ಅರೇ... ನಿಂತಿಲ್ವಾ ಸಲಾರ್ 02 ? ಶೌರ್ಯಾಂಗ ಪರ್ವದಲ್ಲಿ ಪ್ರಭಾಸ್‌ಗೆ ಇವರಂತೆ ನಾಯಕಿ..!

ಸಲಾರ್ ಮುಂದುವರೆದ ಭಾಗದ ಸುತ್ತ ಮುತ್ತ ಹತ್ತಾರು ಅನುಮಾನಗಳಿವೆ. ಖುದ್ದು ಚಿತ್ರತಂಡದಲ್ಲಿಯೇ ಸಲಾರ್ 02 ಕುರಿತು ಗೊಂದಲಗಳಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ದೇವ ಪಾತ್ರದ ಪೋಷಾಕುಗಳನ್ನ ಕಳಚಿ, ಪ್ರಭಾಸ್.. ರಾಜಾ ಸಾಬ್ ಚಿತ್ರದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ ಅನ್ನುವ ಸುದ್ದಿ ವ್ಯಾಪಕವಾಗಿ ಹಬ್ಬಿದೆ.

ಇನ್ನೂ ರಾಮನ ಬರುವಿಕೆಗಾಗಿ ಶಬರಿ ಕಾದಂತೆ ಜ್ಯೂ.ಎನ್.ಟಿ.ಆರ್‌ಗೋಸ್ಕರ ಪ್ರಶಾಂತ್ ನೀಲ್ ಕಾಯ್ತಾನೇ ಇದ್ದಾರೆ. ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಅವರನ್ನ ಕೂಡ ಭೇಟಿಯಾಗಿ ಬಂದಿದ್ದಾರೆ. ಈ ಕಡೆ ಹೊಂಬಾಳೆ ಸಂಸ್ಥೆ ಕಾಂತಾರದ ಪ್ರಿಕ್ವೆಲ್‌ಗಾಗಿ ತಲೆ ಕೆಡಿಸಿಕೊಂಡಿದೆ. ಇದೆಲ್ಲದರ ನಡುವೆ.. ಕಿಯಾರಾ ಅಡ್ವಾಣಿ, ಸಲಾರ್ 2 ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಅನ್ನುವ ಸುದ್ದಿ ಮುಂಬೈನಿಂದ ಆಂಧ್ರವರೆಗೆ ಕೇಳಿ ಬರುತ್ತಿದೆ.

kiara-advani-set-to-collaborate-with-prabhas-in-salaar-2

ಅಂತೆ-ಕಂತೆಯ ಸಂತೆಯಲ್ಲಿ ಹಬ್ಬಿಸಲಾದ ಈ ಸುದ್ದಿಯ ಪ್ರಕಾರ, ಕಿಯಾರಾ ಅಡ್ವಾಣಿ ಸಲಾರ್ 02 ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಒಂದು ವೇಳೆ ಇದು ನಿಜವಾದಲ್ಲಿ.. ಶ್ರುತಿ ಹಾಸನ್ ಕಥೆ ಅಷ್ಟೇನಾ ಅನ್ನುವ ಪ್ರಶ್ನೆ ಎದ್ದೇಳುತ್ತೆ. ಈ ಕಾರಣಕ್ಕೆ .. ಸಲಾರ್ 2ದಲ್ಲಿ ಕಿಯಾರಾ ನಾಯಕಿ ಪಾತ್ರವನ್ನಲ್ಲ ಕೇವಲ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ, ಕೆ.ಜಿ.ಎಫ್‌ನಲ್ಲಿ ತಮನ್ನಾ ಸೊಂಟ ಬಳುಕಿಸಿದಂತೆ, ಸಲಾರ್ ನಲ್ಲಿ ಕಿಯಾರಾ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯನ್ನೂ ಮತ್ತೊಂದು ಬದಿಯಿಂದ ತೇಲಿ ಬಿಡಲಾಗಿದೆ.

