For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಸಿನಿಮಾದ ಕೀರ್ತಿ ಸುರೇಶ್ ಪಾತ್ರ ರಿವೀಲ್

  By ಫಿಲ್ಮ್ ಡೆಸ್ಕ್
  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೊರೊನಾ ಲಾಕ್ ಡೌನ್ ನಡುವೆಯೂ ಈ ಸಿನಿಮಾ ನಾಯಕಿ ವಿಚಾರಕ್ಕೆ ಚರ್ಚೆಯಲ್ಲಿತ್ತು. ಆದರೀಗ ಕೀರ್ತಿ ಸುರೇಶ್ ನಾಯಕಿಯಾಗಿ ಅಭಿನಯಿಸುವುದು ಬಹುತೇಕ ಖಚಿತವಾಗಿ.

  Nikhil & Revathi GYM Workout : ಪ್ರಕೃತಿ ನಡುವೆ ನಿಖಿಲ್ ಕುಮಾರಸ್ವಾಮಿ-ರೇವತಿ ವರ್ಕ್‌ಔಟ್ | Filmiibeat Kannada

  ಮೊದಲ ಬಾರಿಗೆ ಕೀರ್ತಿ ಮತ್ತು ಮಹೇಶ್ ಬಾಬು ಒಟ್ಟಿಗೆ ಅಭಿಮಾನಿಗಳ ಮುಂದೆ ಬರ್ತಿದ್ದು ಈ ಜೋಡಿಯನ್ನು ತೆರೆ ಮೇಲೆ ನೋಡಲು ಕಾತರರಾಗಿದ್ದಾರೆ. ನಾಯಕಿ ವಿಚಾರವಾಗಿ ಸಿನಿಮಾತಂಡ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಕೀರ್ತಿ ನಟಿಸುವುದು ಪಕ್ಕಾ ಎನ್ನುತ್ತಿವೆ ಮೂಲಗಳು. ಜೊತೆಗೆ ಸಿನಿಮಾದಲ್ಲಿ ಕೀರ್ತಿ ಸುರೇಶ್ ಪಾತ್ರ ಕೂಡ ರಿವೀಲ್ ಆಗಿದೆ. ಮುಂದೆ ಓದಿ..

  ನಟ ಮಹೇಶ್ ಬಾಬುಗೆ ಕೂರ್ಗ್ ನಿಂದ ವಿಶೇಷ ಉಡುಗೊರೆ ಕಳುಹಿಸಿಕೊಟ್ಟ ರಶ್ಮಿಕಾ ಮಂದಣ್ಣನಟ ಮಹೇಶ್ ಬಾಬುಗೆ ಕೂರ್ಗ್ ನಿಂದ ವಿಶೇಷ ಉಡುಗೊರೆ ಕಳುಹಿಸಿಕೊಟ್ಟ ರಶ್ಮಿಕಾ ಮಂದಣ್ಣ

  ಬ್ಯಾಂಕ್ ಉದ್ಯೋಗಿ ಪಾತ್ರದಲ್ಲಿ ಕೀರ್ತಿ

  ಬ್ಯಾಂಕ್ ಉದ್ಯೋಗಿ ಪಾತ್ರದಲ್ಲಿ ಕೀರ್ತಿ

  ಮಹೇಶ್ ಬಾಬು ಅಭಿನಯದ ಸರ್ಕಾರು ಪಾರಿ ಪಾಟ ಸಿನಿಮಾದಲ್ಲಿ ಕೀರ್ತಿ ಸುರೇಶ್ ಬ್ಯಾಂಕ್ ಉದ್ಯೋಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ನಾಯಕನ ತಾಯಿ ಕೂಡ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ನಾಯಕನ ತಾಯಿ ಜೊತೆ ನಾಯಕಿ ಅಂದರೆ ಕೀರ್ತಿ ಸುರೇಶ್ ಸಹ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ.

