For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ದೊಡ್ಡ ಪ್ರಾಜೆಕ್ಟ್‌ನಲ್ಲಿ 'ಕೆಜಿಎಫ್' ಗರುಡ, ಫಸ್ಟ್ ಲುಕ್ ಬಿಡುಗಡೆ

  |

  ಕೆಜಿಎಫ್ ಚಾಪ್ಟರ್ 1 ಸಿನಿಮಾದಲ್ಲಿ ಗರುಡನಾಗಿ ಮಿಂಚಿದ್ದ ರಾಮಚಂದ್ರರಾಜುಗೆ ಸೌತ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಿತ್ತು. ತಮಿಳು, ತೆಲುಗು ಹಾಗೂ ಮಲಯಾಳಂ ಇಂಡಸ್ಟ್ರಿಯಲ್ಲಿ ಆಫರ್‌ಗಳು ಬಂದವು.

  ಸದ್ಯ, ಗರುಡ ಖ್ಯಾತಿಯ ರಾಮ್‌ಗೆ ಕನ್ನಡಕ್ಕಿಂತ ಪರಭಾಷೆಯಲ್ಲಿ ಹೆಚ್ಚು ಬೇಡಿಕೆ ಇದೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸುತ್ತಿತುವ 'ಆರಟ್ಟು' ಚಿತ್ರದಲ್ಲಿ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು ನಟ ಕಾರ್ತಿ ನಟಿಸಿದ್ದ 'ಸುಲ್ತಾನ್' ಚಿತ್ರದಲ್ಲಿ ಅಭಿನಯಿಸಿದ್ದರು. ಇದು ಬಿಟ್ಟು ತಮಿಳಿನ ಹಲವು ಸಿನಿಮಾಗಳಲ್ಲಿ ರಾಮ್ ನಟಿಸುತ್ತಿದ್ದಾರೆ. ಇದೀಗ, ರಾಮ್ ಅವರ ತೆಲುಗು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಮುಂದೆ ಓದಿ...

  ದುಬಾರಿ ಕಾರು ಖರೀದಿಸಿದ 'ಕೆಜಿಎಫ್' ಗರುಡ: ಮೊದಲು ಭೇಟಿ ಮಾಡಿದ್ದು ಯಾರನ್ನ? ದುಬಾರಿ ಕಾರು ಖರೀದಿಸಿದ 'ಕೆಜಿಎಫ್' ಗರುಡ: ಮೊದಲು ಭೇಟಿ ಮಾಡಿದ್ದು ಯಾರನ್ನ?

  ತೆಲುಗಿನಲ್ಲಿ ಗರುಡ

  ತೆಲುಗಿನಲ್ಲಿ ಗರುಡ

  ಅಜಯ್ ಭೂಪತಿ ನಿರ್ದೇಶಿಸುತ್ತಿರುವ 'ಮಹಾ ಸಮುದ್ರಂ' ಚಿತ್ರದಲ್ಲಿ 'ಗರುಡ' ಖ್ಯಾತಿಯ ರಾಮಚಂದ್ರರಾಜು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧನಂಜಯ್ ಎಂಬ ಕ್ಯಾರೆಕ್ಟರ್ ನಿರ್ವಹಿಸುತ್ತಿದ್ದು, ಚಿತ್ರತಂಡ ರಾಮ್ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.

  ಶರ್ವಾನಂದ್-ಸಿದ್ಧಾರ್ಥ್

  ಶರ್ವಾನಂದ್-ಸಿದ್ಧಾರ್ಥ್

  'ಮಹಾ ಸಮುದ್ರಂ' ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 96 ರಿಮೇಕ್ 'ಜಾನು' ಸಿನಿಮಾದಲ್ಲಿ ನಟಿಸಿದ್ದ ಶರ್ವಾನಂದ್ ಹಾಗೂ ಸಿದ್ಧಾರ್ಥ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇವರ ಜೊತೆ ಜಗಪತಿ ಬಾಬು, ರಾವ್ ರಮೇಶ್ ಸಹ ನಟಿಸಿದ್ದಾರೆ.

  'ಕೆಜಿಎಫ್ 2'ನಲ್ಲಿ ರಾಕಿ ಭಾಯ್ ಲುಕ್ ಹೇಗಿರಲಿದೆ?: 'ಗರುಡ' ಕೊಟ್ಟ ಎಕ್ಸ್‌ಕ್ಲ್ಯೂಸಿವ್ ಮಾಹಿತಿ'ಕೆಜಿಎಫ್ 2'ನಲ್ಲಿ ರಾಕಿ ಭಾಯ್ ಲುಕ್ ಹೇಗಿರಲಿದೆ?: 'ಗರುಡ' ಕೊಟ್ಟ ಎಕ್ಸ್‌ಕ್ಲ್ಯೂಸಿವ್ ಮಾಹಿತಿ

  ಇಬ್ಬರು ಹೀರೋಯಿನ್

  ಇಬ್ಬರು ಹೀರೋಯಿನ್

  ಶರ್ವಾನಂದ್ ಮತ್ತು ಸಿದ್ಧಾರ್ಥ್‌ಗೆ ಜೋಡಿಯಾಗಿ ಬಾಲಿವುಡ್ ನಟಿ ಅಧಿತಿ ರಾವ್ ಹೈದರಿ ಮತ್ತು ಅನು ಅನು ಇಮ್ಮಾನ್ಯುಯೆಲ್ ಕಾಣಿಸಿಕೊಂಡಿದ್ದಾರೆ. ಆರ್‌ಎಕ್ಸ್‌ 100 ಖ್ಯಾತಿಯ ಅಜಯ್ ಭೂಪತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಎಕೆ ಎಂಟರ್‌ಟೈನ್‌ಮೆಂಟ್ ಅಡಿ ಅನಿಲ್ ಸುಂಕರ ನಿರ್ಮಾಣ ಮಾಡುತ್ತಿದ್ದಾರೆ.

  ಪೋಲೀಸ್ ಸ್ಟೇಷನ್ ಗೆ ನಟ ಚೇತನ್ ಅಲೆದಾಟ ಇನ್ನು ನಿಂತಿಲ್ಲ! | Filmibeat Kannada
  ತಮಿಳಿನಲ್ಲಿ ರಾಮ್ ಬ್ಯುಸಿ

  ತಮಿಳಿನಲ್ಲಿ ರಾಮ್ ಬ್ಯುಸಿ

  ಕಾರ್ತಿ ಜೊತೆ ನಟಿಸಿದ ಸುಲ್ತಾನ್ ಚಿತ್ರ ಬಿಡುಗಡೆಯಾಗಿದೆ. ಜಯಂ ರವಿ, ವಿಜಯ್ ಆಂಟೋನಿ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗಿನಲ್ಲಿ ಎರಡು ಸಿನಿಮಾ ಓಕೆ ಆಗಿದ್ದು, ಒಂದು 'ಮಹಾಸಮುದ್ರಂ' ಇನ್ನೊಂದು ಅಧಿಕೃತವಾಗಿಲ್ಲ. ಇದರ ಜೊತೆಗೆ ಮೋಹನ್ ಲಾಲ್ ಜೊತೆ ಆರಟ್ಟು ಮಾಡ್ತಿದ್ದಾರೆ.

  English summary
  KGF 'Garuda' fame Ram playing main villain role in Maha Samudram directed by Raj Bhupathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X