"ನಾನು ನಿರ್ದೇಶಕರಿಗೆ ಶರಣಾಗಿಬಿಡ್ತೀನಿ.. ಅವ್ರು ಹೇಳಿದಂತೆ ಕೇಳ್ತೀನಿ"; ಕೇತಿಕಾ ಶರ್ಮಾ

ತೆಲುಗು ಸಿನಿಮಾಗಳಲ್ಲಿ ಇತ್ತೀಚೆಗೆ ಅಸಭ್ಯ ಡ್ಯಾನ್ಸ್ ಸ್ಟೆಪ್ಸ್ ಸದ್ದು ಮಾಡ್ತಿದೆ. 'ಡಾಕು ಮಹಾರಾಜ್' ಚಿತ್ರದ 'ದಬಿಡಿ ದಿಬಿಡಿ' ಹಾಡಿನಲ್ಲಿ ಬಾಲಕೃಷ್ಣ, ಊರ್ವಶಿ ರೌಟೇಲಾ ಡ್ಯಾನ್ಸ್ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಬಳಿಕ 'ರಾಬಿನ್‌ಹುಡ್' ಚಿತ್ರದ 'ಅಧಿದ ಸರ್‌ಪ್ರೈಸು' ಸಾಂಗ್‌ನಲ್ಲಿ ಕೇತಿಕಾ ಶರ್ಮಾ ಹಾಕಿದ್ದ ಸ್ಟೆಪ್ಸ್ ಕೂಡ ಚರ್ಚೆ ಹುಟ್ಟುಹಾಕಿತ್ತು.

ವೆಂಕಿ ಕುಡುಮುಲ ನಿರ್ದೇಶನದ 'ರಾಬಿನ್‌ಹುಡ್' ಸಿನಿಮಾ ಇತ್ತೀಚೆಗೆ ತೆರೆಕಂಡು ಸೋತಿತ್ತು. ನಿತಿನ್ ಹಾಗೂ ಶ್ರೀಲೀಲಾ ನಾಯಕ-ನಾಯಕಿಯಾಗಿ ನಟಿಸಿದ್ದರು. ಜಿ. ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನದ ಚಿತ್ರದಲ್ಲಿ 'ಅಧಿದ ಸರ್‌ಪ್ರೈಸು' ಐಟಂ ಸಾಂಗ್‌ಗೆ ಕೇತಿಕಾ ಶರ್ಮಾ ಹೆಜ್ಜೆ ಹಾಕಿದ್ದಾರೆ. ಚಂದ್ರಬೋಸ್ ಸಾಹಿತ್ಯ ಬರೆದಿರುವ ಹಾಡನ್ನು ನೀತಿ ಮೋಹನ್ ಹಾಗೂ ಅನುರಾಗ್ ಕುಲಕರ್ಣಿ ಹಾಡಿದ್ದಾರೆ.

Ketika Sharma issue clarification on Robinhood movie Adhi Dha Surprisu song steps controversy

ಕೇತಿಕಾ ಮಲ್ಲಿಗೆ ಹೂವನ್ನು ದೇಹದ ಮೇಲ್ಭಾಗಕ್ಕೆ ಸುತ್ತಿಕೊಂಡು ಒಂದು ಸ್ಕರ್ಟ್ ತೊಟ್ಟ ಬಿಂದಾಸ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದರು. ಶೇಖರ್ ಮಾಸ್ಟರ್ ಈ ಹಾಡಿಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದರು. ಹಾಡಿನ ಹುಕ್ ಸ್ಟೆಪ್ಸ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಕೇತಿಕಾ ತಾನು ತೊಟ್ಟಿರುವ ಸ್ಕರ್ಟ್ ಅನ್ನು ಎಳೆದು ತೋರಿಸುತ್ತಾ ವೈಯ್ಯಾರವಾಗಿ ಕುಣಿಯುವ ಡ್ಯಾನ್ಸ್ ಮೂವ್ಸ್ ಅದು. ಆದರೆ ಇದು ಅಸಭ್ಯವಾಗಿದೆ ಎಂದು ಕೆಲವರು ಟೀಕಿಸಿದ್ದರು.

ಇದೇ ಹುಕ್ ಸ್ಟೆಪ್ಸ್ ಅನ್ನು ಸೋಶಿಯಲ್ ಮೀಡಿಯಾ ರೀಲ್ಸ್‌ಗಳಲ್ಲಿ ಕೂಡ ಕೇತಿಕಾ ಮಾಡಿ ತೋರಿಸಿದ್ದರು. ಕೆಲವರು ಶೇಖರ್ ಮಾಸ್ಟರ್ ಕೊರಿಯೋಗ್ರಫಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂತಹ ಸ್ಟೆಪ್ಸ್ ಕಂಪೋಸ್ ಮಾಡುವ ಬದಲು ಚಿತ್ರರಂಗದಿಂದ ನಿವೃತ್ತ ಪಡೆಯಿರಿ ಎಂದಿದ್ದರು. ಮಹಿಳಾ ಆಯೋಗ ಚಿತ್ರತಂಡಕ್ಕೆ ನೋಟಿಸ್ ನೀಡಿ ಆ ಸ್ಟೆಪ್ಸ್ ತೆಗೆದು ಹಾಕುವಂತೆ ಮಾಡಿತ್ತು. ಇದೀಗ ಸ್ವತಃ ನಟಿ ಕೇತಿಕಾ ಶರ್ಮಾ ಈ ಸ್ಟೆಪ್ಸ್ ವಿವಾದದ ಬಗ್ಗೆ ಮಾತನಾಡಿದ್ದಾರೆ. "ನಾನು ನಿರ್ದೇಶಕರ ನಟಿ.. ಅವ್ರು ಹೇಳಿದಂತೆ ಮಾಡುತ್ತೇನೆ" ಎಂದಿದ್ದಾರೆ.

