ಪ್ರಭಾಸ್ ಚಿತ್ರದಲ್ಲಿ ನಟಿಸೋಕೆ ಆ ನಟಿ ನಿರಾಕರಿಸಿದ್ದೇಕೆ? ಕೊನೆಗೆ ಏನಾಯ್ತು?

ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಜೊತೆ ನಟಿಸೋಕೆ ನಟಿಯರು ನಾಮುಂದು ತಾಮುಂದು ಎನ್ನುತ್ತಾರೆ. ಆದರೆ ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಂಡ ನಟಿ ಕೂಡ ಇದ್ದಾರೆ. ಬಳಿಕ ಅದೇ ಚಿತ್ರದಲ್ಲಿ ಆಕೆಯೆ ಮತ್ತೊಂದು ಅವಕಾಶ ಸಿಕ್ಕಿದೆ. ಇತ್ತೀಚೆಗೆ ಬಂದ ಪ್ರಭಾಸ್ ನಟನೆಯ 'ಕಲ್ಕಿ 2898AD' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ.

ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್‌ ಫಿಕ್ಷನ್ ಚಿತ್ರದಲ್ಲಿ ಪ್ರಭಾಸ್ ಹೀರೊ ಆಗಿ ನಟಿಸಿದ್ದಾರೆ. ಆದರೆ ಅಮಿತಾಬ್‌ ಬಚ್ಚನ್‌ ಪಾತ್ರ ಹೆಚ್ಚು ಹೈಲೆಟ್ ಆಗಿದೆ. ಅಶ್ವಿನಿ ದತ್ 'ಕಲ್ಕಿ 2898AD' ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಭಾರೀ ತಾರಾಗಣದ ಸಿನಿಮಾ ಪ್ರೇಕ್ಷಕರ ಮನ ಗೆದ್ದಿತ್ತು. ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಮೃಣಾಲ್ ಠಾಕೂರ್, ವಿಜಯ್ ದೇರವರಕೊಂಡ, ರಾಜಮೌಳಿ, ಆರ್‌ಜಿವಿ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ.

Keerthy suresh reveals why she reject Prabhas kalki 2898 ad film role

ಶೀಘ್ರದಲ್ಲೇ 'ಕಲ್ಕಿ 2898AD' ಸಿನಿಮಾ ಓಟಿಟಿಗೆ ಬರಲಿದೆ. ಸದ್ಯ ಈ ಸಿನಿಮಾ ಬಳಿಕ ಪ್ರಭಾಸ್ ಹಾಗೂ ನಾಗ್‌ ಅಶ್ವಿನ್ ಬೇರೆ ಬೇರೆ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ತಮಿಳಿನ ಎವಿಎಂ ಸ್ಟೂಡಿಯೋಸ್ ಬ್ಯಾನರ್‌ನಲ್ಲಿ ನಾಗ್ ಅಶ್ವಿನ್ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನು ಪ್ರಭಾಸ್ 'ರಾಜಾ ಸಾಬ್' ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಸಿನಿಮಾ ಸೆಟ್ಟೇರಲಿದೆ.

