Salaar Teaser: ಕೆಜಿಎಫ್ 2ನಲ್ಲಿದ್ದ ದೃಶ್ಯ ಸಲಾರ್ ಟೀಸರ್‌ನಲ್ಲಿ; ನೀಲ್ ಯೂನಿವರ್ಸ್ ಫಿಕ್ಸ್?

ಈ ವರ್ಷದ ಭಾರತದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಸಲಾರ್ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಚಿತ್ರತಂಡ ಚಿತ್ರದ ಮೇಲೆ ಸಿನಿ ರಸಿಕರಿಗೆ ಇರುವ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಲು ಟೀಸರ್ ಬಿಡುಗಡೆ ಮಾಡಿದೆ.

ಇಂದು ( ಜುಲೈ 6 ) ಬೆಳಗ್ಗೆ 5.12ಕ್ಕೆ ಸಲಾರ್ ಚಿತ್ರದ ಟೀಸರ್ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ. ಚಿತ್ರದ ಟೀಸರ್ ವೀಕ್ಷಿಸುವ ಸಲುವಾಗಿ ರಾತ್ರಿಯಿಡೀ ನಿದ್ರೆ ಇಲ್ಲದೇ ಕಾದಿದ್ದ ಪ್ರಭಾಸ್ ಅಭಿಮಾನಿಗಳು ಟೀಸರ್ ಕಂಡು ಫಿದಾ ಆಗಿದ್ದಾರೆ.

KGF Chapter 2 post credit scene repeated in Salaar teaser

ಸಿನಿ ರಸಿಕರು ಪ್ರಶಾಂತ್ ನೀಲ್ ಬತ್ತಳಿಕೆಯಿಂದ ಮತ್ತೊಂದು ದೊಡ್ಡ ಆಯುಧ ಹೊರ ಬರುತ್ತಿದೆ ಎಂದು ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಟೀಸರ್ ಚಿತ್ರತಂಡ ಊಹಿಸಿದ ಹಾಗೆ ಸಿನಿ ರಸಿಕರಲ್ಲಿ ನಿರೀಕ್ಷೆ ಹೆಚ್ಚಿಸುವ ಕೆಲಸ ಮಾಡಿದೆ.

ಇನ್ನು 1.46 ನಿಮಿಷವಿರುವ ಈ ಟೀಸರ್‌ನಲ್ಲಿ ಶುರುವಿನಿಂದ ಕೊನೆಯವರೆಗೂ ಮಾಸ್ ಎಲಿಮೆಂಟ್‌ಗಳ ಸರಮಾಲೆಯೇ ಇದೆ. ವಿದೇಶಿ ವಿಲನ್‌ಗಳ ಗುಂಪು ಓರ್ವನನ್ನು ಗುಂಡಿಕ್ಕಿ ಕೊಲ್ಲಲು ಗುಂಪುಗಟ್ಟಿ ನಿಂತಿರುವಾಗ ಆ ವಿಲನ್‌ಗಳ ಜತೆ ಆತ ( ಟಿನ್ನು ಆನಂದ್ ) ಮಾತನಾಡಲು ಆರಂಭಿಸುತ್ತಾನೆ.

'ಸಿಂಪಲ್ ಇಂಗ್ಲಿಷ್.. ನೋ ಕನ್‌ಫ್ಯೂಷನ್.." ಎಂದು ಡೈಲಾಗ್ ಆರಂಭಿಸುವ ಆತ "ಲಯನ್, ಚೀತಾ, ಟೈಗರ್, ಎಲಿಫೆಂಟ್ ವೆರಿ ಡೇಂಜರಸ್.. ಬಟ್.. ನಾಟ್ ಇನ್ ಜುರಾಸಿಕ್ ಪಾರ್ಕ್.. ಬಿಕಾಸ್ ಇನ್ ದಟ್ ಪಾರ್ಕ್, ದೇರ್ ಈಸ್ ಎ.." ಎಂದು ನಾಯಕ ನಟ ಪ್ರಭಾಸ್‌ಗೆ ಬಿಲ್ಡಪ್ ಕೊಡ್ತಾನೆ.

ಇದು ಡೈಲಾಗ್ ಆದರೆ ಟೀಸರ್‌ನ ಇನ್ನುಳಿದ ಸಮಯದಲ್ಲಿ ಕೆಲವೊಂದಷ್ಟು ಫೈಟ್ ದೃಶ್ಯಗಳು ಹಾಗೂ ಕೆಲವು ಗಣಿ ಪ್ರದೇಶದ ಚಟುವಟಿಕೆಗಳ ದೃಶ್ಯಗಳನ್ನು ತೋರಿಸಿದ್ದಾರೆ. ಈ ದೃಶ್ಯಗಳ ಪೈಕಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಪೋಸ್ಟ್ ಕ್ರೆಡಿಟ್ ಸೀನ್‌ನಲ್ಲಿ ಬರುವ ದೃಶ್ಯವೂ ಸಹ ಒಂದಾಗಿದೆ.

