KGF 2 Ticket Price in AP: ಆಂಧ್ರದಲ್ಲಿ 'ಕೆಜಿಎಫ್ 2'ಗೆ ಹೊಡೆತ, ಲೀಟರ್ ಪೆಟ್ರೋಲ್‌ಗಿಂತ ಕಡಿಮೆ ಬೆಲೆಗೆ ಟಿಕೆಟ್‌ಗಳು

'ಕೆಜಿಎಫ್ 2' ಸಿನಿಮಾ ದೊಡ್ಡ ಓಪನಿಂಗ್ ಪಡೆದುಕೊಳ್ಳಲಿದೆ. ಮೊದಲ ದಿನವೇ ಸುಮಾರು 150 ಕೋಟಿ ರುಪಾಯಿ ಹಣವನ್ನು ಸಿನಿಮಾ ಗಳಿಸಲಿದೆ ಎಂಬ ಅಂದಾಜು ಹಾಕಿದ್ದಾರೆ, ಬಾಕ್ಸ್ ಆಫೀಸ್ ತಜ್ಞರು.

'ಕೆಜಿಎಫ್ 2' ಸಿನಿಮಾವು ಉತ್ತರ ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದ 'RRR' ಸಿನಿಮಾ ನಿರ್ಮಿಸಿದ್ದ ದಾಖಲೆಗಳನ್ನು ಪುಡಿಗಟ್ಟುತ್ತಾ ಮುಂದೆ ಸಾಗಿದೆ 'ಕೆಜಿಎಫ್ 2'.

ಉತ್ತರ ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲಿಯೂ 'ಕೆಜಿಎಫ್ 2' ಸಿನಿಮಾ ದಾಖಲೆಗಳನ್ನು ಮಾಡುತ್ತಿದೆ. ಆದರೆ ದಕ್ಷಿಣ ಭಾರತದಲ್ಲಿ ಸಿನಿಮಾಕ್ಕೆ ಕೆಲವು ಅಡೆ-ತಡೆಗಳು ಸಹ ಎದುರಾಗಿವೆ. ಅದರಲ್ಲಿ ಪ್ರಮುಖವಾದುದು ಆಂಧ್ರ ಸರ್ಕಾರದಿಂದ ಉಂಟಾಗುತ್ತಿರುವ ಸಮಸ್ಯೆ.

ಟಿಕೆಟ್ ದರ ತಗ್ಗಿಸಿರುವ ಜಗನ್ ಸರ್ಕಾರ

ಟಿಕೆಟ್ ದರ ತಗ್ಗಿಸಿರುವ ಜಗನ್ ಸರ್ಕಾರ

ಆಂಧ್ರ ಪ್ರದೇಶ ಸರ್ಕಾರವು ಚಿತ್ರರಂಗದ ಬಗ್ಗೆ ಕಟು ನಿರ್ಧಾರಗಳನ್ನು ತಳೆದು ಎರಡು ವರ್ಷವಾಗುತ್ತಾ ಬಂದಿದೆ. ಕೊರೊನಾದಿಂದಾಗಿ ಚಿತ್ರರಂಗ ಬಳಲಿದ್ದ ಸಮಯದಲ್ಲಿಯೇ ಆಂಧ್ರದ ಎಲ್ಲ ಚಿತ್ರಮಂದಿರಗಳ ಟಿಕೆಟ್ ದರವನ್ನು ಧಾರುಣವಾಗಿ ತಗ್ಗಿಸಿದ್ದ ಆಂಧ್ರ ಸರ್ಕಾರ, ತೆಲುಗು ಚಿತ್ರರಂಗವನ್ನು ನೇರವಾಗಿ ಐಸಿಯುಗೆ ಕಳಿಸಿತ್ತು. ಹಲವು ಆವೇಷ ಭರಿತ ಹೇಳಿಕೆಗಳು, ಪ್ರತಿಭಟನೆಗಳು ಮಾಡಿದರು ಜಗನ್ ನೇತೃತ್ವದ ಸರ್ಕಾರ ಬಗ್ಗಿರಲಿಲ್ಲ. ಆದರೆ ಚಿರಂಜೀವಿ ಮಾತುಕತೆ ಬಳಿಕ ತುಸು ಬದಲಾವಣೆಗಳನ್ನು ತಂದುಕೊಂಡಿತು.

Recommended Video

Beast ಸಿನಿಮಾ ಹೇಗಿದೆ ಅಂದ್ರೆ KGF 2 ಬಗ್ಗೆ ಹೇಳ್ತಾರೆ ವಿಜಯ್ ಫ್ಯಾನ್ಸ್ | BEAST REVIEW | Vijay | Yash | KGF2
ಬಜೆಟ್ ಸಿನಿಮಾಗಳಿಗೆ ಟಿಕೆಟ್‌ ದರ ಹೆಚ್ಚಿಸಬಹುದು

