For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಲ್ಲಿ 11 ವರ್ಷ ಪೂರೈಸಿದ ಸಮಂತಾ: ಕಾಮನ್ ಡಿಪಿ ರಿಲೀಸ್ ಮಾಡಿದ 'ಮಹಾನಟಿ' ಕೀರ್ತಿ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಚಿತ್ರರಂಗದಲ್ಲಿ 11 ವರ್ಷ ಪೂರೈಸಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಇವತ್ತಿನವರೆಗೂ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಸಮಂತಾ ಚಿತ್ರಪ್ರಿಯರ ಹಾಟ್ ಫೇವರಿಟ್ ನಟಿ.

  ಸಮಂತಾ 2010ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡು ಮೂಲದ ನಟಿ ಸಮಂತಾ ಹುಟ್ಟಿಬೆಳೆದಿದ್ದು ಚೆನ್ನೈನಲ್ಲಿ. 'ವಿನ್ನೈತಂಡಿ ವರುವಾಯಾ' ಎನ್ನುವ ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಮಂತಾ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ.

  ಸಮಂತಾ ಜಿಮ್‌ಗೆ ಹೋಗಲು ಶುರು ಮಾಡಿದ್ದು ಏಕೆ? ಸೀಕ್ರೆಟ್ ಬಿಚ್ಚಿಟ್ಟ ನಟಿ

  ಸಮಂತಾ ಮೊದಲ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 11 ವರ್ಷಗಳಾಗಿದೆ. ತಮಿಳಿನಲ್ಲಿ ಒಂದು ಸಿನಿಮಾ ಮಾಡುತ್ತಿದ್ದಂತೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ, ಯೇ ಮಾಯಾ ಚೇಸಾವೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಮೊದಲ ತೆಲುಗು ಸಿನಿಮಾದಲ್ಲೇ ದೊಡ್ಡ ಮಟ್ಟದ ಖ್ಯಾತಿಗಳಿಸಿದ ಸಮಂತಾ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಮೆರೆದ ಸಮಂತಾ ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾದಲ್ಲೂ ಮಿಂಚಿದ್ದಾರೆ.

  ಸದ್ಯ 11 ವರ್ಷ ಪೂರೈಸಿರುವ ಸಂಭ್ರಮದಲ್ಲಿರುವ ಸಮಂತಾಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ವಿಶೇಷ ಎಂದರೆ ದಕ್ಷಿಣ ಭಾರತದ ಮತ್ತೋರ್ವ ಖ್ಯಾತ ನಟಿ ಕೀರ್ತಿ ಸುರೇಶ್, ಸಮಂತಾ ಅವರ 11 ವರ್ಷದ ಕಾಮನ್ ಡಿಪಿ ರಿಲೀಸ್ ಮಾಡಿ ಶುಭಕೋರಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಕಾಮನ್ ಡಿಪಿ ಶೇರ್ ಮಾಡಿ, ಅಭಿನಂದನೆ ಸಲ್ಲಿಸಿದ್ದಾರೆ. '11 ವರ್ಷದ ಯಶಸ್ವಿ ಪಯಣಕ್ಕೆ ಅಭಿನಂದನೆಗಳು. ನೀವು ಒಬ್ಬರು ವ್ಯಕ್ತಿಯಾಗಿ, ಕಲಾವಿದೆಯಾಗಿ ಬೆಳೆಯುವುದನ್ನು ನೋಡುವುದೇ ಒಂದು ಸಂತೋಷ. ಇನ್ನು ಹಲವು ವರ್ಷಗಳು ಯಶಸ್ವಿಯಾಗಿರಲಿಗೆ ನಿಮ್ಮ ಪಯಣ' ಎಂದು ಬರೆದುಕೊಂಡಿದ್ದಾರೆ.

  ರಶ್ಮಿಕಾ ಮುಂಬೈನಲ್ಲಿ ಖರೀದಿಸಿದ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ? | Filmibeat Kannada

  ಕೀರ್ತಿ ಸುರೇಶ್ ಗೆ ಸಮಂತಾ ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಮಾತುಕತೆ ವೈರಲ್ ಆಗಿದೆ. ಸಮಂತಾ ಕೊನೆಯದಾಗಿ ಜಾನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ತಮಿಳು ಮತ್ತು ತೆಲುಗು ಸೇರಿದಂತೆ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ಸಮಂತಾ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಂಡಿದ್ದಾರೆ.

  English summary
  Actress Keerthy Suresh releases Samantha's common DP of 11 years of Film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X