For Quick Alerts
  ALLOW NOTIFICATIONS  
  For Daily Alerts

  ಇಷ್ಟು ಸಣ್ಣ ವಿಚಾರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ 'ಮಹಾನಟಿ' ಪಾತ್ರ ಕೈಬಿಟ್ಟಿದ್ರಾ ನಿತ್ಯಾ ಮೆನನ್?

  |

  ಮಹಾನಟಿ ತೆಲುಗು ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ. ಕೀರ್ತಿ ಸುರೇಶ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ರಾಷ್ಟ್ರಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿದ್ದರು. ಅಸಲಿಗೆ ಈ ಪಾತ್ರವನ್ನು ನಿತ್ಯಾ ಮೆನನ್ ಮಾಡಬೇಕಿತ್ತು. ಮೊದಲು ಆಕೆಗೆ ಕಥೆ ಹೇಳಿದ್ದರಂತೆ. ಕಥೆ ಕೇಳಿದ ಆಕೆ ಒಂದು ಕಂಡೀಷನ್ ಹಾಕಿದ್ದರಂತೆ. ಅದಕ್ಕೆ ನಿರ್ದೇಶಕರು ಒಪ್ಪದೇ ಕೀರ್ತೀ ಸುರೇಶ್ 'ಮಹಾನಟಿ' ಆಗುವಂತಾಯಿತು.

  ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಖ್ಯಾತ ನಿರ್ಮಾಪಕ ಅಶ್ವಿನಿ ದತ್ ಪುತ್ರಿ ಪ್ರಿಯಾಂಕಾ ದತ್‌ 'ಮಹಾನಟಿ' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಯುವ ನಿರ್ದೇಶಕ ನಾಗ್ ಅಶ್ವಿನ್ ಖ್ಯಾತ ನಟಿ ಸಾವಿತ್ರಿ ಜೀವನಾಧರಿತ ಕಥೆಯನ್ನು ಸೊಗಸಾಗಿ ತೆರೆಗೆ ತಂದು ಸಕ್ಸಸ್ ಕಂಡಿದ್ದರು. ಮೂರು ವಿಭಾಗಗಳಲ್ಲಿ ಸಿನಿಮಾ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದಲ್ಲದೇ ಸಿನಿಮಾ ಅಪಾರ ಜನಮನ್ನಣೆ ಗಳಿಸಿತ್ತು. ತೆಲುಗು ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳಿಗೆ ರೋಲ್ ಮಾಡೆಲ್‌ನಂತಿದೆ ಮಹಾನಟಿ ಸಿನಿಮಾ.

  6 ವರ್ಷ ನಿತ್ಯಾ ಮೆನನ್‌ಗೆ ಕಿರುಕುಳ ಕೊಟ್ಟ ವ್ಯಕ್ತಿ, ಸತ್ಯ ಬಿಚ್ಚಿಟ್ಟ ನಟಿ!6 ವರ್ಷ ನಿತ್ಯಾ ಮೆನನ್‌ಗೆ ಕಿರುಕುಳ ಕೊಟ್ಟ ವ್ಯಕ್ತಿ, ಸತ್ಯ ಬಿಚ್ಚಿಟ್ಟ ನಟಿ!

  ಮಲಯಾಳಂ ಚೆಲುವೆ ಕೀರ್ತಿ ಸುರೇಶ್ 'ಮಹಾನಟಿ' ಸಾವಿತ್ರಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ತೆರೆಮೇಲೆ ಥೇಟ್ ಸಾವಿತ್ರಿಯವರನ್ನೇ ನೆನಪಿಸಿದ್ದರು. ಅಂದಹಾಗೆ ಈ ಅವಕಾಶ ಮೊದಲು ನಿತ್ಯಾ ಮೆನನ್ ಅವರನ್ನು ಹುಡುಕಿಕೊಂಡು ಹೋಗಿತ್ತು. ಆದರೆ ಅದೊಂದು ಕಂಡೀಷನ್ ಹಾಕಿ ಆಕೆ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದರು. ನಂತರ ಎಂತಹ ಅವಕಾಶ ಮಿಸ್ ಮಾಡಿಕೊಂಡೆ ಅಂತ ಕೂಡ ಕೈ ಕೈ ಹಿಸುಕಿಕೊಂಡಿದ್ದರು. ಇದೀಗ ಆಕೆ ಹಾಕಿದ್ದ ಕಂಡೀಷನ್ ಏನು ಅನ್ನುವ ಸೀಕ್ರೆಟ್ ರಿವೀಲ್ ಆಗಿದೆ.

