ಕಿಯಾರಾ ಟಾಪ್ ಲೆಸ್ ಫೋಟೋ ಶೂಟ್: ಟ್ರೋಲ್ ಆದ ಮಹೇಶ್ ಬಾಬು ನಾಯಕಿ.!
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ನಾಯಕಿಯಾಗಿ 'ಭರತ್ ಅನೇ ನೇನು' ಚಿತ್ರದಲ್ಲಿ ನಟಿಸಿದ ಚೆಲುವೆ ಕಿಯಾರಾ ಅಡ್ವಾಣಿ. 'ಭರತ್ ಅನೇ ನೇನು' ಚಿತ್ರದಲ್ಲಿ ಪಕ್ಕದ ಮನೆ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಕಿಯಾರಾ ಅಡ್ವಾಣಿ ಇದೀಗ ಫೋಟೋ ಶೂಟ್ ಒಂದರಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಪ್ರಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ನಡೆಸಿದ ಕ್ಯಾಲೆಂಡರ್ ಫೋಟೋಶೂಟ್ ನಲ್ಲಿ ಕಿಯಾರಾ ಅಡ್ವಾಣಿ ಟಾಪ್ ಲೆಸ್ ಆಗಿದ್ದಾರೆ. ದೊಡ್ಡ ಎಲೆ ಹಿಂದೆ ನಿಂತು ಕಿಯಾರಾ ಅಡ್ವಾಣಿ ಬೆತ್ತಲಾಗಿದ್ದಾರೆ.
ಕಿಯಾರಾ ಅಡ್ವಾಣಿ ಟಾಪ್ ಲೆಸ್ ಆಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ಶೂಟ್ ನಲ್ಲಿ ಕಿಯಾರಾ ಅಡ್ವಾಣಿ ಏನೋ ಚೆಂದ ಕಾಣಿಸಿದ್ದಾರೆ. ಆದ್ರೆ, ಟಾಪ್ ಲೆಸ್ ಆಗಿರುವ ಕಾರಣಕ್ಕೆ ಕಿಯಾರಾ ಅಡ್ವಾಣಿ ಟ್ರೋಲ್ ಆಗುತ್ತಿದ್ದಾರೆ. ಬೇಕಾದ್ರೆ ನೀವೇ ನೋಡಿ...
ಕಿಯಾರಾಗೆ ಸೀರೆ ತೊಡಿಸಿದ ನೆಟ್ಟಿಗರು.!
ಟಾಪ್ ಲೆಸ್ ಆಗಿದ್ದ ಕಿಯಾರಾ ಅಡ್ವಾಣಿಗೆ ನೆಟ್ಟಿಗರು ಸೀರೆ ತೊಡಿಸಿದ್ದಾರೆ. ಕಿಯಾರಾ ಅಡ್ವಾಣಿ ಸೀರೆ ತೊಟ್ಟರೆ ಚೆನ್ನ ಎಂಬುದು ಕೆಲ ನೆಟ್ಟಿಗರ ಅಭಿಪ್ರಾಯ.
ಸುಂದರ ಚಿತ್ರ ಅಂದ್ರೆ ಇದು.!
ಎಲೆ ಹಿಂದೆ ಬೆತ್ತಲಾಗಿರುವ ಕಿಯಾರಾ ಅಡ್ವಾಣಿಯನ್ನ ನೆಟ್ಟಿಗರು ಮದುಮಗಳಂತೆ ಸಿಂಗರಿಸಿದ್ದಾರೆ. ಕಿಯಾರಾ ಅಡ್ವಾಣಿ ಕೈಯಲ್ಲಿ ಹಿಡಿದಿರುವ ಎಲೆ ಮೇಲೆ ಮದುವೆ ಊಟವನ್ನೂ ಹಾಕಿಸಿಬಿಟ್ಟಿದ್ದಾರೆ ನೆಟ್ಟಿಗರು.!
ದಯವಿಟ್ಟು ಸರಿಯಾದ ಬಟ್ಟೆ ಹಾಕಿ.!
ಡಬೂ ರತ್ನಾನಿ ನಡೆಸಿರುವ ಟಾಪ್ ಲೆಸ್ ಕ್ಯಾಲೆಂಡರ್ ಫೋಟೋ ಶೂಟ್ ಕೆಲ ನೆಟ್ಟಿಗರ ಇಷ್ಟ ಆಗಿಲ್ಲ. ಕಿಯಾರಾ ಅಡ್ವಾಣಿ ಅವರ ಟಾಪ್ ಲೆಸ್ ಫೋಟೋ ನೋಡಿ ''ದಯವಿಟ್ಟು ಸರಿಯಾದ ಬಟ್ಟೆ ಹಾಕಿ'' ಎಂದು ಟ್ವೀಟಿಗರು ಬೇಡಿಕೊಳ್ಳುತ್ತಿದ್ದಾರೆ.

ಡಬೂ ರತ್ನಾನಿಗೆ ಸೀರೆ ಉಡಿಸಿದ ನೆಟ್ಟಿಗರು
ಕೆಲ ನೆಟ್ಟಿಗರು ಇನ್ನೂ ಒಂದು ಸ್ಟೆಪ್ ಮುಂದಕ್ಕೆ ಹೋಗಿ, ಟಾಪ್ ಲೆಸ್ ಫೋಟೋ ಶೂಟ್ ನಡೆಸಿದ ಡಬೂ ರತ್ನಾನಿಗೆ ಸೀರೆ ಉಡಿಸಿದ್ದಾರೆ.! ಒಟ್ನಲ್ಲಿ, ಡಬೂ ರತ್ನಾನಿಯ ಹೊಸ ಕ್ಯಾಲೆಂಡರ್ ಫೋಟೋ ಶೂಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಟಾಪ್ ಲೆಸ್ ಫೋಟೋಶೂಟ್
ಬಾಲಿವುಡ್ ನ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ನಡೆಸಿದ ಲೇಟೆಸ್ಟ್ ಕ್ಯಾಲೆಂಡರ್ ಫೋಟೋಶೂಟ್ ನಲ್ಲಿ ಕಿಯಾರಾ ಅಡ್ವಾಣಿ, ಭೂಮಿ ಪಡ್ನೇಕರ್ ಮತ್ತು ಸನ್ನಿ ಲಿಯೋನ್ ಟಾಪ್ ಲೆಸ್ ಆಗಿ ಪೋಸ್ ಕೊಟ್ಟಿದ್ದರು.


Click it and Unblock the Notifications











