Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೋಲ್ಡನ್ ಗ್ಲೋಬ್ ಗೆದ್ದ 'RRR' ತಂಡದಿಂದ ಇದೆಂಥ ಅವಮಾನ? ಮೌಳಿ ಬೇಕಂತಲೇ ಹೀಗೆ ಮಾಡ್ತಿದ್ದಾರಾ?
ಆರ್‌ಆರ್‌ಆರ್ (RRR) ಚಿತ್ರದ 'ನಾಟು ನಾಟು' ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಬೆಸ್ಟ್ ಒರಿಜಿನಲ್ ಸಾಂಗ್(ಮೂಲ ಗೀತೆ ವಿಭಾಗದಲ್ಲಿ) ಪ್ರಶಸ್ತಿ ಸಿಕ್ಕಿದೆ. ಕ್ಯಾಲಿಫೋರ್ನಿಯಾದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೀತು. ನಿರ್ದೇಶಕ ರಾಜಮೌಳಿ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿ ಆಗಿತ್ತು.
ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಪ್ರಶಸ್ತಿ ಸ್ವೀಕರಿಸಿದರು. ಕಳೆದ ವರ್ಷ ತೆರೆಕಂಡು ಬಾಕ್ಸಾಫೀಸ್‌ನಲ್ಲಿ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಆರ್‌ಆರ್‌ಆರ್ ಸಿನಿಮಾ ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಜ್ಯೂ. ಎನ್‌ಟಿಆರ್, ರಾಮ್‌ಚರಣ್ ನಟನೆಯ ಆರ್‌ಆರ್‌ಆರ್ ಸಿನಿಮಾ ಆಸ್ಕರ್ ರೇಸ್‌ನಲ್ಲೂ ಇದೆ. ಆಸ್ಕರ್‌ನಂತೆಯೇ ಪ್ರತಿಷ್ಠಿತವಾದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿರೋದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ. ಬಾಲಿವುಡ್ ಸೂಪರ್ ಸ್ಟಾರ್ಸ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಮೌಳಿ ಮತ್ತವರ ತಂಡಕ್ಕೆ ಅಭಿನಂದನೆ ತಿಳಿಸುತ್ತಿದೆ.
ಗೋಲ್ಡನ್
ಗ್ಲೋಬ್
ವಿಜೇತರ
ಸಂಪೂರ್ಣ
ಪಟ್ಟಿ,
RRR
ಹೊರತಾಗಿ
ಪ್ರಶಸ್ತಿ
ಗೆದ್ದವರಿವರು
'ನಾಟು ನಾಟು' ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಇಡೀ ಚಿತ್ರತಂಡ ಕುಣಿದು ಸಂಭ್ರಮಿಸಿದೆ. ಆದರೆ ತಂಡದಲ್ಲಿ ಆರ್‌ಆರ್‌ಆರ್ ಚಿತ್ರದ ನಿರ್ಮಾಪಕ ದಾನಯ್ಯ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ನಿರ್ಮಾಪಕ ದಾನಯ್ಯಗೆ ಅವಮಾನ
ನಿರ್ದೇಶಕ ರಾಜಮೌಳಿ ಅಂಡ್ ಟೀಂ ನಿರ್ಮಾಪಕ ದಾನಯ್ಯ ಅವರಿಗೆ ಅವಮಾನ ಮಾಡ್ತಿದೆ ಎನ್ನುವ ಆರೋಪ ಕೇಳಿಬರ್ತಿದೆ. ಈಗಾಗಲೇ ಸಾಕಷ್ಟು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಮೌಳಿ ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾವ ವೇದಿಕೆಯಲ್ಲೂ ನಿರ್ಮಾಪಕ ದಾನಯ್ಯ ಹೆಸರು ಪ್ರಸ್ತಾಪಿಸಲಿಲ್ಲ. ಇಷ್ಟು ದೊಡ್ಡ ಸಿನಿಮಾ ನಿರ್ಮಾಣವಾಗಲು ಮುಖ್ಯ ಕಾರಣ ದಾನಯ್ಯ. ಆದರೆ ಅವರನ್ನು ಯಾಕೆ ನೆನಪಿಸಿಕೊಳ್ತಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ವೇದಿಕೆಯಲ್ಲೂ ಈ ಪುನರಾವರ್ತನೆ ಆಗಿದೆ. ಇದೇ ವಿಚಾರವಾಗಿ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ದಾನಯ್ಯ ಹೆಸರು ಮರೆತ ಕೀರವಾಣಿ
ಪ್ರಶಸ್ತಿ ಪಡೆದು ವೇದಿಕೆಯಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು. "ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸ್ವೀಕರಿಸಿದ್ದು ಸಂತಸ ತಂದಿದೆ. ಈ ಪ್ರಶಸ್ತಿ ನೀಡಿದ ಹೆಚ್‌ಎಫ್‌ಪಿಎಗೆ ಧನ್ಯವಾದ. ಈ ಸಂತಸದ ಸಮಯವನ್ನು ನನ್ನ ಪತ್ನಿ ಜೊತೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನ್ನ ಸಹೋದರ ರಾಜಮೌಳಿಗೆ ಈ ಪ್ರಶಸ್ತಿ ಸಲ್ಲಬೇಕು. ಹಾಡಿಗೆ ಕೆಲಸ ಮಾಡಿದ ಕೊರಿಯೋಗ್ರಫರ್ ಪ್ರೇಮ್ ರಕ್ಷಿತ್, ಹಾಡು ಹಾಡಿದ ರಾಹುಲ್ ಸಿಪ್ಲಿಗಂಜ್, ಕಾಲಭೈರವ, ಸಾಹಿತ್ಯ ಬರೆದ ಚಂದ್ರಬೋಸ್, ಡ್ಯಾನ್ಸ್ ಮಾಡಿದ ಚರಣ್, ತಾರಕ್ ಎಲ್ಲರಿಗೂ ಧನ್ಯವಾದ" ಎಂದಿದ್ದಾರೆ. ಆದರೆ ನಿರ್ಮಾಪಕ ದಾನಯ್ಯ ಹೆಸರನ್ನು ಮಾತ್ರ ಪ್ರಸ್ತಾಪಿಸಲೇ ಇಲ್ಲ.

