For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ನಿರ್ದೇಶಕನಿಗೆ ಓಡಾಡಿಸಿ ಹೊಡೆದ ನಟಿ ಕೀರ್ತಿ ಸುರೇಶ್

  |

  ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ತಮ್ಮ ಮುಗ್ಧ, ಸ್ನಿಗ್ಧ ಸೌಂದರ್ಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ ಈ ಮುಗ್ಧ ನಟಿ ಕೀರ್ತಿ ಯಾರನ್ನಾದರೂ ಹೊಡೆಯುತ್ತಾರೆ ಎಂದರೆ ನಂಬಲಸಾಧ್ಯ ಅಲ್ಲವೆ?

  ಆದರೆ ಇದು ನಡೆದಿದೆ, ತಮ್ಮದೇ ಸಿನಿಮಾದ ನಿರ್ದೇಶಕನನ್ನು ಓಡಾಡಿಸಿಕೊಂಡು ಹೊಡೆದಿದ್ದಾರೆ ಕೀರ್ತಿ ಸುರೇಶ್, ಅಷ್ಟೇ ಅಲ್ಲ, ನಟ ನಿತಿನ್ ಅನ್ನೂ ಸಹ ಹೊಡೆಯುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.

  ರಂಗ್‌ದೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ನಟಿ ಕೀರ್ತಿ ಸುರೇಶ್, ಆ ಸಿನಿಮಾದ ನಿರ್ದೇಶಕ ವೆಂಕಿ ಅಲ್ಟೂರಿ ಅವರನ್ನು ಛತ್ರಿಯಲ್ಲಿ ಹೊಡೆದಿದ್ದಾರೆ. ಕೀರ್ತಿ ಇಂದ ತಪ್ಪಿಸಿಕೊಳ್ಳಲು ವೆಂಕಿ ಓಡಿದ್ದಾರೆ, ಆದರೆ ಪಟ್ಟು ಬಿಡದ ಕೀರ್ತಿ ವೆಂಕಿ ಹಿಂದೆ ಓಡಿ ಅವರನ್ನು ಅಡ್ಡಗಟ್ಟಿ ಹೊಡೆದಿದ್ದಾರೆ.

  ಆದರೆ ಕೀರ್ತಿ, ನಿರ್ದೇಶಕ ವೆಂಕಿಯನ್ನು ತಮಾಷೆಗೆ ಹೊಡೆದಿದ್ದಾರಷ್ಟೆ. ಅಷ್ಟೇ ಅಲ್ಲದೆ, ಒಬ್ಬರ ಕತೆ ಮುಗಿಯಿತು, ಇನ್ನು ನನ್ನ ಪ್ರತೀಕಾರ ನಟ ನಿತಿನ್ ಮೇಲೆ ಎಂದು ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ತಾವು ವೆಂಕಿಯನ್ನು ಹೊಡೆದ ವಿಡಿಯೋವನ್ನು ಸಹ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ ಕೀರ್ತಿ.

  ಕೆಲವು ದಿನಗಳ ಹಿಂದಷ್ಟೆ ನಟ ನಿತಿನ್, ಕೀರ್ತಿ ಸುರೇಶ್ ಅವರ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ಚಿತ್ರೀಕರಣದ ಬಿಡುವಿನಲ್ಲಿ ಕೀರ್ತಿ ಸುರೇಶ್ ನಿದ್ದೆ ಮಾಡುತ್ತಿದ್ದ ಚಿತ್ರವದು. 'ನೋಡಿ, ನಾನು, ನಿರ್ದೇಶಕರು ಈ ಬಿಸಿಲಿನಲ್ಲಿ ಚಿತ್ರೀಕರಣ ಮಾಡುತ್ತಾ ಒದ್ದಾಡುತ್ತಿದ್ದರೆ, ಕೀರ್ತಿ ಆರಾಮವಾಗಿ ನಿದ್ದೆ ಮಾಡುತ್ತಿದ್ದಾಳೆ' ಎಂದು ಕ್ಯಾಪ್ಷನ್ ಬರೆದಿದ್ದರು. ಇದರ ಪ್ರತಿಕಾರವನ್ನೇ ಈಗ ಕೀರ್ತಿ ಸುರೇಶ್ ತೀರಿಸಿಕೊಳ್ಳುತ್ತಿದ್ದಾರೆ.

  ದುಬಾರಿ ಗೆ ನಾಯಕಿಯಾದ ಭರಾಟೆ ಬೇಡಗಿ | Filmibeat Kannada

  ನಟಿ ಕೀರ್ತಿ ಸುರೇಶ್ ಹಾಗೂ ನಿತಿನ್ ನಟನೆಯ ರಂಗ್‌ ದೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.

  English summary
  Actress Keerthy Suresh beats her Rangde movie director Venky and make him run. But its just for sake of fun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X