ಬಾಲಿವುಡ್ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಕೀರ್ತಿ ಸುರೇಶ್

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹಾನಟಿ ಸಿನಿಮಾ ನಂತರ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಕೀರ್ತಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚಿಗೆ ಮದುವೆ ವಿಚಾರದ ಮೂಲಕ ಸದ್ದು ಮಾಡಿದ್ದ ನಟಿ ಕೀರ್ತಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಬಾಲಿವುಡ್ ನ ಸೂಪರ್ ಹಿಟ್ ಅಂಧಾದುನ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂಧಾದುನ್ ತೆಲುಗು ರಿಮೇಕ್ ನಲ್ಲಿ ನಟ ನಿತಿನ್ ನಾಯಕನಾಗಿ ನಟಿಸುತ್ತಿದ್ದಾರೆ. ನಟಿ ರಮ್ಯಾ ಕೃಷ್ಣ ಬೋಲ್ಡ್ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನುವ ವಿಚಾರ ಈಗಾಗಲೆ ಕೇಳಿದ್ದೀರಿ. ಇದರ ಬೆನ್ನಲ್ಲೆ ಈಗ ಕೀರ್ತಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಮುಂದೆ ಓದಿ..

ರಾಧಿಕಾ ಆಪ್ಟೆ ಪಾತ್ರದಲ್ಲಿ ಕೀರ್ತಿ ಸುರೇಶ್

ರಾಧಿಕಾ ಆಪ್ಟೆ ಪಾತ್ರದಲ್ಲಿ ಕೀರ್ತಿ ಸುರೇಶ್

ಆಯುಷ್ಮಾನ್ ಖುರಾನ ನಾಯಕನಾಗಿ ಕಾಣಿಸಿಕೊಂಡಿದ್ದ ಅಂಧಾದುನ್ ಚಿತ್ರದಲ್ಲಿ ರಾಧಿಕಾ ಆಪ್ಟೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ರಾಧಿಕಾ ನಿಭಾಯಿಸಿದ್ದ ಪಾತ್ರದಲ್ಲಿ ನಟಿ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಚಿತ್ರತಂಡ ನಟಿ ಪ್ರಿಯಾಂಕಾ ಅರುಲ್ ಮತ್ತು ಕೀರ್ತಿ ಸುರೇಶ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡುವ ಪ್ಲಾನ್ ಮಾಡಿತ್ತು. ಕೊನೆಗೆ ಕೀರ್ತಿ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ.

ಆಯುಷ್ಮಾನ್ ಪಾತ್ರದಲ್ಲಿ ನಿತಿನ್

ಆಯುಷ್ಮಾನ್ ಪಾತ್ರದಲ್ಲಿ ನಿತಿನ್

ಆಯುಷ್ಮಾನ್ ಖುರಾನ ಪಾತ್ರದಲ್ಲಿ ನಟ ನಿತಿನ್ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ನಾಯಕ ನಿತಿನ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. 'ವೆಂಕಟಾದ್ರಿ ಎಕ್ಸ್‌ಪ್ರೆಸ್', 'ಎಕ್ಸ್‌ಪ್ರೆಸ್ ರಾಜ', 'ಕೃಷ್ಣಾರ್ಜುನ ಯುದ್ಧಂ' ಸಿನಿಮಾಗಳನ್ನು ನಿರ್ದೇಶಿಸಿರುವ ಮೆರ್ಲಪಾಕ ಗಾಂಧಿ, ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಟಬು ಪಾತ್ರದಲ್ಲಿ ರಮ್ಯಾ ಕೃಷ್ಣ

ಟಬು ಪಾತ್ರದಲ್ಲಿ ರಮ್ಯಾ ಕೃಷ್ಣ

ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದ 'ಅಂಧಾಧುನ್' ಚಿತ್ರದ ತೆಲುಗು ಅವತರಣಿಕೆಯಲ್ಲಿ ಬೋಲ್ಡ್ ಪಾತ್ರದಲ್ಲಿ ರಮ್ಯಾಕೃಷ್ಣ ಅವರೇ ನಟಿಸಬೇಕು ಎನ್ನುವುದು ನಿರ್ದೇಶಕರ ಬಯಕೆ. ಅದರಂತೆ ಅವರು ರಮ್ಯಾಕೃಷ್ಣ ಜತೆ ಮಾತುಕತೆ ನಡೆಸಿ, ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ನಟಿ ರಮ್ಯಾ ಕೃಷ್ಣ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ರಂಗ್ ದೇ ಸಿನಿಮಾದಲ್ಲಿ ನಿತಿನ್ ಗೆ ಕೀರ್ತಿ ಜೋಡಿ

ರಂಗ್ ದೇ ಸಿನಿಮಾದಲ್ಲಿ ನಿತಿನ್ ಗೆ ಕೀರ್ತಿ ಜೋಡಿ

ನಟ ನಿತಿನ್ ಮತ್ತು ಕೀರ್ತಿ ಸುರೇಶ್ ಸದ್ಯ ರಂಗ್ ದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಆಗಲೆ ಈ ಜೋಡಿ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಸಜ್ಜಾಗಿದೆ. ಕೀರ್ತಿ ಮತ್ತು ನಿತಿನ್ ಜೋಡಿಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

More from Filmibeat

English summary
Actress Keerthy Suresh may play female lead in Telugu remake of Andhadhun. Actor Nithinwill playing lead role in This movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X