Bigg Boss 9: ತೆಲುಗು ಬಿಗ್‌ಬಾಸ್ ಮನೆಗೆ ಸುದೀಪ್ ಸರ್‌ಪ್ರೈಸ್ ಎಂಟ್ರಿ; ಕನ್ನಡದಲ್ಲೇ ಮಾತು ಆರಂಭಿಸಿದ ಕಿಚ್ಚ
ಹಿಂದಿಯಲ್ಲಿ ಸೂಪರ್ ಸಕ್ಸಸ್ ಕಂಡಿದ್ದ ಬಿಗ್‌ಬಾಸ್ ಶೋ ಬಳಿಕ ಪ್ರಾದೇಶಿಕ ಭಾಷೆಗಳಲ್ಲಿ ಶುರುವಾಗಿತ್ತು. ಮೊದಲಿಗೆ ಕನ್ನಡದಲ್ಲಿ ಶುರುವಾಗಿ ಸಕ್ಸಸ್ ಕಂಡಿತ್ತು. ಸುದೀಪ್ ನೇತೃತ್ವದಲ್ಲಿ 12ನೇ ಸೀಸನ್ ನಡೀತಿದೆ. ತೆಲುಗು, ತಮಿಳು, ಮಲಯಾಳಂ, ಮರಾಠಿ ಭಾಷೆಗಳಲ್ಲಿ ಕೂಡ ಶೋ ವೀಕ್ಷಕರನ್ನು ರಂಜಿಸುತ್ತಿದೆ. ಇದೀಗ ತೆಲುಗು ಬಿಗ್‌ಬಾಸ್ ಶೋನಲ್ಲಿ ಕಿಚ್ಚನ ದರ್ಶನವಾಗಿದೆ.
ತೆಲುಗು ಬಿಗ್‌ಬಾಸ್ ವೀಕ್ಷಕರಿಗೆ ಈ ವೀಕೆಂಡ್ ಭರ್ಜರಿ ಸರ್‌ಪ್ರೈಸ್ ಕಾದಿತ್ತು. ದಕ್ಷಿಣದ ಮೂರು ಬಿಗ್‌ಬಾಸ್ ಶೋಗಳ ನಿರೂಪಕರು ನಾಗಾರ್ಜುನ ಹಾಗೂ ಸ್ಪರ್ಧಿಗಳ ಜೊತೆ ಮಾತನಾಡಿ ಗಮನ ಸೆಳೆದಿದ್ದಾರೆ. ತೆಲುಗು ಬಿಗ್‌ಬಾಸ್-9 ಶೋ 37ನೇ ದಿನಕ್ಕೆ ಕಾಲಿಟ್ಟಿದೆ. ಅಚ್ಚರಿ ಎಂದರೆ 6 ಮಂದಿ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶಿಸಿದ್ದಾರೆ.

ಈ ವೈಲ್ಡ್ ಕಾರ್ಟ್ ಎಂಟ್ರಿ ಎಪಿಸೋಡ್‌ನಲ್ಲಿ ಕನ್ನಡ ಬಿಗ್‌ಬಾಸ್ ನಿರೂಪಕ ಸುದೀಪ್, ಮಲಯಾಳಂ ಬಿಗ್‌ಬಾಸ್ ನಿರೂಪಕ ಮೋಹನ್ ಲಾಲ್ ಹಾಗೂ ತಮಿಳು ಬಿಗ್‌ಬಾಸ್ ನಿರೂಪಕ ವಿಜಯ್ ಸೇತುಪತಿ ಸ್ಪರ್ಧಿಗಳ ಜೊತೆ ಟಿವಿ ಪರದೆ ಮೂಲು ಮಾತನಾಡಿದ್ದಾರೆ. ದೊಡ್ಮನೆಗೆ ಸ್ವಾಗತ ಕೋರಿದರು. ಸುದೀಪ್ ಕನ್ನಡದಲ್ಲೇ ಮಾತು ಆರಂಭಿದರು.
"ನಮಸ್ತೆ ನಾಗಾರ್ಜುನ್ ಸರ್. ಇದು ಕನ್ನಡ ಬಿಗ್‌ಬಾಸ್ ವೇದಿಕೆಯಿಂದ ಮಾಡುತ್ತಿರುವ ನನ್ನ ನಮಸ್ತೆ. ನಮ್ಮ ಕರ್ನಾಟಕದ ಸ್ಟೇಜ್‌ನಿಂದ ನಿಮ್ಮ ಬಳಿ ಮಾತನಾಡುತ್ತಿರುವುದು ಬಹಳ ಖುಷಿಯಾಗುತ್ತಿದೆ ನಾಗ್ ಸರ್" ಎಂದಿದ್ದಾರೆ. ಬಳಿಕ ಇಂಗ್ಲೀಷ್‌ನಲ್ಲಿ ಮಾತನಾಡಿ "ನೀವು ನೋಡಲು ಬಹಳ ಡ್ಯಾಶಿಂಗ್ ಆಗಿ ಕಾಣ್ತಿದ್ದೀರಾ ಸರ್. ತೆಲುಗು ಬಿಗ್‌ಬಾಸ್ ಶೋ ಚೆನ್ನಾಗಿ ಬರ್ತಿದೆ ಎಂದು ಗೊತ್ತಾಯ್ತು. ಮತ್ತಷ್ಟು ಒಳ್ಳೆ ನಂಬರ್ಸ್ ಬರಲಿ. 'ಫೈರ್ ಸ್ಟ್ರೋಮ್' ಕಾನ್ಸೆಪ್ಟ್ ಶುರು ಮಾಡುತ್ತಿದ್ದೀರಾ, ಅದಕ್ಕೆ ಒಳ್ಳೆಯದಾಗಲಿ" ಎಂದು ಸುದೀಪ್ ಹೇಳಿದ್ದಾರೆ.
