ಮೊದಲ ಸಲ ಡಾರ್ಲಿಂಗ್ ಪ್ರಭಾಸ್ ಗೆ ಮಹಾನಟಿ ಕೀರ್ತಿ ಸುರೇಶ್ ನಾಯಕಿ ; ಹೆಚ್ಚಿದ ''ಸ್ಪಿರಿಟ್''...!

ತಮಿಳು ಚಿತ್ರರಂಗವೂ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಟಾಪ್ ಹೀರೋಯಿನ್ ಕೀರ್ತಿ ಸುರೇಶ್. ತನ್ನ ಅದ್ಭುತ ನಟನೆಯ ಕಾರಣದಿಂದ ಭಾರೀ ಬೇಡಿಕೆ ಹೊಂದಿರೋ ಕೀರ್ತಿ ದಕ್ಷಿಣದ ಮಹಾನಟಿಯಾಗಲು 24 ವರ್ಷಗಳೇ ಬೇಕಾದವು. ಬಾಲನಟಿಯಾಗಿಯೇ ಚಿತ್ರರಂಗಕ್ಕೆ ಬಂದು, ನಾಯಕಿಯಾಗಿ ನೆಲೆಯೂರಿ.. ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ದೊಡ್ಡವರ ಜೊತೆ ತೆರೆ ಹಂಚಿಕೊಂಡಿರುವ ಕೀರ್ತಿ ಸುರೇಶ್, ಇದೇ ಮೊದಲ ಬಾರಿ ಈಗ ಡಾರ್ಲಿಂಗ್ ಪ್ರಭಾಸ್ ಜೊತೆ ಹೆಜ್ಜೆ ಹಾಕಲು ತಮ್ಮ ಕಾಲುಗಳಿಗೆ ಗೆಜ್ಜೆಯನ್ನ ಕಟ್ಟಿಕೊಳ್ಳುತ್ತಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ದಕ್ಷಿಣದಿಂದ ಉತ್ತರದವರೆಗೆ ಕೇಳಿ ಬರುತ್ತಿದೆ.

ಹೌದು, ಆನಿಮಲ್ ಚಿತ್ರದ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಜೊತೆ ಡಾರ್ಲಿಂಗ್ ಪ್ರಭಾಸ್ ಸಿನಿಮಾ ಮಾಡುತ್ತಿರುವುದು ಗೊತ್ತಿರುವುದೇ. ಇದೇ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಅನ್ನುವ ಸುದ್ದಿ ಇದೆ. ಈ ಸುದ್ದಿಯ ಸತ್ಯಾಸತ್ಯತೆ ಸದ್ಯದಲ್ಲಿಯೇ ಹೊರ ಬರಲಿದೆಯಾದರೂ, ಕೀರ್ತಿ ಸುರೇಶ್ ಹಾಗೂ ಪ್ರಭಾಸ್.. ಇವೆರಡು ಅಭಿಮಾನಿ ವರ್ಗ ಈ ಅಂತೆ-ಕಂತೆಯ ಮಾತು ಕೇಳಿ ಕುಣಿಯುತ್ತಿದೆ.

Keerthy Suresh to share screen with prabhas

ಅಂದ್ಹಾಗೇ ಮಹಾನಟಿ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಅಲ್ಲಲ್ಲಿ ಎಡವಿದ ಕೀರ್ತಿ ಸುರೇಶ್, ದಸರಾ ಚಿತ್ರದ ಮೂಲಕ ಗೆಲುವಿನ ನಗೆಯನ್ನ ಮತ್ತೆ ಬೀರಿದ್ದರು. ನಿಜಾ.. ಆ ನಂತರ ಬಂದ ಭೋಲಾ ಶಂಕರ್ ಮಕಾಡೆ ಮಲಗಿಕೊಂಡಿತು. ಆದರೆ ಆ ಸಿನಿಮಾವನ್ನ ಕೀರ್ತಿ ಅಭಿಮಾನಿಗಳೇ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇನ್ನೂ ಸೈರನ್ ಚಿತ್ರಕ್ಕೆ ಸಿಕ್ಕಿದ್ದು ಮಿಶ್ರ ಪ್ರತಿಕ್ರಿಯೆ.

