For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸ್ಟಾರ್ ನಟಿಯ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿಬರುತ್ತಿರುವ ಲೈಗರ್ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿಬಂದಿರುವ ಲೈಗರ್ ಈಗಾಗಲೇ ಪೋಸ್ಟರ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇತ್ತೀಚಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಲೈಗರ್ ಟೀಸರ್ ಗಿಫ್ಟ್ ಆಗಿ ನೀಡಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದರು.

  ವಿಡಿಯೋ ವೈರಲ್: ರಶ್ಮಿಕಾ ಎದುರು ಮಂಡಿಯೂರಿ ಪ್ರಪೋಸ್ ಮಾಡಿದ ದೇವರಕೊಂಡ?ವಿಡಿಯೋ ವೈರಲ್: ರಶ್ಮಿಕಾ ಎದುರು ಮಂಡಿಯೂರಿ ಪ್ರಪೋಸ್ ಮಾಡಿದ ದೇವರಕೊಂಡ?

  ಆದರೆ ಕೊರೊನಾ ತೀವ್ರತೆಯ ಕಾರಣ ಟೀಸರ್ ಬಿಡುಗಡೆ ಮುಂದಕ್ಕೆ ಹಾಕಲಾಗಿದೆ. ಈ ನಡುವೆ ವಿಜಯ್ ದೇವರಕೊಂಡ ನಡುವೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಲೈಗರ್ ಬಳಿಕ ವಿಜಯ್ ಮತ್ತೊಂದು ಪ್ಯಾನ್ ಸಿನಿಮಾದಲ್ಲಿ ನಟಿಸಲು ಸಹಿ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಖ್ಯಾತ ನಿರ್ದೇಶಕ ಕೊರಟಾಲ ಶಿವ ಮುಂದಿನ ಸಿನಿಮಾದಲ್ಲಿ ವಿಜಯ್ ನಾಯಕನಾಗಿ ಮಿಂಚಲಿದ್ದಾರಂತೆ.

  ವಿಶೇಷ ಎಂದರೆ ವಿಜಯ್ ಹೊಸ ಸಿನಿಮಾಗೆ ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ತಯಾರಾಗುತ್ತಿದ್ದು, ವಿಜಯ್ ಮತ್ತು ಕತ್ರಿನಾ ಕೈಫ್ ಅವರನ್ನು ತೆರೆಮೇಲೆ ಕರೆತರುವ ಪ್ಲಾನ್ ಮಾಡಿದ್ದಾರೆ ಆಯೋಜಕರು.

  ಮೊದಲ ಬಾರಿಗೆ ಕತ್ರಿನಾ ಮತ್ತು ವಿಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲೂ ಕುತೂಹಲ ಹೆಚ್ಚಾಗಿದೆ. ಲೈಗರ್ ಸಿನಿಮಾ ಮುಗಿಯುತ್ತಿದ್ದಂತೆ ವಿಜಯ್, ಕೊರಟಾಲ ಶಿವ ಜೊತೆ ಹೊಸ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ಕತ್ರಿನಾ ಕೈಫ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಪೊಲೀಸರಿಗೆ ಮನವಿ ಮಾಡಿಕೊಂಡ ಜಗ್ಗೇಶ್ | Filmibeat Kannada

  ವಿಜಯ್ ಸೇತುಪತಿ ಜೊತೆ ಮೆರಿ ಕ್ರಿಸ್ಮಸ್ ಚಿತ್ರದಲ್ಲೂ ಕತ್ರಿನಾ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ವಿಜಯ್ ಸೇತುಪತಿ ಜೊತೆ ಕತ್ರಿನಾ ತೆರೆಹಂಚಿಕೊಂಡಿದ್ದಾರೆ. ಈಸಿನಿಮಾ ಬಳಿಕ ದಕ್ಷಿಣದ ಸ್ಟಾರ್ ಜೊತೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನು ಸಲ್ಮಾನ್ ಖಾನ್ ಜೊತೆ ಟೈಗರ್-3 ಮತ್ತು ಫೋನ್ ಬೂತ್ ಚಿತ್ರಗಳು ಕತ್ರಿನಾ ಕೈಯಲ್ಲಿದೆ.

  ವಿಜಯ್ ದೇವರಕೊಂಡ ಬಳಿ ಸದ್ಯ ಲೈಗರ್ ಸಿನಿಮಾ ಮಾತ್ರವಿದೆ. ಈ ಚಿತ್ರದ ಬಳಿಕ ವಿಜಯ್ ಅಧಿಕೃತವಾಗಿ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಕೊರಟಾಲ ಶಿವ ನಿರ್ದೇಶನದ ಹೊಸ ಸಿನಿಮಾದಲ್ಲಿ ವಿಜಯ್ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಕತ್ರಿನಾ ನಾಯಕಿಯಾಗಿ ಮಿಂಚಲಿದ್ದಾರೆ.

  English summary
  Bollywood Actress Katrina Kaif likely to sharing screen space with Vijay devarakonda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X