ಸ್ಕರ್ಟ್ ಎಳೆದು ತೋರಿಸುತ್ತಾ ವಿಚಿತ್ರ ಡ್ಯಾನ್ಸ್ ಸ್ಟೆಪ್ಸ್; ಇದ್ಯಾವ್ ಸೀಮೆ ಡ್ಯಾನ್ಸ್ ಎಂದು ಟ್ರೋಲ್
ಕಮರ್ಷಿಯಲ್ ಸಿನಿಮಾಗಳಲ್ಲಿ ಐಟಂ ಸಾಂಗ್ ತುರುಕುವ ಪ್ರಯತ್ನ ಇನ್ನು ನಿಂತಿಲ್ಲ. ಇವತ್ತಿಗೂ ಮಾಸ್ ಸಿನಿಮಾದಲ್ಲೊಂದು ಡ್ಯಾನ್ಸಿಂಗ್ ನಂಬರ್ ಇರಬೇಕು, ಬಿಂದಾಸ್ ನಟಿ ಕುಣಿಯಬೇಕು ಎನ್ನುವ ಲೆಕ್ಕಾಚಾರ ಮುಂದುವರೆದಿದೆ. ಆದರೆ ಈ ಸ್ಪೆಷಲ್ ಸಾಂಗ್‌ಗಳಲ್ಲಿ ಕೆಲವೊಮ್ಮೆ ಹಾಕುವ ಡ್ಯಾನ್ಸ್ ಸ್ಟೆಪ್ಸ್ ಟ್ರೋಲ್ ಆಗುತ್ತಿರುತ್ತದೆ.
ಕೆಲ ದಿನಗಳ ಹಿಂದೆ ತೆಲುಗಿನ 'ಡಾಕು ಮಹಾರಾಜ್' ಚಿತ್ರದ ಸ್ಪೆಷಲ್ ಸಾಂಗ್ ಇದೇ ರೀತಿ ಟ್ರೋಲ್ ಆಗಿತ್ತು. ಶೇಖರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಬಾಲಕೃಷ್ಣ, ಊರ್ವಶಿ ರೌಟೇಲಾ ಬಿಂದಾಸ್ ಹೆಜ್ಜೆ ಹಾಕಿದ್ದರು. 'ದಬಿಡಿ ದಿಬಿಡಿ' ಸಾಂಗ್‌ನಲ್ಲಿದ್ದ ಕೆಲ ಡ್ಯಾನ್ಸ್ ಮೂವ್ಸ್ ಟ್ರೋಲ್ ಮಾಡುವವರಿಗೆ ಆಹಾರವಾಗಿತ್ತು. ಇದೀಗ 'ರಾಬಿನ್ ಹುಡ್' ಚಿತ್ರದ ಐಟಂ ಸಾಂಗ್ ರಿಲೀಸ್ ಆಗಿದೆ.

ನಿತಿನ್ ಹಾಗೂ ಶ್ರೀಲೀಲಾ ನಟನೆಯ ಸಿನಿಮಾ ಇದು. ವೆಂಕಿ ಕುಡುಮುಲ ನಿರ್ದೇಶನದ ಚಿತ್ರಕ್ಕೆ ಜಿ. ವಿ ಪ್ರಕಾಶ್ ಕುಮಾರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 'ಅದಿ ದಾ ಸರ್‌ಪ್ರೈಸು' ಎಂದು ಶುರುವಾಗುವ ಚಿತ್ರದ ಸ್ಪೆಷಲ್ ಸಾಂಗ್ ಲಿರಿಕಲ್ ವೀಡಿಯೋ ರಿಲೀಸ್ ಆಗಿದೆ. ಅದರಲ್ಲಿ ಹುಕ್ ಸ್ಟೆಪ್ ಅನ್ನು ರಿವೀಲ್ ಮಾಡಿದ್ದಾರೆ. ಕೆತಿಕಾ ಶರ್ಮಾ ಬಿಂದಾಸ್ ಆಗಿ ಹೆಜ್ಜೆ ಹಾಕಿ ರಂಗೇರಿಸಿದ್ದಾರೆ.