  ಭಾರತ ಬಿಟ್ಟು ಪರಾರಿಯಾದ ಉದ್ಯಮಿ ಕಥೆ

  ಭಾರತ ಬಿಟ್ಟು ಪರಾರಿಯಾದ ಉದ್ಯಮಿ ಕಥೆ

  ದೊಡ್ಡ ಉದ್ಯಮಿಯೊಬ್ಬ ಬ್ಯಾಂಕ್ ನಲ್ಲಿ ವಂಚನೆ ಮಾಡಿ ದೇಶ ಬಿಟ್ಟು ಪರಾರಿಯಾಗುವ ಕಥೆ ಇದಾಗಿದೆಯಂತೆ. ಮೋಸ ಮಾಡಿ ಪರಾರಿಯಾದ ಉದ್ಯಮಿಯನ್ನು ನಾಯಕ ಭಾರತಕ್ಕೆ ಹೇಗೆ ಕರೆತರುತ್ತಾನೆ ಎನ್ನುವುದೇ ಸಿನಿಮಾ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ಈ ಸಿನಿಮಾ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಅವರ ಕಥೆ ಎಂದು ಸಹ ಹೇಳಲಾಗುತ್ತಿದೆ.

  ಮಹೇಶ್ ಬಾಬು ಪತ್ನಿ ನಮ್ರತಾ ಹಾಕಿಸಿಕೊಂಡಿರುವ ಟ್ಯಾಟೂ ವಿಷಯ ಬಹಿರಂಗಮಹೇಶ್ ಬಾಬು ಪತ್ನಿ ನಮ್ರತಾ ಹಾಕಿಸಿಕೊಂಡಿರುವ ಟ್ಯಾಟೂ ವಿಷಯ ಬಹಿರಂಗ

  ಮಹೇಶ್ ಬಾಬು ಸಿನಿಮಾದಲ್ಲಿ ನಿವೇತಾ ಥಾಮಸ್

  ಮಹೇಶ್ ಬಾಬು ಸಿನಿಮಾದಲ್ಲಿ ನಿವೇತಾ ಥಾಮಸ್

  ಮಹೇಶ್ ಬಾಬು ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ನಿವೇತಾ ಥಾಮಸ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಿವೇತಾ ಥಾಮಸ್ ಪಾತ್ರದ ಬಗ್ಗೆ ಇನ್ನೂ ರಿವೀಲ್ ಆಗಿಲ್ಲ. ಚಿತ್ರದಲ್ಲಿ ಇಬ್ಬರು ಖ್ಯಾತ ನಟಿಯರು ಇದ್ದಾರೆ ಅಂದ್ಮೇಲೆ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

  ಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾ

  ಕೀರ್ತಿ ಸುರೇಶ್ ಸಿನಿಮಾಗಳು

  ಕೀರ್ತಿ ಸುರೇಶ್ ಸಿನಿಮಾಗಳು

  ನಟಿ ಕೀರ್ತಿ ಸುರೇಶ್ ಇತ್ತೀಚಿಗೆ ಪೆಂಗ್ವಿನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಕೀರ್ತಿ ಅಭಿನಯದ ಮೊದಲ ಸಿನಿಮಾ ಡಿಜಿಟಲ್ ಫ್ಲಾಟ್ ಫಾರ್ಮಿನಲ್ಲಿ ರಿಲೀಸ್ ಆಗಿದ್ದು, ಕೀರ್ತಿ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೂ ಕೀರ್ತಿ ಬಳಿ ಸಾಕಷ್ಟು ಸಿನಿಮಾಗಳಿವೆ. ಗುಡ್ ಲಕ್, ಸಖಿ, ಮಿಸ್ ಇಂಡಿಯಾ, ರಂಗ್ ದೇ ಸೇರಿದಂತೆ ಸಾಲು ಸಾಲು ಸಿನಿಮಾಗಳು ಕೀರ್ತಿ ಬಳಿ ಇವೆ. ಈಗ ಮಹೇಶ್ ಬಾಬು ಸಿನಿಮಾ ಕೂಡ ಸೇರಿದೆ.

  English summary
  Actress Keerthy Suresh role in Sarkar vaari pata has been reveal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X