕ್ಕಿದ ವೇಳೆ, ಖುದ್ದು ಚಿರು ಕಣ್ಣಲ್ಲಿ ನೀರು ತರಿಸಿದ್ದಾರೆ ಕಾರ್ತಿಕೇಯ.

  ತೆಲುಗಿನ ಖ್ಯಾತ ಟಿವಿ ವಾಹಿನಿ ಅವಾರ್ಡ್ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಚಿರಿಗೆ ನೃತ್ಯದ ಮೂಲಕ ಟ್ರಿಬ್ಯೂಟ್ ನೀಡಿದ ಕಾರ್ತಿಕೇಯ ಅವರದ್ದೇ ಹಾಡುಗಳಿಗೆ ಜಬರ್ ದಸ್ತ್ ಡ್ಯಾನ್ಸ್ ಮಾಡಿದರು.

  ಚಿರಂಜೀವಿಯನ್ನು 'ತಾತ' ಎಂದ ನಟಿ: 'ಪ್ರಿನ್ಸ್' ಶೋಗೆ ಹೋಗಿದ್ದಕ್ಕೆ ಟ್ರೋಲ್ಚಿರಂಜೀವಿಯನ್ನು 'ತಾತ' ಎಂದ ನಟಿ: 'ಪ್ರಿನ್ಸ್' ಶೋಗೆ ಹೋಗಿದ್ದಕ್ಕೆ ಟ್ರೋಲ್

  ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಚಿರಂಜೀವಿ ಬಳಿ ಬಂದು ಅವರಿಂದಲೂ ಎರಡು ಸ್ಟೆಪ್ ಹಾಕಿಸಿದರು. ನಂತರ ವೇದಿಕೆಗೆ ಹಿಂತಿರುಗಿ ಮಾತನಾಡಿದ ಕಾರ್ತಿಕೇಯ ''ನನ್ನ 27ವರ್ಷದ ಜೀವನದಲ್ಲಿ ಇದು ಅತ್ಯಂತ ಸ್ಮರಣೀಯ ದಿನ. ಅವರನ್ನು ಅಪ್ಪಿಕೊಂಡಾಗ ಅನಿಸಿತು ಅವರೂ ಮನುಷ್ಯರೇ ಎಂದು. ಅವರಿಗೆ ನಾವೆಲ್ಲ ಅಭಿಮಾನಿಗಳು ಅಂದ್ರೆ ಚಿಕ್ಕ ಮಾತು, ನಾವೆಲ್ಲ ಅವರ ಮಕ್ಕಳು. ರಾಮ್ ಚರಣ್ ಮಾತ್ರವಲ್ಲ ನಾವೆಲ್ಲ ಮಕ್ಕಳೇ'' ಎಂದು ಭಾವುಕರಾದರು.

  ಕಾರ್ತಿಕೇಯ ಅವರ ಮಾತುಗಳನ್ನು ಕೇಳಿದ ಚಿರಂಜೀವಿ ಕಣ್ಣಲ್ಲಿ ನೀರು ಹಾಕಿದರು. ಈ ಕ್ಷಣ ನೋಡಲು ಬಹಳ ಭಾವನಾತ್ಮಕವಾಗಿತ್ತು.

  English summary
  Telugu young actor Karthikeya Presented tribute dance to megastar chiranjeevi in tv award function.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X