   ಮದ್ಯ ಸೇವಿಸುವ ದೃಶ್ಯಕ್ಕೆ ನೋ ಎಂದಿದ್ದ ನಿತ್ಯಾ!

  ಮದ್ಯ ಸೇವಿಸುವ ದೃಶ್ಯಕ್ಕೆ ನೋ ಎಂದಿದ್ದ ನಿತ್ಯಾ!

  ನಿರ್ಮಾಪಕ ಅಶ್ವಿನಿ ದತ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಹಾನಟಿ ಸಿನಿಮಾ ವಿಚಾರವಾಗಿ ಮಾತನಾಡಿದ್ದಾರೆ. "ಕೀರ್ತಿ ಸುರೇಶ್‌ಗೂ ಮೊದಲು 'ಮಹಾನಟಿ' ಪಾತ್ರಕ್ಕೆ ಮತ್ತೊಬ್ಬ ಮಲಯಾಳಿ ನಟಿಯನ್ನು ಆಯ್ಕೆ ಮಾಡಿದ್ವಿ. ಆಕೆ ಕೂಡ ಒಪ್ಪಿಕೊಂಡಿದ್ದಳು. ಆದರೆ ಕಥೆ ಕೇಳಿದ ಮೇಲೆ ಮದ್ಯ ಸೇವಿಸುವ ದೃಶ್ಯ ಇದ್ದರೆ ನಾನು ನಟಿಸುವುದಿಲ್ಲ" ಎಂದಿದ್ದಳಂತೆ. ನಂತರ ಸ್ವತಃ ನಿರ್ಮಾಪಕರೇ ಆಕೆ ಬೇಡ ಬೇರೆ ನಟಿಯನ್ನು ಹುಡುಕಲು ನಿರ್ದೇಶಕನಿಗೆ ಹೇಳಿದ್ದರಂತೆ. ಆದರೆ ಆ ನಟಿ ಯಾರು ಅನ್ನುವುದನ್ನು ಮಾತ್ರ ಅಶ್ವಿನಿ ದತ್ ಹೇಳಲು ಒಪ್ಪಲಿಲ್ಲ.

   ಪಶ್ಚಾತಾಪ ಪಟ್ಟಿದ್ದ ನಿತ್ಯಾ ಮೆನನ್

  ಪಶ್ಚಾತಾಪ ಪಟ್ಟಿದ್ದ ನಿತ್ಯಾ ಮೆನನ್

  ಹಿಂದೆ ಸಂದರ್ಶನವೊಂದರಲ್ಲಿ ನಿತ್ಯಾ ಮೆನನ್ 'ಮಹಾನಟಿ' ಸಿನಿಮಾ ಬಗ್ಗೆ ಮಾತನಾಡಿದ್ದರು. "ನಾನು ಆ ಪಾತ್ರ ಮಾಡಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ಮಾಡಿದ್ದರೆ ಚೆನ್ನಾಗಿರುತ್ತಿತ್ತು, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ" ಎಂದಿದ್ದರು. ಸಾವಿತ್ರಿ ಬಯೋಪಿಕ್ ಬರ್ತಿದೆ ಎಂದಾಗ ನಿತ್ಯಾ ಮೆನನ್ ನಾಯಕಿ ಅನ್ನು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಸಾವಿತ್ರಿ ಗೆಟಪ್‌ನಲ್ಲಿ ನಿತ್ಯಾ ಫೋಟೊ ಸಹ ವೈರಲ್ ಆಗಿತ್ತು. ಅಶ್ವಿನಿ ದತ್ ಮಾತು ಕೇಳಿದರೆ ಇಷ್ಟು ಸಣ್ಣ ವಿಷಯಕ್ಕೆ ಅಂತಹ ಪಾತ್ರ ಕೈಬಿಟ್ರಾ ಎಂದು ಕೆಲವರು ಹೇಳುತ್ತಿದ್ದಾರೆ. ಅಂದಹಾಗೆ 'ಮಹಾನಟಿ' ಸಾವಿತ್ರಿ ಮದ್ಯ ಸೇವಿಸುವ ದೃಶ್ಯ ಬಹಳ ಹೈಲೆಟ್ ಆಗಿತ್ತು.

