2ನೇ ಬಾರಿ ಮಹೇಶ್ ಬಾಬು ಜೊತೆ ರೊಮ್ಯಾನ್ಸ್ ಮಾಡ್ತಾರಾ ಬಾಲಿವುಡ್ ನ ಈ ಸ್ಟಾರ್ ನಟಿ?

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸರಿಲೇರು ನೀಕೆವ್ವರು ಸಿನಿಮಾದ ನಂತರ ಯಾವ ಸಿನಿಮಾವನ್ನು ಅನೌನ್ಸ್ ಮಾಡಿರಲ್ಲಿ. ಮಹೇಶ್ ಬಾಬು ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತಾಹಲ ಹೆಚ್ಚಾಗಿತ್ತು. ಆದರೆ ಅಪ್ಪನ ಹುಟ್ಟುಹಬ್ಬದ ದಿನ ಪ್ರಿನ್ಸ್ ಮಹೇಶ್ ಹೊಸ ಸಿನಿಮಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

Recommended Video

ಟ್ವಿಟ್ಟರ್ ನಲ್ಲಿ ದರ್ಶನ್ ಪತ್ನಿ ಬೇಸರ ಹೊರಹಾಕಿದ್ದು ಯಾಕೆ?? | Vijay Lakshmi | Sumalatha Ambareesh

ಮಹೇಶ್ ಬಾಬು ಹೊಸ ಚಿತ್ರಕ್ಕೆ 'ಸರ್ಕಾರ ವಾರಿ ಪಾಠ' ಎಂದು ಟೈಟಲ್ ಇಡಲಾಗಿದೆ. ವಿಭಿನ್ನವಾಗಿರುವ ಟೈಟಲ್ ಮತ್ತು ಗಮನ ಸೆಳೆಯುತ್ತಿರುವ ಫಸ್ಟ್ ಲುಕ್ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಮಹೇಶ್ ಬಾಬುಗೆ ನಾಯಕಿಯಾರಾಗಲಿದ್ದಾರೆ ಎನ್ನುವ ಪ್ರಶ್ನೆ ಸಹ ಅಭಿಮಾನಿಗಳನ್ನು ಕಾಡುತ್ತಿದೆ. ಮೂಲಗಳ ಪ್ರಕಾರ ಮಹೇಶ್ ಬಾಬು ಜೊತೆ ಬಾಲಿವುಡ್ ಸ್ಟಾರ್ ನಟಿ ಕಿಯಾರಾ ಅಡ್ವಾನಿ ಕಾಣಿಸಿಕೊಳ್ಳಲಿದ್ದಾರಂತೆ. ಮುಂದೆ ಓದಿ..

ಮಹೇಶ್ ಬಾಬು ಜೊತೆ ರೊಮ್ಯಾನ್ಸ್ ಮಾಡುತ್ತಾರಾ ಕಿಯಾರಾ

ಮಹೇಶ್ ಬಾಬು ಜೊತೆ ರೊಮ್ಯಾನ್ಸ್ ಮಾಡುತ್ತಾರಾ ಕಿಯಾರಾ

ಬಾಲಿವುಡ್ ನ ಸ್ಟಾರ್ ನಟಿ ಕಿಯಾರಾ ಅಡ್ವಾನಿ ಮತ್ತೆ ಟಾಲಿವುಡ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಮಹೇಶ್ ಬಾಬು ಹೊಸ ಸಿನಿಮಾ ಸರ್ಕಾರ ವಾರಿ ಪಾಠ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲ ಹರಿದಾಡುತ್ತಿದೆ.

2ನೇ ಬಾರಿ ಮಹೇಶ್ ಬಾಬು ಜೊತೆ ಕಿಯಾರಾ ಅಭಿನಯ

2ನೇ ಬಾರಿ ಮಹೇಶ್ ಬಾಬು ಜೊತೆ ಕಿಯಾರಾ ಅಭಿನಯ

ಕಿಯಾರಾ ಅಡ್ವಾನಿ ಈಗಾಗಲೆ ಮಹೇಶ್ ಬಾಬು ಜೊತೆ ಭರತ್ ಅನೆ ನೇನು ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಆಗಿತ್ತು. ಈ ಹಿಟ್ ಜೋಡಿಯನ್ನು ಎರಡನೆ ಬಾರಿ ತೆರೆಮೇಲೆ ತರುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ. ತೆಲುಗಿನಲ್ಲಿ ಭರತ್ ಅನೆ ನೇನು ಮತ್ತು ವಿನಯ ವಿದೆಯ ರಾಮ ಎರಡು ಸಿನಿಮಾಗಳಲ್ಲಿ ಕಿಯಾರಾ ನಟಿಸಿದ್ದಾರೆ. ಈಗ 3ನೇ ಬಾರಿ ತೆಲುಗಿಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಿಯಾರಾ ಬಳಿ ಇರುವ ಸಿನಿಮಾಗಳು

ಕಿಯಾರಾ ಬಳಿ ಇರುವ ಸಿನಿಮಾಗಳು

ಕಿಯಾರಾ ಅಡ್ವಾನಿ ಸದ್ಯ ಬಾಲಿವುಡ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಕಿಯಾರಾ ಬೇಡಿಕೆಯ ನಟಿಯಾಗಿದ್ದಾರೆ. ಕೊನೆಯದಾಗಿ ಕಿಯಾರಾ ಅಂಗ್ರೇಜಿ ಮೀಡಿಯಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಕಿಯಾರಾ ಬಳಿ ಲಕ್ಷ್ಮೀ ಬಾಂಬ್, ಇಂದೂ ಕಿ ಜವಾನಿ, ಶೆರ್ಶಾ, ಭೂಲ್ ಬುಲೈಯಾ-2 ಸಿನಿಮಾ ಸೇರಿದಂತೆ ವೆಬ್ ಸಿರೀಸ್ ನಲ್ಲಿಯೂ ಬ್ಯುಸಿಯಾಗಿದ್ದಾರೆ.

ಶ್ರದ್ಧಾ ಕಪೂರ್ ಹೆಸರು ಕೇಳಿ ಬರುತ್ತಿದೆ

ಶ್ರದ್ಧಾ ಕಪೂರ್ ಹೆಸರು ಕೇಳಿ ಬರುತ್ತಿದೆ

ಕಿಯಾರಾ ಹೆಸರಿನ ಜೊತೆಗೆ ಬಾಲಿವುಡ್ ನ ಮತ್ತೋರ್ವ ನಾಯಕಿ ಶ್ರದ್ಧಾ ಕಪೂರ್ ಹೆಸರು ಸಹ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಶ್ರದ್ಧಾ ಅಥವಾ ಕಿಯಾರಾ ಇಬ್ಬರಲ್ಲಿ ಒಬ್ಬರು ಮಹೇಶ್ ಬಾಬು ಜೊತೆ ನಾಯಕಿಯಾಗಿ ಬಣ್ಣಹಚ್ಚುವ ಸಾಧ್ಯತೆ ಹೆಚ್ಚಿದೆ. ಈಗಾಗಲೆ ಶ್ರದ್ಧಾ ಪ್ರಭಾಸ್ ಜೊತೆ ಸಾಹೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮಹೇಶ್ ಬಾಬುಗೆ ನಾಯಕಿಯಾದರೆ 2ನೇ ಬಾರಿ ತೆಲುಗು ಪ್ರೇಕ್ಷಕರ ಮುಂದೆ ಬರಲಿದ್ದಾರೆ.

More from Filmibeat

English summary
Bollywood Actress Kiara Advani team up with Mahesh Babu's sarkar Vaari paata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X