ಇನ್ನು ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಮಾಧುರಿ ಎಂಬುವವರು ತೆಲುಗು ಬಿಗ್‌ಬಾಸ್ ಮನೆಗೆ ಹೋಗಿದ್ದಾರೆ. ಆಕೆ ಜೊತೆ ಸುದೀಪ್ ಮಾತನಾಡಿ "ಮಾಧುರಿ ನೀವು ಬಿಗ್‌ಬಾಸ್ ಮನೆಗೆ ಹೋಗ್ತಿದ್ದೀರಾ ಅಂತ ಗೊತ್ತಾಯ್ತು. ನಿಮಗೆ ಶುಭವಾಗಲಿ. ನೀವು ಮನೆಯೊಳಗೆ ಹೋಗುವ ಮುನ್ನ ನಿಮಗೆ ಗೋಲ್ಡ್ ಬಝರ್ ಪವರ್ ಕೊಡ್ತಿದ್ದೀನಿ. ಅದನ್ನು ನಾಗ್ ಸರ್ ನಿಮಗೆ ವಿವರಿಸಲಿದ್ದಾರೆ" ಎಂದು ಸುದೀಪ್ ತೆಲುಗು ಬಿಗ್‌ಬಾಸ್ ಮನೆಯ ಟಿವಿಗೆ ಬಂದು ಮಾತನಾಡಿದ್ದಾರೆ.
ಸೆಪ್ಟೆಂಬರ್ 7ರಂದು ಬಿಗ್‌ಬಾಸ್ ತೆಲುಗು ಸೀಸನ್ 9 ಆರಂಭವಾಗಿತ್ತು. 9 ಸೆಲೆಬ್ರೆಟಿಗಳು ಹಾಗೂ 6 ಮಂದಿ ಕಾಮನ್‌ಮ್ಯಾನ್‌ಗಳು ದೊಡ್ಮನೆ ಪ್ರವೇಶಿಸಿದ್ದರು. ಈಗಾಗಲೇ 6 ಮಂದಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಕನ್ನಡ ನಟ ಸಂಜನಾ ಗರ್ಲಾನಿ ಕೂಡ 20 ದಿನ ಮನೆಯಲ್ಲಿದ್ದು ಹೊರ ಬಂದಿದ್ದಾರೆ. ಇದೀಗ ವೈಲ್ಡ್ ಕಾರ್ಡ್ ಮೂಲಕ 6 ಮಂದಿ ಮನೆ ಪ್ರವೇಶಿಸಿದ್ದಾರೆ.
ರಮ್ಯಾ ಮೋಕ್ಷ, ಶ್ರೀನಿವಾಸ ಸಾಯಿ, ಮಾಧುರಿ ದಿವ್ವಾಲ, ನಿಖಿಲ್ ನಾಯರ್, ಐಶಾ ಝೀನತ್, ಗೌರವ್ ಗುಪ್ತ ಇದೀಗ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿದ್ದಾರೆ. ಇತ್ತ ಕನ್ನಡದಲ್ಲಿ ಬಿಗ್‌ಬಾಸ್ ಶೋ 2 ವೀಕೆಂಡ್ ಮುಗಿಸಿದೆ. ಸುದೀಪ್ 2ನೇ ಬಾರಿ ಪಂಚಾಯ್ತಿ ನಡೆಸಿ ದೊಡ್ಮನೆ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಚೆನ್ನಾಗಿ ಆಡಿದವರಿಗೆ ಮೆಚ್ಚುಗೆ ಸೂಚಿಸಿದ್ದು ತಪ್ಪು ಮಾಡಿದವರಿಗೆ ಚಾಟಿ ಬೀಸಿದ್ದಾರೆ.
ಈಗಾಗಲೇ ಅಮಿತ್ ಹಾಗೂ ಕರಿಬಸಪ್ಪ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇತ್ತೀಚೆಗೆ ಬಿಗ್‌ಬಾಸ್ ಮನೆಗೆ ಬೀಗಬಿದ್ದು ಗೊಂದಲ ಏರ್ಪಟ್ಟಿತ್ತು. ಸಮಸ್ಯೆ ಬಗೆಹರಿದ ಬಳಿಕ ವೀಕೆಂಡ್ ಎಪಿಸೋಡ್ ಚಿತ್ರೀಕರಣ ನಡೆದಿತ್ತು. ಕಳೆದ ವಾರ ಇಬ್ಬರು ಮನೆಯಿಂದ ಎಲಿಮಿನೇಟ್ ಆಗಿದ್ದರು. ಹಾಗಾಗಿ ಈ ವಾರ ಎಲಿಮಿನೇಷನ್ ಇರಲಿಲ್ಲ.


Click it and Unblock the Notifications










