Don't Miss!
- Technology
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೌತ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ 'ಚಕ್ರವ್ಯೂಹ'
ಹೀಗಾಗಿ, ಇಂದು ಜೆಪಿ ನಗರದಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ತಮ್ಮ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಂಡ ಸುದೀಪ್, ತಮ್ಮ ಅಭಿಮಾನಿಗಳೆಲ್ಲರನ್ನೂ ತಾವೇ ಸ್ವತಃ ಮಾತನಾಡಿಸುತ್ತಿರುವುದು ವಿಶೇಷ. ಜೊತೆಗೆ, ಮತ್ತೊಂದು ವಿಶೇಷವೆಂದರೆ ಸುದೀಪ್ ನಾಯಕತ್ವದ ಎಮ್ ಎನ್ ಕುಮಾರ್ ನಿರ್ಮಾಣದ 'ಚಕ್ರವ್ಯೂಹ' ಹೆಸರಿನ ಹೊಸ ಚತುರ್ಭಾಷಾ ಸಿನಿಮಾ ಇಂದು, ಸುದೀಪ್ ಹುಟ್ಟುಹಬ್ಬದ ದಿನ ಘೋಷಣೆಯಾಗಿದೆ.
ಇಂದು ಘೋಷಣೆಯಾದ ಹೊಸ ಚಿತ್ರ 'ಚಕ್ರವ್ಯೂಹ', ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಬಾಷೆಗಳಲ್ಲಿ ತಯಾರಾಗಲಿದ್ದು ನಂತರ ಇದನ್ನು ಹಿಂದಿಗೂ 'ಡಬ್' ಮಾಡಲಾಗುವುದು. ಅಂದಹಾಗೆ, ಕಿಚ್ಚ ಸುದೀಪ್ ಅಭಿನಯದ 'ವರದನಾಯಕ' ಬಿಡುಗಡೆಗೆ ಸಜ್ಜಾಗಿದ್ದರೆ 'ಬಚ್ಚನ್' ಚಿತ್ರೀಕರಣದ ಕೊನೆ ಹಂತದಲ್ಲಿದೆ. ಇದೀಗ ಹೊಸ ಚಿತ್ರದ ಘೋಷಣೆಯಾಗಿದೆ. ಇನ್ನೊಂದೆಡೆ, ತಮಿಳು ಹಾಗೂ ತೆಲುಗಿನಿಂದ ಆಫರ್ ಗಳ ಸುರಿಮಳೆಯಾಗುತ್ತಿದೆ.
ಮತ್ತೊಂದು ವಿಶೇಷವೆಂದರೆ, ಕಿಚ್ಚ ಸುದೀಪ್ ಇತ್ತೀಚಿಗೆ ಅಂದರೆ ಮೂರು ವಾರಗಳ ಕೆಳಗೆ ಹೊಸ 'ಜಾಗ್ವಾರ್' ಕಾರ್ ಖರೀದಿಸಿದ್ದಾರೆ. ಇದನ್ನು 'ಬರ್ತ್ ಡೇ ಗಿಫ್ಟ್' ಅಂದುಕೊಳ್ಳಲಾಗದಿದ್ದರೂ ಬರ್ತ್ ಡೇ ದಿನದಂದು ಈ ಕಾರ್ ಸುದೀಪ್ ಅವರಿಗೆ 'ಸಾಥ್' ನೀಡಿದ್ದಂತೂ ಸುಳ್ಳಲ್ಲ. ಒಟ್ಟಿನಲ್ಲಿ ಕನ್ನಡದ ಕಿಚ್ಚ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅವರಿಗೆ 'ಒನ್ ಇಂಡಿಯಾ ಕನ್ನಡ'ದ ಹುಟ್ಟುಹಬ್ಬದ ಶುಭಾಶಯಗಳು... (ಒನ್ ಇಂಡಿಯಾ ಕನ್ನಡ)