   'ಕಥಾನಾಯಕುಡು' ಚಿತ್ರದಲ್ಲಿ ನಿತ್ಯಾ 'ಮಹಾನಟಿ'

  'ಕಥಾನಾಯಕುಡು' ಚಿತ್ರದಲ್ಲಿ ನಿತ್ಯಾ 'ಮಹಾನಟಿ'

  ಸಾವಿತ್ರಿ ಬಯೋಪಿಕ್‌ನಲ್ಲಿ ನಟಿಸದೇ ಇದ್ದರೂ ಎನ್‌ಟಿಆರ್‌ ಬಯೋಪಿಕ್‌ನಲ್ಲಿ ಸಾವಿತ್ರಿ ಪಾತ್ರವನ್ನು ನಿತ್ಯಾ ಮೆನನ್ ಮಾಡಿದ್ದರು. 'ಕಥಾನಾಯಕುಡು' ಚಿತ್ರದಲ್ಲಿ ಬಾಲಕೃಷ್ಣ ತಮ್ಮ ತಂದೆ ಎನ್‌ಟಿಆರ್ ಪಾತ್ರದಲ್ಲಿ ಮಿಂಚಿದ್ದರು. ಸಾವಿತ್ರಿಯಾಗಿ ನಿತ್ಯಾ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು ವಿಶೇಷ. ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಒಟ್ನಲ್ಲಿ ಸಾವಿತ್ರಿಯಾಗಿ ಬಣ್ಣ ಹಚ್ಚುವ ಅವಕಾಶವನ್ನು ಎರಡನೇ ಬಾರಿಗೆ ನಿತ್ಯಾ ಮಿಸ್ ಮಾಡಿಕೊಳ್ಳಲಿಲ್ಲ ಅನ್ನುವುದಷ್ಟೇ ಸಮಾಧಾನಕರ ಸಂಗತಿ.

   ಕನ್ನಡಕ್ಕೆ ಬರ್ತಾರಾ ಮಹಾನಟಿ ಕೀರ್ತಿ?

  ಕನ್ನಡಕ್ಕೆ ಬರ್ತಾರಾ ಮಹಾನಟಿ ಕೀರ್ತಿ?

  ಮಹಾನಟಿ ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಗಳಿಸಿದ ಕೀರ್ತಿ ಸುರೇಶ್ ಇದೀಗ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಹೊಂಬಾಳೆ ಬ್ಯಾನರ್‌ನ ಮುಂದಿನ ಚಿತ್ರದಲ್ಲಿ ಆಕೆ ನಾಯಕಿಯಾಗಿ ನಟಿಸುತ್ತಾರೆ ಅನ್ನುವ ಗುಸುಗುಸು ಕೇಳಿ ಬರ್ತಿದೆ. ಸುಧಾ ಕೊಂಗರ ನಿರ್ದೇಶನದ ಮುಂದಿನ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹೀರೊ ಆಗಿ ತಮಿಳು ನಟ ಸೂರ್ಯ ನಟಿಸ್ತಿದ್ದು, ನಾಯಕಿಯಾಗಿ ಕೀರ್ತಿ ಸುರೇಶ್ ಬಣ್ಣ ಹಚ್ಚುತ್ತಾರೆ ಅನ್ನಲಾಗುತ್ತಿದೆ. ಈ ಮೂಲಕ ಮಹಾನಟಿ ಕೀರ್ತಿ ಸುರೇಶ್ ಸ್ಯಾಂಡಲ್‌ವುಡ್‌ಗೆ ಬರುವ ಸಾಧ್ಯತೆಯಿದೆ.

  English summary
  Keerthy Suresh Was Not First Choice For Savithri Role in Mahanati Movie As Producer. Know More.
  Tuesday, August 16, 2022, 19:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X