ಪ್ರಭಾಸ್ ಜೊತೆ ನಟಿಸುವ ಆಸೆಯಿದೆಯೇ? ಇಲ್ಲಿದೆ ಅವಕಾಶ
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಸದ್ಯ ರಾಧೆ ಶ್ಯಾಮ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ರಿಲೀಸ್ ಮುನ್ನವೇ ಪ್ರಭಾಸ್ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
Recommended Video
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆೆ. ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ, ಪ್ರಭಾಸ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಹತ್ತು ಹಲವಾರು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಡುತ್ತಿದೆ.
ಈ ನಡುವೆ ಸಿನಿಮಾತಂಡ ಪ್ರಭಾಸ್ ಜೊತೆ ನಟಿಸುವ ಆಸೆ ಇರೋರಿಗಾಗಿ ಅಕಾಶ ನೀಡಲ ಮುಂದಾಗಿದೆ. ಹೌದು, ಪ್ರಶಾಂತ್ ನೀಲ್ ಮತ್ತು ತಂಡ ಸಲಾರ್ ಸಿನಿಮಾಗೆ ಕಾಸ್ಟಿಂಗ್ ಕಾಲ್ ಮಾಡುತ್ತಿದ್ದಾರೆ. ಈಗಾಗಲೇ ಹೈದರಾಬಾದ್ ನಲ್ಲಿ ಆಡಿಶನ್ ನಡೆಸಿದ್ದ ಸಲಾರ್ ತಂಡ ಇದೀಗ ಚೆನ್ನೈ ಕಡೆ ಹೊರಟಿದ್ದಾರೆ.

ಚೆನ್ನೈನಲ್ಲಿ ಸಲಾರ್ ಆಡಿಶನ್
ಚೆನ್ನೈನ ಶೋಭ ಕಲ್ಯಾಣ ಮಂಟಪಂನಲ್ಲಿ ಸಲಾರ್ ಆಡಿಶನ್ ನಡೆಯುತ್ತಿದೆ. ಯಾವುದೇ ವಯಸ್ಸಿನವರು ಆಡಿಶನ್ ನಲ್ಲಿ ಭಾಗಿಯಾಗಬಹುದು. ಆದರೆ ಚೆನ್ನೈ ಆಡಿಶನ್ ನಲ್ಲಿ ಕೇವಲ ಪುರುಷರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಮಕ್ಕಳು 8 ರಿಂದ 12 ವರ್ಷದವರೆಗಿವರು ಮಾತ್ರ ಭಾಗವಹಿಸಬೇಕು.

ಡಿಸೆಂಬರ್ 30ಕ್ಕೆ ಆಡಿಶನ್
ಅಂದಹಾಗೆ ಆಡಿಶನ್ ನಡೆಯುವುದು ಇದೇ ತಿಂಗಳು ಡಿಸೆಂಬರ್ 30 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ವರೆಗೆ. ಒಂದು ನಿಮಿಷದ ವಿಡಿಯೋ ಮಾಡಿ ಅದನ್ನು ಕಳುಹಿಸಬೇಕು. ಯಾವುದೇ ಭಾಷೆಯಲ್ಲಾದರೂ ಸರಿ ಎಂದು ಸಿನಿಮಾತಂಡ ಹೇಳಿದೆ. ಇನ್ನೂ ಆಡಿಶನ್ ಗೆ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಯಾವುದೇ ಪ್ರಶ್ನೆಗಳಿದ್ದರೆ ಸಂಪರ್ಕ ಮಾಡಲು 3 ಮೊಬೈಲ್ ನಂಬರ್ ಗಳನ್ನು ನೀಡಿದ್ದಾರೆ.

ಚೆನ್ನೈ ನಂತರ ನಮ್ಮ ಬೆಂಗಳೂರಿನಲ್ಲಿ ಆಡಿಶನ್
ಮೊದಲ ಹೈದರಾಬಾದ್ ನಲ್ಲಿ ಆಡಿಶನ್ ಮಾಡಿದ್ದ ಸಿನಿಮಾತಂಡ ಇದೀಗ ಚೆನ್ನೈನಲ್ಲಿ ಮಾಡುತ್ತಿದೆ. ಹೈದರಾಬಾದ್ ಆಡಿಶನ್ ನಲ್ಲಿ ಜನಸಾಗರವೇ ಹರಿದಬಂದಿತ್ತು. ಸದ್ಯ ಚೆನ್ನೈಲ್ಲಿಯೂ ಸಾಕಷ್ಟು ಜನ ಆಡಿಷನ್ ನಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಇನ್ನು ನಂತರ ಬೆಂಗಳೂರಿನಲ್ಲಿ ಆಡಿಶನ್ ಮಾಡುವುದಾಗಿ ಸಿನಿಮಾತಂಡ ಹೇಳಿದೆ. ಆದರೆ ಬೆಂಗಳೂರಿನಲ್ಲಿ ನಡೆಯುವ ಆಡಿಶನ್ ದಿನಾಂಕ ಇನ್ನು ಬಹಿರಂಗವಾಗಿಲ್ಲ.

ಕೆಜಿಎಫ್-2 ಮುಗಿದ ಬಳಿಕ ಸಲಾರ್
'ಸಲಾರ್' ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಸದ್ಯ ಪ್ರಶಾಂತ್ ನೀಲ್ ಕೆಜಿಎಫ್ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್-2 ಚಿತ್ರದ ಚಿತ್ರೀಕರಣ ಮುಗಿದ ಬಳಿಕ ಸಲಾರ್ ಪ್ರಾರಂಭ ಮಾಡಲಿದ್ದಾರೆ. ಪ್ರಭಾಸ್ ಸಹ ರಾಧೆ-ಶ್ಯಾಮ್ ಸಿನಿಮಾ ಮುಗಿಸಿ, ಆದಿಪುರುಷ್ ಸಿನಿಮಾ ಪ್ರಾರಂಭಿಸುತ್ತಿದ್ದಾರೆ. ಸಲಾರ್ ಮತ್ತು ಆದಿಪುರುಷ್ ಒಟ್ಟಿಗೆ ಚಿತ್ರೀಕರಣ ಗೊಳ್ಳುವ ಸಾಧ್ಯತೆ ಇದೆ.


Click it and Unblock the Notifications