ಬ್ಲೌಸ್ ಮತ್ತು ಸ್ಕರ್ಟ್ ಧರಿಸಿ ಕೆತಿಕಾ ಸಿಕ್ಕಾಪಟ್ಟೆ ಮಾದಕವಾಗಿ ಹೆಜ್ಜೆ ಹಾಕಿದ್ದಾರೆ. ಮಲ್ಲಿಗೆ ಹೂವಿನಿಂದಲೇ ಎದೆ ಮುಚ್ಚಿಕೊಂಡಂತೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ದರ್ಶನ ಕೊಟ್ಟಿದ್ದಾರೆ. ಆದರೆ ಹುಕ್ ಸ್ಟೆಪ್ ಕೊಂಚ ಅಸಭ್ಯವಾಗಿದೆ ಎನ್ನುವ ಕಾಮೆಂಟ್ಸ್ ಕೇಳಿಬರ್ತಿದೆ. ಆಕೆ ತೊಟ್ಟಿರುವ ಸ್ಕರ್ಟ್ ಅನ್ನು ಮುಂದಕ್ಕೆ ಎಳೆದಂತೆ ಹಾಕಿರುವ ಸ್ಟೆಪ್ಸ್ ಕೆಲವರಿಗೆ ಇಷ್ಟವಾಗಿದೆ. ಆದರೆ ಬಹುತೇಕರು ಇದ್ಯಾವ್ ಸೀಮೆ ಸ್ಟೆಪ್ ಎಂದು ಶೇಖರ್ ಮಾಸ್ಟರ್‌ನ ಟ್ರೋಲ್ ಮಾಡ್ತಿದ್ದಾರೆ.
ಮಾರ್ಚ್ 28ಕ್ಕೆ 'ರಾಬಿನ್ ಹುಡ್' ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 'ಎಕ್ಸ್‌ಟ್ರಾಡಿನರಿಮ್ಯಾನ್' ಸಿನಿಮಾ ಬಳಿಕ ನಿತಿನ್ ಈ ಚಿತ್ರದಲ್ಲಿ ನಟಿಸಿದ್ದಾರೆ. 'ಪುಷ್ಪ'-2 ಸಿನಿಮಾ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರಕ್ಕೂ ಹಣ ಹೂಡಿದೆ.
ಸತತ ಸೋಲುಗಳಿಂದ ಕಂಗೆಟ್ಟ ಶ್ರೀಲೀಲಾ ಕೂಡ ಈ ಸಿನಿಮಾ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಮೊದಲಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಡೇಟ್ಸ್ ಸಮಸ್ಯೆಯಿಂದ ಆಕೆ ಹೊರ ಬಂದು ಅವಕಾಶ ಶ್ರೀಲೀಲಾ ಪಾಲಾಗಿತ್ತು. ಬಹಳ ಅದ್ಧೂರಿಯಾಗಿ 'ರಾಬಿನ್‌ಹುಡ್' ಸಿನಿಮಾ ನಿರ್ಮಾಣವಾಗಿದೆ. ಒಂದೊಂದೇ ಹಾಡು ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.
ಟೈಟಲ್ ಹೇಳುವಂತೆ ಇದು ಶ್ರೀಮಂತರಿಂದ ದೋಚಿ ಬಡವರಿಗೆ ಹಂಚುವ ನಾಯಕ ಕಥೆ. ಬಹಳ ಅದ್ಧೂರಿಯಾಗಿ ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. 'ಚಲೋ', 'ಭೀಷ್ಮ' ರೀತಿಯ ಸದಭಿರುಚಿ ಸಿನಿಮಾಗಳನ್ನು ಕೊಟ್ಟ ವೆಂಕಿ ಕುಡುಮುಲ ಈ ಬಾರಿ ಯಾವ ರೀತಿಯ ಕಥೆ ಹೇಳಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.


Click it and Unblock the Notifications