ಬಜೆಟ್ ಸಿನಿಮಾಗಳಿಗೆ ಟಿಕೆಟ್‌ ದರ ಹೆಚ್ಚಿಸಬಹುದು

ದೊಡ್ಡ ಬಜೆಟ್‌ ಸಿನಿಮಾಗಳಿಗೆ ಕೆಲ ವಿನಾಯಿತಿ ನೀಡಿ, ಕೆಲವು ವಾರಗಳ ಕಾಲ ದೊಡ್ಡ ಬಜೆಟ್ ಸಿನಿಮಾಗಳು ಟಿಕೆಟ್ ದರ ಹೆಚ್ಚಿಸಿಕೊಳ್ಳಬಹುದು ಎಂದು ಆದೇಶವನ್ನು ಬದಲಾಯಿಸಿತು. ಹೀಗಾಗಿ 'RRR' ಸಿನಿಮಾದ ಟಿಕೆಟ್ ರೇಟುಗಳು ಆಂಧ್ರದಲ್ಲಿ 150 ರಿಂದ 250, 300 ರವರೆಗೆ ಮಾರಾಟವಾದವು. ಈಗ 'ಕೆಜಿಎಫ್ 2' ಸಿನಿಮಾ ಸಹ ಆಂಧ್ರದಲ್ಲಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 'ಕೆಜಿಎಫ್ 2' ಸಿನಿಮಾ ಸಹ ದೊಡ್ಡ ಬಜೆಟ್ ಸಿನಿಮಾ ಆದರೂ ಟಿಕೆಟ್ ದರ ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿಲ್ಲ.

ಅವಕಾಶ ನೀಡಿಲ್ಲ ಸರ್ಕಾರ

ಅವಕಾಶ ನೀಡಿಲ್ಲ ಸರ್ಕಾರ

ಸರ್ಕಾರದ ಆದೇಶದ ಪ್ರಕಾರ, ದೊಡ್ಡ ಬಜೆಟ್ ಸಿನಿಮಾಗಳು ಟಿಕೆಟ್ ದರ ಹೆಚ್ಚಿಸಿಕೊಳ್ಳಬಹುದು. ಆದರೆ 'ಕೆಜಿಎಫ್‌ 2'ಗೆ ಆ ಅವಕಾಶ ನೀಡಲಾಗಿಲ್ಲ. 'ಕೆಜಿಎಫ್ 2' ಸ್ಥಳೀಯ ಸಿನಿಮಾ ಅಲ್ಲ ಎಂಬುದು ಕಾರಣ. ಹೀಗಾಗಿ ಆಂಧ್ರದ ಹಲವು ಕಡೆ 'ಕೆಜಿಎಫ್ 2' ಸಿನಿಮಾದ ಟಿಕೆಟ್ ದರ ಕೇವಲ 80 ರಿಂದ 100 ರುಪಾಯಿಗಳಷ್ಟೆ ಇದೆ. 'ಬೀಸ್ಟ್' ಸಿನಿಮಾದ ಟಿಕೆಟ್‌ ಕೆಲವೆಡೆ, 145 ರಿಂದ 100 ರುಪಾಯಿಗಳ ವರೆಗೆ ಇದೆ. ಕೆಲವೆಡೆ, 70, 80 ರುಪಾಯಿಗಳಿಗೂ ಟಿಕೆಟ್ ಲಭ್ಯವಿದೆ. ಈ ಕಾರಣದಿಂದಾಗಿ ಚಿತ್ರತಂಡವು ಸರ್ಕಾರದ ಜೊತೆ ಮಾತುಕತೆಗೆ ಸಹ ಯತ್ನಿಸುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ವಿಶವದಾದ್ಯಂತ ಒಳ್ಳೆಯ ಅಡ್ವಾನ್ಸ್ ಬುಕಿಂಗ್

ವಿಶವದಾದ್ಯಂತ ಒಳ್ಳೆಯ ಅಡ್ವಾನ್ಸ್ ಬುಕಿಂಗ್

'ಕೆಜಿಎಫ್ 2' ಸಿನಿಮಾದ ಟಿಕೆಟ್‌ಗಳು ದೇಶದಾದ್ಯಂತ ಮಾತ್ರವಲ್ಲ ವಿಶ್ವದಾದ್ಯಂತ ಅಡ್ವಾನ್ಸ್ ಆಗಿ ಬುಕಿಂಗ್ ಆಗಿವೆ. ಮುಂಬೈನಲ್ಲಿ ಅಂತೂ ಕೆಲವೆಡೆ ಒಂದು ಟಿಕೆಟ್ 2000 ರುಪಾಯಿಗೆ ಮಾರಾಟವಾಗುತ್ತಿದೆ. ಮೊದಲ ದಿನದ ಕಲೆಕ್ಷನ್ ನಲ್ಲಿ ದಾಖಲೆ ಬರೆವ ಎಲ್ಲ ಲಕ್ಷಗಳು ಗೋಚರಿಸುತ್ತಿವೆ. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಹ ಕೆಲವು ನಗರಗಳಲ್ಲಿ 'ಕೆಜಿಎಫ್ 2' ಸಿನಿಮಾದ ಪ್ರೀಮಿಯರ್ ಶೋಗಳ ಟಿಕೆಟ್‌ಗಳು ಅಡ್ವಾನ್ಸ್ ಬುಕಿಂಗ್ ಆಗಿವೆ. ಸಿನಿಮಾವು ಏಪ್ರಿಲ್ 14 ರಂದು ತೆರೆ ಕಾಣುತ್ತಿದ್ದು, ಈ ಸಿನಿಮಾದ ಮುಂದೆ 'ಕೆಜಿಎಫ್ 2' ಮಂಕಾಗುವ ಎಲ್ಲ ಲಕ್ಷಣಗಳು ಇವೆ.

More from Filmibeat

English summary
KGF 2 movie facing problems with ticket price in Andhra Pradesh. movie's ticket price is very less in Andhra Pradesh compare to other states.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X