ಕೀರ್ತಿ ಸುರೇಶ್ ನಟನೆಯ ಮೊದಲ ತೆಲುಗು ಸಿನಿಮಾಗೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹಾನಟಿ ಸಿನಿಮಾ ಬಳಿಕ ಕೀರ್ತಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಕೀರ್ತಿ ನಟನೆಯ ಮೊದಲ ತೆಲುಗು ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಹೌದು, ಅಚ್ಚರಿ ಎನಿಸಿದರು ಇದು ನಿಜ.
ಕೀರ್ತಿ ಸುರೇಶ್ ನೇನು ಸೈಲಜಾ ಸಿನಿಮಾಗೂ ಮೊದಲು 2015ರಲ್ಲೇ ಮೊದಲ ತೆಲುಗು ಸಿನಿಮಾಗೆ ಸಹಿ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾಗೆ ಇನ್ನು ಬಿಡುಗಡೆ ಆಗಿಲ್ಲ. ಇದೀಗ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಸಿನಿಮಾ ಮೊದಲು ಐನಾ ಇಷ್ಟಮ್ ನುವ್ವು ಎನ್ನುವ ಹೆಸರಿನಲ್ಲಿ ಸೆಟ್ಟೇರಿತ್ತು. ಆದರೀಗ ಬದಲಾದ ಟೈಟಲ್ ನೊಂದಿಗೆ ಸಿನಿಮಾ ತೆರೆಗೆ ಬರುತ್ತಿದೆ.
5 ವರ್ಷಗಳ ಬಳಿಕ ಐನಾ ಇಷ್ಟಮ್ ನುವ್ವು ಸಿನಿಮಾ ಈಗ ಜಾನಕಿಥೋ ನೇನು ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಕೊಂಚ ಬದಲಾವಣೆಯೊಂದಿಗೆ ರಿಲೀಸ್ ಆಗುತ್ತಿದೆ. ಈ ಸಿನಿಮಾ ಮೂಲಕ ನವೀನ್ ವಿಜಯ್ ಕೃಷ್ಣ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ರೋಮ್ಯಾಂಟಿಕ್ ಸಿನಿಮಾ ಇದಾಗಿದ್ದು, ಕೀರ್ತಿ ಸುರೇಶ್ ನಟನೆಯ ಚಿತ್ರ ಎನ್ನುವ ಕಾರಣಕ್ಕೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಲಾಕ್ ಡೌನ್ ಬಳಿಕ ಚಿತ್ರದ ಕೆಲಸವನ್ನು ಪ್ರಾರಂಭ ಮಾಡಿದ್ದು, ಕೆಲವು ಪ್ಯಾಚ್ ವರ್ಕ್ ಅನ್ನು ಈಗಾಗಲೇ ಮಾಡಿ ಮುಗಿಸಿದೆ ಸಿನಿಮಾತಂಡ. ಹಳೆ ಸಿನಿಮಾದ ಹೊಸ ರಿಲೀಸ್ ಡೇಟ್ ಇನ್ನು ಫೈನಲ್ ಆಗಿಲ್ಲ. ಸದ್ಯದಲ್ಲೇ ರಿಲೀಸ್ ಮಾಡುವುದಾಗಿ ಸಿನಿಮಾತಂಡ ತಿಳಿಸಿದೆ.
ಕೀರ್ತಿ ಸುರೇಶ್ ಸದ್ಯ ತೆಲುಗಿನಲ್ಲಿ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಮಹೇಶ್ ಬಾಬುಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನಿತಿನ್ ಜೊತೆ ನಟಿಸಿರುವ ರಂಗ್ ದೆ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಗುಡ್ ಲಕ್ ಸಖಿ, ಅಣ್ಣಾತೆ ಸೇರಿದಂತೆ ಸಾಕಷ್ಟು ಸಿನಿಮಾಗಳು ಕೀರ್ತಿ ಬಳಿ ಇವೆ.


Click it and Unblock the Notifications