ಕೇತಿಕಾ ಶರ್ಮಾ ನಟನೆಯ 'ಸಿಂಗಲ್' ಎಂಬ ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಚಿತ್ರದ ಪ್ರಚಾರಕ್ಕಾಗಿ ಕೇತಿಕಾ ಮಾಧ್ಯಮಗಳ ಮುಂದೆ ಬಂದಿದ್ದರು. ಈ ವೇಳೆ 'ಅಧಿದ ಸರ್‌ಪ್ರೈಸು' ಸಾಂಗ್ ಕಾಂಟ್ರೊವರ್ಸಿ ಬಗ್ಗೆ ಪ್ರಶ್ನೆ ಎದುರಾಗಿದೆ. "ಆ ಸ್ಟೆಪ್ಸ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಈ ವಿವಾದದ ಬಳಿಕ ಈ ಬಗ್ಗೆ ಗಮನ ಹರಿಸಬೇಕು ಎಂದು ನನಗೆ ಅನ್ನಿಸುತ್ತಿದೆ. ಇದರಿಂದ ಪಾಠ ಕಲಿಯುಂತಾಗಿದೆ. ಆದರೆ ನಾನು ನಿರ್ದೇಶಕರ ನಟಿ. ಅವ್ರು ಹೇಳಿದಂತೆ ಕೇಳುವುದು ನನ್ನ ಕೆಲಸ. ಸಂಪೂರ್ಣವಾಗಿ ನಾನು ಶರಣಾಗುತ್ತೇನೆ. ಕಲೆಗಾಗಿ ಇದೆಲ್ಲಾ ಮಾಡುವುದು. ಮುಂದೆ ಯಾವುದೇ ಸಾಂಗ್ ಮಾಡುವಾಗ ಎಚ್ಚರಿಕೆ ವಹಿಸುತ್ತೇನೆ" ಎಂದಿದ್ದಾರೆ.

"ಆ ಸ್ಟೆಪ್ಸ್ ಹಾಕುವಾಗ ಹೀಗೆಲ್ಲಾ ಆಗುತ್ತದೆ ಎಂದುಕೊಂಡಿರಲಿಲ್ಲ. ಸುಮ್ಮನೆ ಡ್ಯಾನ್ಸ್ ಮಾಡುತ್ತಾ ಹೋದೆ. ಅದನ್ನೆಲ್ಲಾ ಎಂಜಾಯ್ ಮಾಡಿದೆ. ಸಿನಿಮಾ ಇಷ್ಟವಾದರೆ ಜನ ಹೇಗೆ ಎಂಜಾಯ್ ಮಾಡ್ತಾರೋ? ಅದೇ ರೀತಿ ಇಷ್ಟವಾಗದಿದ್ದರೆ ಹೆಚ್ಚು ಟೀಕಿಸುತ್ತಾರೆ. ಈ ಸಾಂಗ್‌ಗೆ ಸಿಕ್ಕಿದ ಮಿಕ್ಸ್ಡ್ ರೆಸ್ಪಾನ್ಸ್ ಹಾಗೂ ವಿವಾದದ ಬಗ್ಗೆ ನನಗೂ ಗೊತ್ತು. ನಟಿಯಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು, ಐಟಂ ಸಾಂಗ್ ಮಾಡೋದು ತಪ್ಪಲ್ಲ. ಅದು ಕಥೆಯ ಭಾಗ. ಗ್ಲಾಮರ್ ಎನ್ನುವುದನ್ನು ತಪ್ಪಾಗಿ ನೋಡಬಾರದು, ಅದು ನಟನೆಯ ಒಂದು ಭಾಗ. ಮೊದಲಿಗೆ ಈ ಸ್ಟೆಪ್ಸ್ ಮಾಡುವಾಗ ಡೌಟ್ ಬಂತು, ಆದರೂ ಡೈರೆಕ್ಟರ್ ಹೇಳಿದಂತೆ ಮಾಡಲು ಒಪ್ಪಿದೆ" ಎಂದು ಕೇತಿಕಾ ಶರ್ಮಾ ವಿವರಿಸಿದ್ದಾರೆ.

More from Filmibeat

English summary
Actress Ketika Sharma opens up on Adhi Dha Surprisu song steps controversy, says i am director's actor, will surrender them;
Read more about: tollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X