ಸುದೀಪ್ ನಟನೆ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಸ್ಕೆಚ್!
ಇತ್ತೀಚಿಗೆ 'ಪ್ರೇಮ್ ಅಡ್ಡ' ಧ್ವನಿಸುರುಳಿ ಬಿಡುಗಡೆಗೆ ಕಿಚ್ಚ ಸುದೀಪ್ ಬಂದಿದ್ದರು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಸುದೀಪ್ ಹೊಸ ಸೌತ್ ಇಂಡಿಯಾ ಸ್ಟಾರ್ ಎಂಬುದು ಎಲ್ಲರಿಗೂ ಗೊತ್ತು. ಹೀಗಿರುವಾಗ ಅವರು ಎಲ್ಲೇ ಹೋಗಲಿ, ಬರಲಿ... ಏನೋ ವಿಶೇಷ ನಡೆಯಲಿದೆ ಎಂಬ ಸೂಚನೆ ಗಾಂಧಿನಗರಕ್ಕೆ ಸಿಕ್ಕಿಯೇಬಿಡುತ್ತದೆ. ಈಗಲೂ ಆ ಸೂಚನೆ ಸಿಕ್ಕಿತ್ತು, ಅದೀಗ ನಿಜವಾಗಿದೆ.
ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ನಟಿಸುವ ವಿಷಯವನ್ನು ಸ್ವತಃ ಪ್ರೇಮ್ ಸ್ಪಷ್ಟಪಡಿಸಿದ್ದಾರೆ. "ಸದ್ಯಕ್ಕೆ ಕಥೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಕಥೆ ಓಕೆಯಾದರೆ ಮುಂದಿನ ವರ್ಷ ಚಿತ್ರ ಸೆಟ್ಟೆರುವುದು ಗ್ಯಾರಂಟಿ. ಕಳೆದ ಒಂಬತ್ತು ವರ್ಷಗಳಿಂದ ಸುದೀಪ್ ಜೊತೆ ಕೆಲಸ ಮಾಡಲು ಪ್ರಯತ್ನ ಪಡುತ್ತಿದ್ದೇನೆ. ಆದರೆ ಸಾಧ್ಯವಾಗಿಲ್ಲ. ಕೊನೇಪಕ್ಷ ನಾಯಕರಾಗಿ ಸಾಧ್ಯವಾಗದಿದ್ದರೆ ಗೆಸ್ಟ್ ರೋಲ್ ಆದರೂ ಓಕೆ ಅಂದಿದ್ದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ, ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಲಿದ್ದೇವೆ" ಎಂದಿದ್ದಾರೆ.
ಪ್ರೇಮ್ ನಿರ್ದೇಶನ ಹಾಗೂ ಸುದೀಪ್ ನಟನೆ ಚಿತ್ರವು ಕನ್ನಡ ಮಾತ್ರವಲ್ಲದೇ ತಮಿಳು ಹಾಗೂ ತೆಲುಗಿನಲ್ಲಿಯೂ ಬರಲಿದೆ. ಸುದೀಪ್ ಸದ್ಯದ ಮಾರುಕಟ್ಟೆ ಸೌತ್ ಇಂಡಿಯಾ ತುಂಬ ವ್ಯಾಪಿಸಿರುವುದರಿಂದ ಪ್ರೇಮ್ ಈ ನಿರ್ಧಾರ ಮಾಡಿದ್ದಾರೆ. ಅದು ಸರಿಯಾದದ್ದೇ ಎಂಬುದು ಎಲ್ಲರ ಅನಿಸಿಕೆ ಕೂಡ. ಸದ್ಯದಲ್ಲಿ ಈ ಇಬ್ಬರೂ ಬಿಜಿಯಾಗಿರುವುದರಿಂದ ಇವರಿಬ್ಬರ ಸಂಗಮದಲ್ಲಿ ಮುಂದಿನ ವರ್ಷ ಚಿತ್ರ ಮೂಡಿಬರಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












