ಕೀರ್ತಿ ಸುರೇಶ್ ಸಂಭಾವನೆ ಕೇಳಿ ರಶ್ಮಿಕಾ, ತಮನ್ನಾ, ಸಮಂತಾ ಶಾಕ್!

'ಮಹಾನಟಿ' ಸಿನಿಮಾ ಮೂಲಕ ದೊಡ್ಡ ಬ್ರೇಕ್ ಪಡೆದುಕೊಂಡ ನಟಿ ಕೀರ್ತಿ ಸುರೇಶ್‌ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಶುರು ಮಾಡಿದರು. ಅದೊಂದು ಸಿನಿಮಾದಿಂದ ಕೀರ್ತಿ ವೃತ್ತಿ ಜೀವನದ ಹಾದಿಯೇ ಬದಲಾಯಿತು. ದುಂಡು ಮಲ್ಲಿಗೆಯಂತಿದ್ದ ಚೆಲುವೆ ತೂಕ ಇಳಿಸಿ ಗ್ಲಾಮರಸ್‌ ರೋಲ್‌ಗಳಿಗೂ ಸೈ ಅಂದರು. ಮಹೇಶ್‌ಬಾಬು, ರಜಿನಿಕಾಂತ್‌ರಂತಹ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡರು. ನಿಧಾನವಾಗಿ ಕೇರಳ ಕುಟ್ಟಿ ಸಂಭಾವನೆ ಕೂಡ ಹೆಚ್ಚಾಗಲು ಪ್ರಾರಂಭವಾಯಿತು.

ಕೀರ್ತಿ ಸುರೇಶ್ ಸದ್ಯ ಒಂದು ತೆಲುಗು ಚಿತ್ರಕ್ಕೆ ಸಹಿ ಮಾಡಿದ್ದು, ಚಿತ್ರದಲ್ಲಿ ಡಿಗ್ಲಾಮರ್ ರೋಲ್‌ನಲ್ಲಿ ಬಣ್ಣಹಚ್ಚಲಿದ್ದಾರೆ. ಆದರೆ ಈ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ತೆಲುಗು ಚಿತ್ರರಂಗದಲ್ಲಿ ಎಲ್ಲಾ ನಟಿಯರಿಗಿಂತ ಹೆಚ್ಚು ಸಂಭಾವನೆಯ ಬೇಡಿಕೆ ಇಟ್ಟಿದ್ದಾರಂತೆ. ಎಷ್ಟೇ ಆದರೂ 'ಮಹಾನಟಿ' ಅಲ್ವಾ ಅಂತ ನಿರ್ಮಾಪಕರು ಕೂಡ ಆಕೆ ಕೇಳಿದಷ್ಟು ಕೊಡಲು ಮುಂದಾಗಿದ್ದಾರಂತೆ. ಕೀರ್ತಿ ಸುರೇಶ್ ಸಂಭಾವನೆ ಕೇಳಿ ಸ್ಟಾರ್ ನಟಿಯರು ದಂಗಾಗಿದ್ದಾರಂತೆ.

'ಮಹಾನಟಿ' ಸಕ್ಸಸ್ ನಂತರ ಕೀರ್ತಿ ಸುರೇಶ್, ದಿಢೀರನೇ ಗ್ಲಾಮರಸ್ ರೋಲ್‌ಗಳಲ್ಲಿ ನಟಿಸಲಿಲ್ಲ. ಪೆಂಗ್ವಿನ್, ಮಿಸ್ ಇಂಡಿಯಾ ರೀತಿಯ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ನಟಿಸಿ, ನಿಧಾನವಾಗಿ ಮಾಮೂಲಿ ಕಮರ್ಷಿಯಲ್ ಸಿನಿಮಾಗಳತ್ತ ಮುಖ ಮಾಡಿದರು. ಮಲಯಾಳಿ ಬೆಡಗಿಯ ಲೆಕ್ಕಾಚಾರ ವರ್ಕೌಟ್ ಆಯ್ತು. ಇತ್ತೀಚೆಗೆ 'ಸರ್ಕಾರುವಾರಿ ಪಾಟ' ಚಿತ್ರದಲ್ಲಿ ಪ್ರಿನ್ಸ್ ಮಹೇಶ್‌ಬಾಬು ಜೋಡಿಯಾಗಿ ಬಿಂದಾಸ್ ಸ್ಟೆಪ್ಸ್ ಹಾಕಿ ರಂಗೇರಿಸಿದರು.

