'ಜಯಂ' ನಿರ್ದೇಶಕನ ಚಿತ್ರದಲ್ಲಿ ಕೀರ್ತಿ ಸುರೇಶ್: ನಾಯಕ ಯಾರು?

'ಜಯಂ', 'ಚಿತ್ರಂ', 'ನುವ್ವು-ನೇನು', 'ಔನನ್ನಾ ಕಾದನ್ನ', 'ಲಕ್ಷ್ಮೀ ಕಲ್ಯಾಣಂ' ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ತೇಜ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ನಟಿಸಲಿದ್ದಾರೆ.ಪೆಂಗ್ವಿನ್ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟನೆಯನ್ನು ಮೆಚ್ಚಿದ ತೇಜ, ಕೀರ್ತಿ ಸುರೇಶ್ ಅವರನ್ನೇ ತಮ್ಮ ಮುಂದಿನ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಸಿನಿಮಾದ ನಾಯಕನಾಗಿ ಗೋಪಿಚಂದ್ ಈಗಾಗಲೇ ಆಯ್ಕೆ ಆಗಿದ್ದು, ಗೋಪಿಚಂದ್ ಎದುರಾಗಿ ನಾಯಕಿ ಹುಡುಕಾಟ ನಡೆಸುತ್ತಿದ್ದಾಗ ಕೀರ್ತಿ ನಟನೆ ಗಮನ ಸೆಳೆದು ಅವರನ್ನೇ ಅಂತಿಮ ಮಾಡಲಾಗಿದೆ.ಕೀರ್ತಿ ಸುರೇಶ್ ಅವರ ಇತ್ತೀಚಿನ ಪೆಂಗ್ವಿನ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. ಮಗನಿಗಾಗಿ ಹೋರಾಡುವ ತಾಯಿಯ ಪಾತ್ರದಲ್ಲಿ ಕೀರ್ತಿ ಸುರೇಶ್ ಅದ್ಭುತವಾಗಿ ನಟಿಸಿದ್ದರು.

ಸತತ ಸೋಲು ಕಂಡಿರುವ ತೇಜ

ಸತತ ಸೋಲು ಕಂಡಿರುವ ತೇಜ

ಚಿತ್ರಂ, ಜಯಂ, ನುವ್ವು ನೇನು ಅಂಥಹಾ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ತೆಲುಗು ಚಿತ್ರರಂಗದಕ್ಕೆ ನೀಡಿದ್ದ ನಿರ್ದೇಶಕ ತೇಜ ಕೆಲ ವರ್ಷಗಳಿಂದ ಸತತ ಸೋಲಿನಲ್ಲಿಯೇ ಇದ್ದಾರೆ. ಈ ಸಿನಿಮಾ ಮೂಲಕ ತಮ್ಮ ಹಳೆ ಚಾರ್ಮ್ ಹಿಂಪಡೆಯುವ ಇರಾದೆಯಲ್ಲಿದ್ದಾರೆ ತೇಜ.

ಗೋಪಿಚಂದ್ ಯಶಸ್ಸಿಗೆ ಕಾರಣವಾಗಿದ್ದ ತೇಜ

ಗೋಪಿಚಂದ್ ಯಶಸ್ಸಿಗೆ ಕಾರಣವಾಗಿದ್ದ ತೇಜ

ಇನ್ನು ಗೋಪಿಚಂದ್ ಅವರು ತೇಜ ಅವರ ಸಿನಿಮಾದಿಂದಲೇ ಖ್ಯಾತಿಯ ಉತ್ತುಂಗಕ್ಕೆ ಏರಿದವರು. ಜಯಂ ಸಿನಿಮಾದಲ್ಲಿ ಗೋಪಿಚಂದ್ ನಿರ್ವಹಿಸಿದ ವಿಲನ್ ಪಾತ್ರವೇ ಅವರನ್ನು ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುವಂತೆ ಮಾಡಿತು. ಇದೀಗ ಮತ್ತೆ ಅವರ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.

ಸೀಟಿಮಾರ್ ಸಿನಿಮಾದಲ್ಲಿ ಗೋಪಿಚಂದ್

ಸೀಟಿಮಾರ್ ಸಿನಿಮಾದಲ್ಲಿ ಗೋಪಿಚಂದ್

ಗೋಪಿಚಂದ್ ಪ್ರಸ್ತುತ ಸೀಟಿಮಾರ್ ಎಂಬ ಕ್ರೀಡಾ ಕತೆ ಆಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮನ್ನಾ ನಾಯಕಿಯಾಗಿರುವ ಈ ಸಿನಿಮಾ ಕಬಡ್ಡಿ ಕೋಚ್ ಒಬ್ಬನ ಕತೆ ಆಧರಿಸಿದೆ.

ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ

ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ

ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಪ್ರಸ್ತುತ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂನ ಮರಕ್ಕರ್, ತೆಲುಗಿನ ಗುಡ್‌ಲಕ್ ಸಾಕ್ಷಿ, ರಂಗ್ ದೇ, ಮಿಸ್ ಇಂಡಿಯಾ ಹಾಗೂ ತಮಿಳಿನಲ್ಲಿ ರಜನೀ ನಟಿಸಲಿರುವ ಅನ್ನಾತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Keerthy Suresh to act in director Teja's movie. Hero will be Gopichand.
Read more about: teja telugu ತೆಲುಗು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X