For Quick Alerts
  ALLOW NOTIFICATIONS  
  For Daily Alerts

  ಡಾನ್ಸ್ ಪ್ಲಸ್‌ ಗೆದ್ದ ಕಾರವಾರದ ಹುಡುಗ ಸಂಕೇತ್

  |

  ಕರ್ನಾಟಕದ ಹುಡುಗರು ಮತ್ತೊಮ್ಮೆ ತಮ್ಮ ಪ್ರತಿಭೆ ಸಾಬೀತು ಪಡಿಸಿದ್ದಾರೆ. ಕಾರವಾರದ ಹುಡುಗ ಸಂಕೇತ್ ಸಹದೇವ್ ತೆಲುಗಿನ ಜನಪ್ರಿಯ ನೃತ್ಯ ರಿಯಾಲಿಟಿ ಶೋ ಡಾನ್ಸ್ ಪ್ಲಸ್‌ನಲ್ಲಿ ಗೆಲುವು ಸಾಧಿಸಿದ್ದಾರೆ.

  ಕಳೆದ ಡಿಸೆಂಬರ್‌ನಲ್ಲಿ ಪ್ರಾರಂಭವಾದ ರಿಯಾಲಿಟಿ ಶೋನಲ್ಲಿ ಅಂತಿಮ ಹಂತದವರೆಗೆ ಬಂದ ಸಂಕೇತ್ ತಮ್ಮ ಅತ್ಯದ್ಭುತ ನೃತ್ಯ ಪ್ರದರ್ಶನದಿಂದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸಂಕೇತ್ ಅವರಿಗೆ ಟ್ರೋಫಿ ಜೊತೆಗೆ 20 ಲಕ್ಷ ರುಪಾಯಿ ನಗದು ಬಹುಮಾನ ಸಹ ನೀಡಲಾಗಿದೆ.

  ಭಾನುವಾರ (ಮೇ 23) ರಂದು ಡಾನ್ಸ್‌ ಪ್ಲಸ್‌ನ ಫೈನಲ್ ಎಪಿಸೋಡ್ ಪ್ರಸಾರವಾಯಿತು. ಜಡ್ಜ್‌ಗಳಾಗಿದ್ದ ಮಾಸ್ಟರ್ ಬಾಬ ಬಾಸ್ಕರ್, ರಘು ಮಾಸ್ಟರ್, ಯಶವಂತ್, ಮೋನಲ್ ಗಜ್ಜರ್ ಮತ್ತು ಮುಮೈತ್ ಖಾನ್ ಅವರುಗಳು ಯಶ್ವಂತ್ ಮಾಸ್ಟರ್‌ ತಂಡದ ಸಂಕೇತ್ ಅನ್ನು ವಿನ್ನರ್ ಆಗಿ ಘೋಷಿಸಿದರು. ಮಹೇಶ್ವರಿ ಮತ್ತು ತೇಜಸ್ವಿನಿ ಅವರುಗಳು ರನರ್‌ಅಪ್ ಆದರು.

  ಡಾನ್ಸ್‌ ಪ್ಲಸ್‌ನಲ್ಲಿ ಶಿವಮೊಗ್ಗದ ನಿವೇದಿತಾ ಸಹ ಭಾಗವಹಿಸಿದ್ದರು, ಉತ್ತಮ ಪ್ರದರ್ಶನ ತೋರುತ್ತಿದ್ದ ಅವರಿಗೆ ಕೈಗೆ ಗಾಯವಾದ ಕಾರಣ ಸ್ಪರ್ಧೆಯಿಂದ ಹೊರಗೆ ಉಳಿದರು. ಇನ್ನು ಮಂಗಳೂರಿನ ವೆಲಾಸಿಟಿ ತಂಡವು ಸಹ ಶೋನಲ್ಲಿತ್ತು ಆದರೆ ಕರ್ನಾಟಕದಲ್ಲಿ ಆದ ಲಾಕ್‌ಡೌನ್ ಕಾರಣದಿಂದ ಅವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

  Upendra ರಾಜಕೀಯ ಉದ್ದೇಶದ ಬಗ್ಗೆ ಅಭಿಮಾನಿಗಳಲ್ಲಿ ನಿರಾಸೆ | Filmibeat Kannada

  ಶೋನ ನಿರ್ಮಾಪಕ, ನಿರ್ದೇಶಕ ಎಲ್ಲ ಆಗಿ ಶೋನ ನಿರೂಪಣೆಯನ್ನು ಮಾಡಿದ್ದ ಓಂಕಾರ್ ತಮ್ಮ ಉತ್ತಮ ನಿರೂಪಣೆ ಮತ್ತು ನಿರ್ವಣಾ ಶೈಲಿಯಿಂದ ಮೆಚ್ಚುಗೆ ಗಳಿಸಿದ್ದಾರೆ. ಶೋನಲ್ಲಿ ಸ್ಪರ್ಧಿಗಳ ನಡುವೆ ಕಿತ್ತಾಟ, ಜಡ್ಜ್‌ಗಳ ನಡುವೆ ಭಿನ್ನಾಭಿಪ್ರಾಯ ಆಗಾಗ್ಗೆ ತಲೆದೂರುತ್ತಲೇ ಇತ್ತು. ಆದರೂ ಇದು ಇತ್ತೀಚಿನ ಜನಪ್ರಿಯ ತೆಲುಗು ಡಾನ್ಸ್ ಶೋ ಎನಿಸಿತು.

  English summary
  Karnataka's Karwar boy Sanketh Sahadev won Dance plus Telugu dance reality show. He won 20 lakh rs along with trophy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X