ನಾಗ್ ಅಶ್ವಿನ್ ಇದಕ್ಕೂ ಮುನ್ನ 'ಮಹಾನಟಿ' ಸಿನಿಮಾ ಕಟ್ಟಿಕೊಟ್ಟಿದ್ದರು. ಕೀರ್ತಿ ಸುರೇಶ್ ಲೀಡ್ ರೋಲ್‌ನಲ್ಲಿ ನಟಿಸಿ ಗೆದ್ದರು. 'ಕಲ್ಕಿ 2898AD' ಚಿತ್ರದಲ್ಲಿ ಕೂಡ ಆಕೆಗಾಗಿ ಒಂದು ಪಾತ್ರವನ್ನು ಸಿದ್ಧಪಡಿಸಿದ್ದರು. ಆದರೆ ಕೀರ್ತಿ ನಟಿಸೋಕೆ ಒಲ್ಲೆ ಎಂದಿದ್ದಾರೆ. ಈ ವಿಚಾರವನ್ನು ಖುದ್ದು ಕೀರ್ತಿ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಕೀರ್ತಿ ಸುರೇಶ್ ನಟನೆಯ 'ರಘುತಾತ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೇ ಸಮಯದಲ್ಲಿ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. 'ಕಲ್ಕಿ 2898AD' ಚಿತ್ರದಲ್ಲಿ ನನಗೊಂದು ಪಾತ್ರ ಇದೆ ಮಾಡು ಎಂದಿದ್ದರು. ನನಗೆ ಅದು ಇಷ್ಟವಾಗಲಿಲ್ಲ. ಬಳಿಕ ಸುಮ್ಮನಾಗಿದ್ದೆ. ಇದ್ದಕ್ಕಿದಂತೆ ಒಂದು ದಿನ ಮೆಸೇಜ್ ಮಾಡಿ ನೀನು ನಟಿಸೋದು ಬೇಡ, ನಿನ್ನ ಧ್ವನಿಯನ್ನು ನಾನು ಬಳಸಿಕೊಳ್ಳುತ್ತೇನೆ ಎಂದರು. ನಾನು ಒಪ್ಪಿದೆ ಎಂದು ಆಕೆ ವಿವರಿಸಿದ್ದಾರೆ.

Keerthy suresh reveals why she reject Prabhas kalki 2898 ad film role

ಚಿತ್ರದಲ್ಲಿ ನಾಯಕ ಭೈರವ (ಪ್ರಭಾಸ್) ಜೊತೆ ಬುಜ್ಜಿ ಹೆಸರಿನ ಸಣ್ಣ ರೋಬೊ ಇರುತ್ತದೆ. ಅದಕ್ಕೆ ಕೀರ್ತಿ ಸುರೇಶ್ ವಾಯ್ಸ್ ಕೊಟ್ಟಿದ್ದರು. ನಿಜಕ್ಕೂ ಆಕೆಯ ಧ್ವನಿ ಚೆನ್ನಾಗಿ ಹೊಂದಿಕೊಂಡಿತ್ತು. ಬಹಳ ವಿಭಿನ್ನವಾಗಿಯೂ ಇತ್ತು. ಸೀಕ್ವೆಲ್‌ನಲ್ಲಿ ಕೂಡ ಬುಜ್ಜಿ ಇರಲಿದ್ದು ನಾನು ಮತ್ತೆ ವಾಯ್ಸ್ ಕೊಡಲು ಉತ್ಸುಕಳಾಗಿದ್ದೇನೆ ಎಂದು ಕೀರ್ತಿ ವಿವರಿಸಿದ್ದಾರೆ. ಆದರೆ ಕೀರ್ತಿ ಬೇಡ ಎಂದ ಪಾತ್ರ ಯಾವುದು ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಮೃಣಾಲ್ ಮಾಡಿದ ಸಣ್ಣ ಗೆಸ್ಟ್ ಅಪಿಯರೆನ್ಸ್ ಇರಬಹುದು ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.

'ರಘುತಾತ' ಬಳಿಕ ಕೀರ್ತಿ ಸುರೇಶ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. 'ಬೇಬಿ ಜಾನ್' ಎನ್ನುವ ಹಿಂದಿ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವರುಣ್ ಧವನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಡಿಸೆಂಬರ್ 6ಕ್ಕೆ 'ಬೇಬಿ ಜಾನ್' ಚಿತರ ತೆರೆಗೆ ಬರಲಿದೆ.

ಬಾಲಿವುಡ್ ಕಡೆ ಹೋಗುತ್ತಿದ್ದಂತೆ ಕೀರ್ತಿ ಗ್ಲಾಮರ್ ಡೋಸ್ ಹೆಚ್ಚಿಸಿದ್ದಾರೆ. ಸಿಕ್ಕಾಪಟ್ಟೆ ಬಿಂದಾಸ್ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಆಕೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು. ಬಿಟೌನ್ ನೀರು ಕುಡಿಯುತ್ತಿದ್ದಂತೆ ಮಲಯಾಳಿ ಬೆಡಗಿ ಸಖತ್ ಹಾಟ್ ಆಗಿಬಿಟ್ಟಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Did you know Malayalam actress keerthy suresh rejected role in prabhas' movie;
Read more about: prabhas keerthy suresh telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X