 ಸಂಭಾವನೆಯಲ್ಲಿ ಕೀರ್ತಿ ಲೆಕ್ಕಾಚಾರವೇ ಬೇರೆ

ಸಂಭಾವನೆಯಲ್ಲಿ ಕೀರ್ತಿ ಲೆಕ್ಕಾಚಾರವೇ ಬೇರೆ

ಕೀರ್ತಿ ಸುರೇಶ್ ಚಿತ್ರವೊಂದಕ್ಕೆ ಎಷ್ಟು ಸಂಭಾವನೆ ಪಡೀತಾರೆ ಅನ್ನೋ ವಿಚಾರದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡ್ತಿದೆ. ಕಥೆ ಇಷ್ಟ ಆಗಿ ಒಂದು ವೇಳೆ ಚಿಕ್ಕ ಬಜೆಟ್ ಸಿನಿಮಾ ಆಗಿದ್ದರೆ ಸಿನಿಮಾ ರಿಲೀಸ್‌ ನಂತರ ಲಾಭ ಬಂದಮೇಲೆ ಶೇರ್ ತಗೋತಾರಂತೆ. ಒಂದು ವೇಳೆ ಸಿನಿಮಾ ಸೋತು ನಷ್ಟವಾದರೆ ನಿರ್ಮಾಪಕರ ಬಳಿ ಹಣ ಕೇಳುವುದಿಲ್ಲವಂತೆ. ಹೀಗೊಂದು ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡ್ತಿತ್ತು.

 ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುತ್ತಿರುವ ಕೀರ್ತಿ

ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುತ್ತಿರುವ ಕೀರ್ತಿ

'ಮಹಾನಟಿ' ಕೀರ್ತಿ ಸುರೇಶ್ ಸಿಕ್ಕ ಸಿನಿಮಾಗಳನ್ನೆಲ್ಲಾ ಒಪ್ಪಿಕೊಳ್ಳುವುದಿಲ್ಲ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತೆಲುಗಿನಲ್ಲಿ ನಾನಿ ನಟನೆಯ 'ದಸರಾ' ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುವುದು ಕನ್ಫರ್ಮ್ ಆಗಿದೆ. ಇದು ನಾನಿ ಕರಿಯರ್‌ನಲ್ಲೇ ಬಿಗ್ ಬಜೆಟ್ ಸಿನಿಮಾ. ಚಿತ್ರದಲ್ಲಿ ಡಿಗ್ಲಾಮರ್ ರೋಲ್‌ನಲ್ಲಿ ಕೀರ್ತಿ ಸುರೇಶ್ ನಟಿಸ್ತಿದ್ದು, ಬಜೆಟ್‌ಗೆ ತಕ್ಕಂತೆ ಭಾರೀ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರಂತೆ.