ಅಂದ್ಹಾಗೇ ಕಿಯಾರಾ ಕೈ ಸದ್ಯಕ್ಕೆ ಖಾಲಿ ಇಲ್ಲ. ತೆಲುಗಿನ ಗೇಮ್ ಚೇಂಜರ್ ಚಿತ್ರದಲ್ಲಿ ಕಿಯಾರಾ ಆಕ್ಟ್ ಮಾಡ್ತಿದ್ದಾರೆ. ವಾರ್ 02 ಚಿತ್ರಕ್ಕೂ ಇವರೇ ನಾಯಕಿ. ಇಷ್ಟೇ ಅಲ್ಲ.. ರಣ್ವೀರ್ ಸಿಂಗ್ ಅಭಿನಯದ ಡಾನ್ 03ಯಲ್ಲಿ ಕೂಡ ಕಿಯಾರಾ ಹೀರೋಯಿನ್. ಹೀಗಾಗಿಯೇ ಪುರುಸೊತ್ತಿಲ್ಲದ ಕಿಯಾರಾ, ಸಲಾರ್ ಚಿತ್ರಕ್ಕೆ ನಾಯಕಿಯಾಗುವುದೆಲ್ಲ ಸುಳ್ಳು ಅನ್ನುವ ಮಾತು ಕೂಡ ಇದೇ ಸಮಯದಲ್ಲಿ ಮಾಯಾನಗರಿಯಲ್ಲಿ ಕೇಳಿ ಬರುತ್ತಿದೆ.

kiara-advani-set-to-collaborate-with-prabhas-in-salaar-2

ಯಾವುದು ನಿಜಾ.. ಯಾವುದು ಸುಳ್ಳು.. ಉತ್ತರ ಕಾಲವೇ ನೀಡಲಿದೆಯಾದರೂ, ಸಲಾರ್ 02ದಲ್ಲಿ ಕಿಯಾರಾ ಇರಲಿದ್ದಾರೆ ಎನ್ನುವ ಸುದ್ದಿಯನ್ನ ಕೇಳಿ, ಕಿಯಾರಾ ಅಭಿಮಾನಿ ಬಣ ಸದ್ಯಕ್ಕೆ ಖುಷಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮವನ್ನೂ ಪಡುತ್ತಿದೆ. ಉಳಿದಂತೆ.. ಸಿಕ್ಕಾಪಟ್ಟೆ ನಿರೀಕ್ಷೆಯನ್ನ ಹುಟ್ಟು ಹಾಕಿ ತೆರೆಗೆ ಬಂದಿದ್ದ ಸಲಾರ್ ಮೊದಲ ಭಾಗದ ಸಾಧನೆ ನಿಮಗೆಲ್ಲ ಗೊತ್ತಿರುವಂತಹದ್ದೇ.

ಒಟ್ನಲ್ಲಿ ಸದ್ಯಕ್ಕೆ ಸಲಾರ್ 2 ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಇದ್ದಾರೆ ಅನ್ನುವ ಸುದ್ದಿ ಚಾಲ್ತಿಯಲ್ಲಿದೆ. ಪ್ರಶಾಂತ್ ನೀಲ್ ಅಥವಾ ಹೊಂಬಾಳೆ ಸಂಸ್ಥೆ ಕಿಯಾರಾ ಬಗ್ಗೆ ಮತ್ತು ಸಲಾರ್ 2 ಚಿತ್ರದ ಚಿತ್ರೀಕರಣದ ವಿಚಾರದಲ್ಲಿರುವ ಗೊಂದಲದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನ ನೀಡುವ ನಿರೀಕ್ಷೆ ಸಿನಿಪ್ರಿಯರಲ್ಲಿದೆ. ಸದ್ಯದಲ್ಲಿಯೇ ಸಲಾರ್ 2 ಬಗ್ಗೆ ಅಧಿಕೃತವಾಗಿ ಯಾವುದಾದರೂ ಸುದ್ದಿ ಹೊರಬರುತ್ತಾ ಅನ್ನುವುದನ್ನ ಕಾದು ನೋಡಬೇಕಿದೆ.

More from Filmibeat

English summary
Kiara Advani, amidst her packed schedule with upcoming projects like S. Shankar's directorial and a spy-action drama under the YRF banner, is reportedly set to star in another major production. Sources suggest she's secured a role in the highly anticipated sequel, "Salaar Part 2: Shouryaanga Parvam," following the success of "Salaar: The Ceasefire" released last December.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X