ತಂಡದಲ್ಲಿ ದಾನಯ್ಯ ಅನುಪಸ್ಥಿತಿ
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭಕ್ಕೆ ರಾಜಮೌಳಿ, ಕೀರವಾಣಿ, ತಾರಕ್, ಚರಣ್ ಎಲ್ಲರೂ ದಂಪತಿ ಸಮೇತ ಹಾಜರಾಗಿದ್ದರು. ಆದರೆ ಚಿತ್ರಕ್ಕೆ ನೂರಾರು ಕೋಟಿ ಬಂಡವಾಳ ಹಾಕಿದ್ದ ದಾನಯ್ಯ ಮಾತ್ರ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರು ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು, ಅದಕ್ಕೆ ಹೋಗಲಿಲ್ಲ ಎಂದುಕೊಂಡರೂ 'ಬಾಹುಬಲಿ' ನಿರ್ಮಾಪಕ ಶೋಬು ಯೆರ್ಲಗಡ್ಡ ಯಾಕೆ ಹೋದ್ರು ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ರಾಜಮೌಳಿಗೆ ಶೋಬು ಆಪ್ತರೇ ಇರಬಹುದು, ಆದರೆ ಆರ್‌ಆರ್‌ಆರ್ ಚಿತ್ರದ ನಿರ್ಮಾಪಕ ದಾನಯ್ಯ ಅವರನ್ನು ಬಿಟ್ಟು ಶೋಬುನ ಕರ್ಕೊಂಡು ಹೋಗಿದ್ದು ಯಾಕೆ? ಎಂದು ಕೆಲವರು ಕೇಳುತ್ತಿದ್ದಾರೆ. ಒಟ್ನಲ್ಲಿ ಮೌಳಿ- ದಾನಯ್ಯ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಈಗ ಶುರುವಾಗಿದೆ. ರಾಜಮೌಳಿ ಪ್ರತಿಭೆ ಬಗ್ಗೆ ಎರಡು ಮಾತಿಲ್ಲ. ಆರ್‌ಆರ್‌ಆರ್ ಚಿತ್ರದ ಕರ್ತೃ ಕರ್ಮ ಕ್ರಿಯೆ ಎಲ್ಲವೂ ಅವರದ್ದೇ ಇರಬಹುದು. ಆದರೆ ಅವರ ಕನಸಿಗೆ ನೀರೆರೆದ ಅನ್ನದಾತನನ್ನು ಮರೆಯಬಾರದು ಅಲ್ಲವೇ?

ತಂಡಕ್ಕೆ ಅಭಿನಂದನೆಯ ಮಹಾಪೂರ
ಬೆಸ್ಟ್ ಒರಿಜಿನಲ್ ಸಾಂಗ್(ನಾಟು ನಾಟು) ಹಾಗೂ ಬೆಸ್ಟ್ ನಾನ್ ಇಂಗ್ಲೀಷ್ ಸಿನಿಮಾ ಕೆಟಗರಿಯಲ್ಲಿ 'ಗೋಲ್ಡನ್ ಗ್ಲೋಬ್' ಪ್ರಶಸ್ತಿಗಾಗಿ RRR ಸಿನಿಮಾ ನಾಮಿನೇಟ್ ಆಗಿತ್ತು. ಒಂದ ಪ್ರಶಸ್ತಿ ಸಿಕ್ಕಿದ್ರೆ, ಮತ್ತೊಂದು ಪ್ರಶಸ್ತಿ ಕೈತಪ್ಪಿದೆ. ಒಟ್ನಲ್ಲಿ 'ನಾಟು ನಾಟು' ಹಾಡಿಗೆ ಅಂತರಾಷ್ಟ್ರೀಯಮಟ್ಟದ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರು ರಾಜಮೌಳಿ ಮತ್ತವರ ತಂಡಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತುಂಬೆಲ್ಲಾ 'ನಾಟು ನಾಟು' ಸಾಂಗ್ ಮಾರ್ದನಿಸುತ್ತಿದೆ.