ಹೌದು, ಕೆಜಿಎಫ್ ಚಾಪ್ಟರ್ 2ನ ಕ್ಲೈಮ್ಯಾಕ್ಸ್ ಬಳಿಕ ಬರುವ ಪೋಸ್ಟ್ ಕ್ರೆಡಿಟ್ ಸೀನ್‌ನಲ್ಲಿ ಗಣಿ ಪ್ರದೇಶದಲ್ಲಿ 516 ಬಿಗ್ ಬ್ಯಾರೆಲ್ ನಿಲ್ಲಿಸಿರುವ ದೃಶ್ಯವಿದೆ. ಅದೇ ಸಂಖ್ಯೆಯ ಬಿಗ್ ಬ್ಯಾರೆಲ್ ಇರುವ ಇದೀಗ ಸಲಾರ್ ಟೀಸರ್‌ನಲ್ಲಿಯೂ ಸಹ ಇದೆ. ಈ ದೃಶ್ಯವನ್ನು ಹೋಲಿಸುತ್ತಿರುವ ಸಿನಿ ರಸಿಕರು ಎರಡೂ ಚಿತ್ರಗಳನ್ನೂ ಹೋಲಿಸುತ್ತಿದ್ದಾರೆ. ಈ ಮೂಲಕ ಪ್ರಶಾಂತ್ ನೀಲ್ ತಮ್ಮದೇ ಆದ ಸಿನಿಮ್ಯಾಟಿಕ್ ಯೂನಿವರ್ಸ್ ತಯಾರಿಸುತ್ತಿದ್ದು ಒಂದೇ ಚಿತ್ರದಲ್ಲಿ ಪ್ರಭಾಸ್ ಹಾಗೂ ಯಶ್ ಇಬ್ಬರನ್ನೂ ನೋಡಬಹುದು ಎಂದು ಊಹಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವು ಸಿನಿ ರಸಿಕರು ಈ ಅಂಶದ ಕುರಿತು ನಕಾರಾತ್ಮಕವಾಗಿ ಸಹ ಪ್ರತಿಕ್ರಿಯಿಸಿದ್ದಾರೆ. ಸಲಾರ್ ಚಿತ್ರದ ಟೀಸರ್‌ನಲ್ಲಿ ಬರುವ ಗಣಿಗಾರಿಕೆ ದೃಶ್ಯಗಳು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬರುವ ದೃಶ್ಯಗಳ ರೀತಿಯೇ ಇವೆ ಎಂದಿದ್ದು, ಸಲಾರ್ ಟೀಸರ್ ಕೆಜಿಎಫ್ ಚಾಪ್ಟರ್ 2 ಚಿತ್ರದ ಡಿಲೀಟೆಡ್ ಸೀನ್ಸ್ ಎಂದು ಟ್ರೋಲ್ ಮಾಡಿದ್ದಾರೆ. ಆದರೆ ಕೆಲವರು ಕೆಜಿಎಫ್ ಚಾಪ್ಟರ್ 2ಗೆ ಬಳಸಿದ್ದ ಸೆಟ್‌ಗಳನ್ನೇ ಈ ಚಿತ್ರದ ಚಿತ್ರೀಕರಣಕ್ಕೂ ಬಳಸಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

1.46 ನಿಮಿಷವಿರುವ ಈ ಟೀಸರ್‌ನಲ್ಲಿ ಶುರುವಿನಿಂದ ಕೊನೆಯವರೆಗೂ ಮಾಸ್ ಎಲಿಮೆಂಟ್‌ಗಳ ಸರಮಾಲೆಯೇ ಇದೆ. ವಿದೇಶಿ ವಿಲನ್‌ಗಳ ಗುಂಪು ಓರ್ವನನ್ನು ಗುಂಡಿಕ್ಕಿ ಕೊಲ್ಲಲು ಗುಂಪುಗಟ್ಟಿ ನಿಂತಿರುವಾಗ ಆ ವಿಲನ್‌ಗಳ ಜತೆ ಆತ ( ಟಿನ್ನು ಆನಂದ್ ) ಮಾತನಾಡಲು ಆರಂಭಿಸುತ್ತಾನೆ.

'ಸಿಂಪಲ್ ಇಂಗ್ಲಿಷ್.. ನೋ ಕನ್‌ಫ್ಯೂಷನ್.." ಎಂದು ಡೈಲಾಗ್ ಆರಂಭಿಸುವ ಆತ "ಲಯನ್, ಚೀತಾ, ಟೈಗರ್, ಎಲಿಫೆಂಟ್ ವೆರಿ ಡೇಂಜರಸ್.. ಬಟ್.. ನಾಟ್ ಇನ್ ಜುರಾಸಿಕ್ ಪಾರ್ಕ್.. ಬಿಕಾಸ್ ಇನ್ ದಟ್ ಪಾರ್ಕ್, ದೇರ್ ಈಸ್ ಎ.." ಎಂದು ನಾಯಕ ನಟ ಪ್ರಭಾಸ್‌ಗೆ ಬಿಲ್ಡಪ್ ಕೊಡುವ ದೃಶ್ಯವಿದೆ. ಬಳಿಕ ಪ್ರಭಾಸ್ ಮುಖವನ್ನು ಸೈಡ್ ಆಂಗಲ್‌ನಲ್ಲಿ ತೋರಿಸಲಾಗಿದ್ದು, ಹೆಚ್ಚೇನೂ ಡೈಲಾಗ್ ಇಲ್ಲದೇ ಟೀಸರ್ ಕಟ್ ಮಾಡಲಾಗಿದೆ.

More from Filmibeat

English summary
KGF Chapter 2 post credit scene repeated in Salaar teaser. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X