ಸುದೀಪ್ ಹುಟ್ಟುಹಬ್ಬಕ್ಕೆ ರಾಜಮೌಳಿ 'ತೂಕದ ಮಾತು'
ಹಾಗೇ, ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಸುದೀಪ್, ಸದ್ಯಕ್ಕೆ ತಮ್ಮಿಬ್ಬರಲ್ಲಿ ಜೊತೆಯಾಗಿ ಚಿತ್ರ ಮಾಡುವ ಯಾವುದೇ ಮಾತುಕತೆಯಾಗಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ, ಸುದೀಪ್, ಸಮಂತಾ ಹಾಗೂ ನಾಣಿ ತಾರಾಗಣದ ತೆಲುಗು ಬಹುಭಾಷಾ ಚಿತ್ರ 'ಈಗ', ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲೊಂದಾಗಿದೆ. ಸುದೀಪ್, ರಾಜಮೌಳಿ ಜೋಡಿಯ ಖ್ಯಾತಿ ಇಡೀ ಸೌತ್ ಇಂಡಿಯಾ ಚಿತ್ರರಂಗವನ್ನು ಮೀರಿ ವ್ಯಾಪಿಸಿದೆ.
'ಈಗ' ಚಿತ್ರದ ನಂತರ ಕಿಚ್ಚ ಸುದೀಪ್ ಅವರಿಗೆ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಿಂದ ಬಹಳಷ್ಟು ಆಫರ್ ಗಳು ಬರುತ್ತಿವೆ. ಆದರೆ ಸದ್ಯಕ್ಕೆ ಸುದೀಪ್ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ತಮಿಳು ನಟ ವಿಜಯ್ ನಾಯಕತ್ವದ 'ಯೋಹಾನ್' ಚಿತ್ರ ಸೆಟ್ಟೇರುತ್ತಿದ್ದು ಅದರಲ್ಲಿ ಸುದೀಪ್ ವಿಲನ್ ರೋಲ್ ಮಾಡಲಿದ್ದಾರೆ ಎಂದು ಇತ್ತೀಚಿಗೆ ಸುದ್ದಿಯಾಗಿತ್ತು. ಆದರೆ ಅದು ಸುಳ್ಳು ಸುದ್ದಿ ಎಂದು ಸ್ವತಃ ಸುದೀಪ್ ಹೇಳಿದ್ದಾರೆ.
ತೆಲುಗು ಈಗ ಚಿತ್ರದ ನಂತರ ಸುದೀಪ್ ಕನ್ನಡ ಚಿತ್ರಗಳಲ್ಲೇ ಬಿಜಿಯಾಗಿದ್ದಾರೆ. ಇತ್ತೀಚಿಗಷ್ಟೇ 'ವರದನಾಯಕ' ಚಿತ್ರವನ್ನು ಮುಗಿಸಿರುವ ಸುದೀಪ್, ಸದ್ಯಕ್ಕೆ ಶಶಾಂಕ್ ನಿರ್ದೇಶನದ 'ಬಚ್ಚನ್' ಚಿತ್ರದ ಅಂತಿಮ ಹಂತದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಬಚ್ಚನ್' ನಂತರ, ನಿನ್ನೆ ಹುಟ್ಟುಹಬ್ಬದಂದು ಘೋಷಣೆಯಾಗಿರುವ ಎನ್ಎಮ್ ಕುಮಾರ್ ನಿರ್ಮಾಣದ ಹೊಸ ಚಿತ್ರ 'ಚಕ್ರವ್ಯೂಹ' ದಲ್ಲಿ ಸುದೀಪ್ ನಟಿಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












