For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಚಿತ್ರಗಳ ಭರ್ಜರಿ ಡಬ್ಬಿಂಗ್ ವ್ಯವಹಾರ ಶುರು

  |

  ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಎಲ್ಲಾ ಕಡೆಗಳಲ್ಲಿ ಭರ್ಜರಿ ಓಪನಿಂಗ್ ಮತ್ತು ಪ್ರಶಂಸೆ ಪಡೆಯುತ್ತಿದೆ ಕಿಚ್ಚ ಸುದೀಪ್ ನಟನೆಯ 'ಈಗ' ತೆಲುಗು ಚಿತ್ರ. ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿರುವ ಸುದೀಪ್ ಅಭಿನಯ ಎಲ್ಲರಿಂದ ಮುಕ್ತವಾಗಿ ಪ್ರಶಂಸೆಗೆ ಒಳಗಾಗಿದೆ.

  ಈ ಚಿತ್ರದ ತೆಲುಗು ಆವೃತ್ತಿ ಕರ್ನಾಕ ರಾಜ್ಯಾದ್ಯಂತ, ಮುಖ್ಯವಾಗಿ ಬೆಂಗಳೂರು, ತುಮಕೂರು, ಕೋಲಾರ ಹಾಗೂ ಬಳ್ಳಾರಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಎಲ್ಲಾ ಥಿಯೇಟರುಗಳು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದು ಎಲ್ಲೆಡೆ 'ಹೌಸ್ ಫುಲ್' ಬೋರ್ಡ್ ಪ್ರತಿ ಪ್ರದರ್ಶನಕ್ಕೆ ಕಡ್ಡಾಯ ಎಂಬಂತಾಗಿದೆ. ತಮಿಳಿನಲ್ಲಿ ಈ ಚಿತ್ರಕ್ಕೆ 'ನಾನ್ ಈ' ಎಂದು ಹೆಸರಿಡಲಾಗಿದೆ.

  ಈ ಚಿತ್ರವು ಈಗಾಗಲೇ ಭರ್ಜರಿ ಓಪನಿಂಗ್ ಪಡೆದಿರುವುದರಿಂದ ಹಾಗೂ ಸುದೀಪ್ ಈ ಚಿತ್ರದ ಮೂಲಕ ರಾಷ್ಟ್ರೀಯ ಮಟ್ಟವನ್ನೂ ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದರಿಂದ ಈಗ ಸುದೀಪ್ ಹೆಸರಿಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಅವರ ಕಾಲ್ ಶೀಟ್ ಪಡೆಯಲು ನಿರ್ಮಾಪಕರ ಮಧ್ಯೆ ಶೀತಲ ಸಮರ ಈಗಾಗಲೇ ಪ್ರಾರಂಭ ಎನ್ನಲಾಗಿದೆ.

  ಇಷ್ಟೇ ಅಲ್ಲ, ಸುದೀಪ್ ತೆಲುಗು ಖ್ಯಾತ ನಿರ್ದೇಶಕ ರಾಜಮೌಳಿಯವರ ಚಿತ್ರಕ್ಕೆ ಆಯ್ಕೆಯಾಗುತ್ತಿದ್ದಂತೆ ಭವಿಷ್ಯವನ್ನು ತಿಳಿದುಕೊಂಡವರಂತೆ ಕೆಲ ನಿರ್ಮಾಪಕರು ಸುದೀಪ್ ನಟನೆ ಹಾಗೂ ನಿರ್ದೇಶನದ ಬಹಳಷ್ಟು ಕನ್ನಡ ಚಿತ್ರಗಳನ್ನು ಅದಾಗಲೇ ನೆರೆಭಾಷೆಗಳಾದ ತಮಿಳು ಮತ್ತು ತೆಲುಗಿಗೆ ಡಬ್ ಮಾಡಲು ತೊಡಗಿದ್ದಾರೆ. ಆ ವ್ಯವಹಾರವೀಗ ಭಾರೀ ಜೋರಾಗಿದೆ ಎಂಬ ಸುದ್ದಿ ಬಂದಿದೆ.

  ಸುದೀಪ್ ನಟನೆ ಹಾಗೂ ಪಿ ಎನ್ ಸತ್ಯಾ ನಿರ್ದೇಶನದ 'ಗೂಳಿ' ಚಿತ್ರ ತಮಿಳಿಗೆ ಕೊರುಕ್ಕು ಪೆಟ್ಟೈ ಕೂಲಿ' ಹೆಸರಿನಿಂದ ಈಗಾಗಲೇ ಡಬ್ ಆಗಿದೆ. ಸದ್ಯದಲ್ಲೇ ಬಿಡುಗಡೆಯೂ ಆಗಲಿದೆ. ಇದರ ಬೆನ್ನಲ್ಲೇ, ಸುದೀಪ್ ನಟನೆಯ ಮತ್ತೊಂದು ಚಿತ್ರ 'ಜಸ್ಟ್ ಮಾತ್ ಮಾತಲ್ಲಿ' ಕೂಡ ಡಬ್ ಆಗುವ ಹಾದಿಯಲ್ಲಿದೆ. ಆದರು ಅದು ತಮಿಳಿಗಲ್ಲ, ತೆಲುಗಿಗೆ.

  ಹೌದು, ಕನ್ನಡ ನಟ ಸುದೀಪ್ ಅವರಿಗೀಗ ಬಿಡುಗಡೆಯಾಗಿರುವ ರಾಜಮೌಳಿಯ ಈಗ ಚಿತ್ರದ ಮೂಲಕ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಸುದೀಪ್ ಹಳೆಉ ಚಿತ್ರಗಳೀಗೂ ಈಗ ಎಲ್ಲಿಲ್ಲದ ಬೇಡಿಕೆ. ಆದರೆ ಸುದೀಪ್ ಹೊಸದಾಗಿ ತೆಲುಗು ಅಥವಾ ತಮಿಳು ಚಿತ್ರವನ್ನು ಒಪ್ಪಿಕೊಂಡ ಸುದ್ದಿಯಿಲ್ಲ. ಈಗಾಗಲೇ ಚಿತ್ರೀಕರಣ ಹಂತದಲ್ಲಿರುವ ಶಶಾಂಕ್ ನಿರ್ದೇಶನದ ಕನ್ನಡ ಚಿತ್ರ 'ಬಚ್ಚನ್'ದಲ್ಲಿ ಸುದೀಪ್ ಬಿಜಿಯಾಗಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Kannada Actor Kichcha Sudeep's Telugu Movie Eega received Massive Response in all released centers. Kichcha Sudeep acting got a lot of appreciation and Sudeep is on the way to become South India Super Star now. Telugu famous director S S Rajamouli directed this. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X