For Quick Alerts
  ALLOW NOTIFICATIONS  
  For Daily Alerts

  ಜನಸೇನಾ ನಾಯಕ ಪವನ್ ಕಲ್ಯಾಣ್ ಭೇಟಿ ಮಾಡಿದ ಕಿಚ್ಚ ಸುದೀಪ್

  |

  ತೆಲುಗು ಪವರ್ ಸ್ಟಾರ್, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರನ್ನು ಕನ್ನಡ ನಟ ಕಿಚ್ಚ ಸುದೀಪ್ ಸೋಮವಾರ ಭೇಟಿ ಮಾಡಿದ್ದಾರೆ.

  ಹೈದರಾಬಾದ್‌ನ ಜನಸೇನಾ ಪಕ್ಷದ ಕಚೇರಿಯಲ್ಲಿ ಪವನ್ ಕಲ್ಯಾಣ್‌ರನ್ನು ಭೇಟಿ ಮಾಡಿದ ಸುದೀಪ್, ಯೋಗಕ್ಷೇಮ ವಿಚಾರಿಸಿದ್ದಾರೆ. ಈ ಬಗ್ಗೆ ಸುದೀಪ್ ಟ್ವಿಟ್ಟರ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಕಿಚ್ಚ ಸುದೀಪ್ ಗೆ ಕನ್ನಡದಲ್ಲಿ ಶುಭ ಕೋರಿದ ತೆಲುಗು ನಟ ಪವನ್ ಕಲ್ಯಾಣ್ಕಿಚ್ಚ ಸುದೀಪ್ ಗೆ ಕನ್ನಡದಲ್ಲಿ ಶುಭ ಕೋರಿದ ತೆಲುಗು ನಟ ಪವನ್ ಕಲ್ಯಾಣ್

  ಇದು ಸಹಜ ಭೇಟಿಯಾಗಿದ್ದು, ಈ ವೇಳೆ ಮುಂದಿನ ಸಿನಿಮಾಗಳು ಮತ್ತು ಸದ್ಯದ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. 'ಫ್ಯಾಂಟಮ್' ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿರುವ ಸುದೀಪ್ ಬಿಡುವು ಮಾಡಿಕೊಂಡು ಪವನ್ ಕಲ್ಯಾಣ್‌ರನ್ನು ಭೇಟಿ ಮಾಡಿದ್ದಾರೆ.

  ಇಬ್ಬರು ಸೂಪರ್ ಸ್ಟಾರ್‌ಗಳು ಭೇಟಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭೇಟಿಯ ಬಗ್ಗೆ ಹಲವು ಚರ್ಚೆಗಳು ಆರಂಭವಾಗಿದೆ.

  ಗಂಡಸ್ತನ ಇದ್ರೆ ಸಾಬೀತು ಮಾಡಿ ತೋರ್ಸಿ ಅವಾಗ ಒಪ್ಕೋತೀನಿ | Kumarswamy | Filmibeat Kannada

  ರಾಜಕೀಯದಲ್ಲಿ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಮತ್ತೆ ಚಿತ್ರಗಳನ್ನು ಮಾಡಲು ನಿರ್ಧರಿಸಿದ್ದಾರೆ. ಸದ್ಯ ಬೋನಿ ಕಪೂರ್ ನಿರ್ಮಾಣದ 'ವಕೀಲ್ ಸಾಬ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಾದ ಬಳಿಕ ಮತ್ತಷ್ಟು ಚಿತ್ರಗಳಿಗೆ ಕಾಲ್‌ಶೀಟ್ ನೀಡಿದ್ದಾರೆ.

  English summary
  Kannada Superstar Kiccha Sudeep meets Jana Sena Chief Pawan Kalyan at his office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X