 'ದಸರಾ' ಚಿತ್ರಕ್ಕಾಗಿ ಕೀರ್ತಿ ಭಾರೀ ಸಂಭಾವನೆ

'ದಸರಾ' ಚಿತ್ರಕ್ಕಾಗಿ ಕೀರ್ತಿ ಭಾರೀ ಸಂಭಾವನೆ

ಶ್ರೀಕಾಂತ್ ಒಡೆಲಾ ನಿರ್ದೇಶನದ 'ದಸರಾ' ಚಿತ್ರದಲ್ಲಿ ಕೀರ್ತಿ ಸುರೇಶ್ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೇಳಿಕೇಳಿ ಇದು ಪ್ಯಾನ್ ಇಂಡಿಯಾ ಸಿನಿಮಾ. 'ಮಹಾನಟಿ' ಸಿನಿಮಾ ನಂತರ ಕೀರ್ತಿ ಕ್ರೇಜ್ ದೇಶ ವಿದೇಶಗಳಲ್ಲೂ ಜೋರಾಗಿದೆ. ಅದಕ್ಕೆ ತಕ್ಕಂತೆ 3 ಕೋಟಿ ಸಂಭಾವನೆ ಪಡೀತಿದ್ದಾರೆ ಅನ್ನುವ ಗುಸುಗುಸು ಕೇಳಿ ಬರುತ್ತಿದೆ. ಭಾರಿ ಬಜೆಟ್ ಸಿನಿಮಾ ಆಗಿರುವುದರಿಂದ ನಿರ್ಮಾಪಕರು ಆಕೆ ಕೇಳಿದಷ್ಟು ಸಂಭಾವನೆ ಕೊಡಲು ಒಪ್ಪಿದ್ದಾರಂತೆ.

 ವಿವಾದ ಎಬ್ಬಿಸಿದ್ದ ಸಿನಿಮಾ ಟೈಟಲ್

ವಿವಾದ ಎಬ್ಬಿಸಿದ್ದ ಸಿನಿಮಾ ಟೈಟಲ್

ನಾನಿ - ಕೀರ್ತಿ ಸುರೇಶ್ ಜೋಡಿಯ ಸಿನಿಮಾ ಟೈಟಲ್ ಅನೌನ್ಸ್ ಮಾಡುವ ಮುನ್ನ ಕನ್ನಡದಲ್ಲಿ 'ದಸರಾ' ಟೈಟಲ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ನೀನಾಸಂ ಸತೀಶ್ ಮತ್ತು ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ನಟಿಸ್ತಿದ್ದಾರೆ. ಆದರೆ ತೆಲುಗು 'ದಸರಾ' ಸಿನಿಮಾ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದರಿಂದ ಪ್ರೇಕ್ಷಕರಿಗೆ ಗೊಂದಲವಾಗುತ್ತದೆ, ನಮ್ಮ ಸಿನಿಮಾ ಕಲೆಕ್ಷನ್‌ಗೂ ಹೊಡೆತ ಬೀಳುತ್ತದೆ ದಯವಿಟ್ಟು ಅವರ ಸಿನಿಮಾ ಟೈಟಲ್ ಬದಲಿಸಲು ಹೇಳಿ ಅಂತ ಚಿತ್ರದ ನಿರ್ಮಾಪಕಿಯೂ ಆಗಿರುವ ಶರ್ಮಿಳಾ ಮಾಂಡ್ರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮನವಿ ಮಾಡಿದ್ದರು.

 ಕೀರ್ತಿ ಕನ್ನಡ ಚಿತ್ರದಲ್ಲಿ ನಟಿಸೋದು ಯಾವಾಗ?

ಕೀರ್ತಿ ಕನ್ನಡ ಚಿತ್ರದಲ್ಲಿ ನಟಿಸೋದು ಯಾವಾಗ?

ಸದ್ಯ ತೆಲುಗಿನ 'ಭೋಳಾ ಶಂಕರ್' ಹಾಗೂ 'ದಸರಾ' ಸಿನಿಮಾಗಳ ಜೊತೆಗೆ ತಮಿಳಿನ 'ಮಾಮನ್ನನ್' ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಕೀರ್ತಿ ಸುರೇಶ್ ಕನ್ನಡ ಚಿತ್ರದಲ್ಲಿ ಮಾತ್ರ ಇನ್ನು ನಟಿಸಿಲ್ಲ. ಸಾಕಷ್ಟು ನಿರ್ದೇಶಕರು 'ಮಹಾನಟಿ'ಯನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವುದಾಗಿ ಹೇಳಿದರಾದರೂ ಯಾರು ಮಾಡಿ ತೋರಿಸಲಿಲ್ಲ.

More from Filmibeat

English summary
Keerthy Suresh To Receive A Whopping Remuneration For Her Next movie With Nani. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X