ಇತ್ತೀಚಿನ ದಿನಗಳಲ್ಲಿ ಇಂತಹ ಟ್ರ್ಯಾಕ್ ರೆಕಾರ್ಡ್ ನ ಹೊಂದಿರುವ ಕೀರ್ತಿ ಸುರೇಶ್ ಗೆ, ಬಹುದೊಡ್ಡ ಗೆಲುವೊಂದು ಬೇಕಿದೆ. ಇನ್ನೂ ಪ್ರಭಾಸ್ ಕಥೆ ನಿಮಗೆ ಗೊತ್ತೇ ಇದೆ. ಸಲಾರ್ ಕೈ ಹಿಡಿಯದೇ ಹೋಗಿದ್ದರೆ ಇಂಟರ್ ನ್ಯಾಷನಲ್ ಸ್ಟಾರ್ ಆಗಬೇಕಿದ್ದ ಪ್ರಭಾಸ್ ಪಾತಾಳಕ್ಕೆ ಕುಸಿಯುವ ಭೀತಿ ಇತ್ತು. ಅದೃಷ್ಟ ಹಾಗಾಗಲಿಲ್ಲ. ಈ ಕಾರಣಕ್ಕೆ ಒಂದರ್ಥದಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ಇಬ್ಬರಿಗೂ ಮಹತ್ವದ ಸಿನಿಮಾ ಅನ್ನಲು ಅಡ್ಡಿ ಇಲ್ಲ. ಅಧಿಕೃತ ಘೋಷಣೆಯಾಗಬೇಕಷ್ಟೇ.

Keerthy Suresh to share screen with prabhas

ಉಳಿದಂತೆ ಕೀರ್ತಿ ಸುರೇಶ್ ರಘುತಾತಾ, ರಿವಾಲ್ವರ್ ರೀತಾ, ಕನ್ನಿವೇಡಿ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂರರ ಪೈಕಿ ರಘುತಾತಾ ಗೆ ಕನ್ನಡದ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿದೆ. ಇನ್ನೂ ಬೇಬಿ ಜಾನ್ ಚಿತ್ರದ ಮೂಲಕ ಬಾಲಿವುಡ್‌ ನಲ್ಲಿಯೂ ಅದೃಷ್ಟ ಪರೀಕ್ಷೆಯನ್ನ ಮಾಡಿಕೊಳ್ಳಲು ಕೀರ್ತಿ ಸುರೇಶ್ ಮುಂದಾಗಿದ್ದಾರೆ. ಪ್ರಭಾಸ್ ಕಲ್ಕಿ 2898 AD ಚಿತ್ರದ ಬಿಡುಗಡೆಯನ್ನ ಎದುರು ನೋಡುತ್ತಿದ್ದಾರೆ. ಹೊಡೆದಾಡಿ..ಬಡೆದಾಡಿ.. ಸುಸ್ತಾದಂತೆ ಇರುವ ಪ್ರಭಾಸ್, ರಾಜಾ ಸಾಬ್ ಎಂಬ ವಿಭಿನ್ನ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಇನ್ನೂ ಸಲಾರ್ 2 ಬೇರೆ ಪ್ರಭಾಸ್ ಬತ್ತಳಿಕೆಯಲ್ಲಿದೆ. ಆದರೆ ಬತ್ತಳಿಕೆಯಲ್ಲಿರುವ ಈ ಬಾಣ ಹೊರಬರುವುದು ಯಾವಾಗ ಗೊತ್ತ್ ಇಲ್ಲ. ಯಾಕೆಂದರೆ ಸಂದೀಪ್ ರೆಡ್ಡಿ ವಂಗಾ ಹಾಗೂ ಪ್ರಭಾಸ್ ಮತ್ತು ಕೀರ್ತಿ ಸುರೇಶ್ ಕಾಂಬಿನೇಷನ್ ನ ಸ್ಪಿರಿಟ್ ಸಲಾರ್ 02 ಮುನ್ನ ಆರಂಭವಾಗಲಿದೆ ಅನ್ನುವ ಮಾತು ಇದೆ.

Keerthy Suresh to share screen with prabhas

ಒಟ್ನಲ್ಲಿ ಸದ್ಯಕ್ಕೆ ಕೀರ್ತಿ ಸುರೇಶ್, ಸ್ಪಿರಿಟ್ ಚಿತ್ರತಂಡವನ್ನ ಸೇರಿಕೊಂಡಿದ್ದಾರೆ ಅನ್ನುವ ಗುಸು ಗುಸು ಇದೆ. ನಿಜಕ್ಕೂ ಪ್ರಭಾಸ್ ಗೆ ಸ್ಪಿರಿಟ್ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗ್ತಾರಾ..? ಲೆಟ್ಸ್ ಸೀ

More from Filmibeat

English summary
According To The Latest Reports, Keerthy Suresh To Romance With Darling Prabhas For The First Time. Duo To Share Screen In Sandeep Reddy Vanga's Spirit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X